ಕರ್ನಾಟಕದ ಚಿತ್ರಮಂದಿರಗಳು ತುಂಬಿ ತುಳುಕುತ್ತಿವೆ. ಅದಕ್ಕೆ ಕಾರಣ 'ಪ್ರೇಮದ ಊರಲಿ' ಮೆರವಣಿಗೆ. ಮೂರನೇ ವಾರ ಕೂಡ ಎಲ್ಲೆಲ್ಲೂ ಹೌಸ್ಫುಲ್ ಪ್ರದರ್ಶನ ಕಾಣ್ತಿದೆ. ಈ ವಾರ ರಜನಿಕಾಂತ್ ನಟನೆಯ 'ಜೈಲರ್- 2' ಸಿನಿಮಾ ಬಿಡುಗಡೆ ಆಗ್ತಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿದೆ. ಇದೆಲ್ಲದರ ನಡುವೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮಹತ್ವಾಕಾಂಕ್ಷೆಯ 'ರಣಬಾಲಿ' ಚಿತ್ರ ಡಲ್ ಆಗಿದೆ.
ಎಲ್ಲಾ ಚಿತ್ರಮಂದಿರಗಳು ಸಿನಿಮಾಗಳಿಂದ ತುಂಬಿವೆ. ಇದೇ ಕಾರಣಕ್ಕೆ ಗಣೇಶ್ ನಟನೆಯ 'ಬೃಂದಾವಿಹಾರಿ' ಚಿತ್ರವನ್ನು ಒಂದು ತಿಂಗಳು ಮುಂದೂಡಲಾಗಿದೆ. ತೆಲುಗಿನ 'ಆದರ್ಶ ಕುಟುಂಬಂ' ಚಿತ್ರ ಕೂಡ ಈ ವಾರ ತೆರೆಗೆ ಬರಲಿಲ್ಲ. ಸತತ ಸೋಲುಗಳಿಂದ ಕಂಗೆಟ್ಟಿರುವ ವಿಜಯ್ ದೇವರಕೊಂಡ 'ರಣಬಾಲಿ' ಆಗಿ ಅಬ್ಬರಿಸೋಕೆ ಬರ್ತಿದ್ದಾರೆ. ಪತ್ನಿ ಅದೃಷ್ಟ ಕೂಡ ಕೈಹಿಡಿಯುತ್ತಾ ಕಾದು ನೋಡಬೇಕಿದೆ. ಕರ್ನಾಟಕದಲ್ಲಿ ಚಿತ್ರಕ್ಕೆ ಶೋಗಳು ನಿರೀಕ್ಷಿತ ಮಟ್ಟದಲ್ಲಿ ಸಿಕ್ತಿಲ್ಲ.
ಟ್ರಾಫಿಕ್ ಜಾಮ್
ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು 'ಪ್ರೇಮದ ಊರಲಿ' ಸಿನಿಮಾ ಆವರಿಸಿಕೊಂಡಿದೆ. ಇಷ್ಟು ದಿನ ಪರಭಾಷಾ ಚಿತ್ರಗಳು ಸದ್ದು ಮಾಡ್ತಿದ್ದ ಕಡೆಗಳಲ್ಲಿ ಕೂಡ ಈ ಹೊಸಬರ ಸಿನಿಮಾ ಮ್ಯಾಜಿಕ್ ಮಾಡಿದೆ. ಎಲ್ಲಾ ಶೋಗಳು ಹೌಸ್ಫುಲ್ ಆಗ್ತಿವೆ. 'ಜೈಲರ್'-2 ಚಿತ್ರಕ್ಕೂ ಶೋಗಳನ್ನು ಕೊಡಲು ಹಿಂದು ಮುಂದು ನೋಡ್ತಿದ್ದಾರೆ. ಇನ್ನು ಮಲ್ಟಿಪ್ಲೆಕ್ಸ್ಗಳಲ್ಲಿ 'ಜೈಲರ್'-2 ಚಿತ್ರಕ್ಕೆ ರತ್ನಗಂಬಳಿ ಹಾಸಲಾಗಿದೆ.
'ರಣಬಾಲಿ' ಮ್ಯಾಜಿಕ್ ಮಾಡ್ತಾನಾ ?
'ಪ್ರೇಮದ ಊರಲಿ' ಹಾಗೂ 'ಜೈಲರ್- 2' ಅಷ್ಟೇ ಅಲ್ಲ, 'ಹನುಮಾನ್ ಅಂಶ್', 'ದೃಶ್ಯಂ- 3', 'ಬತ್ತಾ' ಹೀಗೆ ಹಲವು ಸಿನಿಮಾಗಳು ಯಶಸ್ವಿ ಪ್ರದರ್ಶನ ಕಾಣ್ತಿದೆ. ಹಾಗಾಗಿ ಸದ್ಯಕ್ಕೆ ಬೇರೆ ಸಿನಿಮಾಗಳಿಗೆ ಸ್ಕ್ರೀನ್ ಕೊಡಲು ಯಾರು ಸಿದ್ಧರಿಲ್ಲ. ರಾಜ್ಯದಲ್ಲಿ 'ರಣಬಾಲಿ' ಬಗ್ಗೆ ಅಷ್ಟೇನು ನಿರೀಕ್ಷೆ ಇಲ್ಲ. ಹಾಗಾಗಿ ಕೆಲವೇ ಸ್ಕ್ರೀನ್ಗಳಲ್ಲಿ ಸಿನಿಮಾ ಬಿಡುಗಡೆ ಆಗ್ತಿದೆ. ತೆರೆಗೆ ಬಂದ ಬಳಿಕ ಏನಾದರೂ ಮ್ಯಾಜಿಕ್ ಮಾಡಿ ಸ್ಕ್ರೀನ್ಗಳನ್ನು ಹೆಚ್ಚಿಸಿಕೊಳ್ಳುತ್ತಾ ಕಾದು ನೋಡಬೇಕಿದೆ.