ಹೊಸಬರ 'ಪ್ರೇಮದ ಊರಲಿ' ಸಿನಿಮಾ ಬಾಕ್ಸಾಫೀಸ್ನಲ್ಲಿ ಆರ್ಭಟ ಹೆಚ್ಚಿಸುತ್ತಲೇ ಇದೆ. ದಸರಾ ಹಬ್ಬದ ರಜೆ ಚಿತ್ರಕ್ಕೆ ಹೆಚ್ಚಿನ ಬಲ ತುಂಬಿದೆ. ಈಗಾಗಲೇ ಚಿತ್ರದ ಕಲೆಕ್ಷನ್ 100 ಕೋಟಿ ರೂ. ಗಡಿ ದಾಟಿದೆ. ಸಿನಿಮಾ ತೆರೆಕಂಡು 27 ದಿನ ಕೂಡ ಗಂಟೆಗೆ 10 ಸಾವಿರ ಟಿಕೆಟ್ ಬುಕ್ ಆಗುವ ಮಟ್ಟಕ್ಕೆ ಸಿನಿಮಾ ಸದ್ದು ಮಾಡ್ತಿದೆ. ವಿಜಯದಶಮಿ ರಜೆಯ ಎಫೆಕ್ಟ್ ಇವತ್ತು ಬಾಕ್ಸಾಫೀಸ್ನಲ್ಲಿ ಗೊತ್ತಾಗಲಿದೆ.
ಕನ್ನಡದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 'ಪ್ರೇಮದ ಊರಲಿ' ಮೇಲೇರುತ್ತಲೇ ಇದೆ. ಇಡೀ ಪಟ್ಟಿಯಲ್ಲಿ ಹೊಸಬರ ಸಿನಿಮಾ ಅಂದ್ರೆ ಇದೇ ಎನ್ನಬಹುದು. ಸದ್ಯ 'ಕಾಟೇರ', '777 ಚಾರ್ಲಿ' ಚಿತ್ರಗಳ ದಾಖಲೆಯಲ್ಲಿ ಈ ಫೀಲ್ ಗುಡ್ ಸಿನಿಮಾ ಹಿಂದಿಕ್ಕಿದೆ. ಪಟ್ಟಿಯಲ್ಲಿ 'ಮುಂಗಾರುಮಳೆ', 'ರಾಜಕುಮಾರ', 'ಜೇಮ್ಸ್' ಸಿನಿಮಾಗಳಿಂತ ಮೇಲೆರಿದೆ.
120 ಕೋಟಿ ಗಳಿಕೆ
ಈಗಾಗಲೇ 'ಪ್ರೇಮದ ಊರಲಿ' ಸಿನಿಮಾ 120 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಇವತ್ತು ಕೂಡ ಸಿನಿಮಾ 4-5 ಕೋಟಿ ರೂ. ಕೊಳ್ಳೆ ಹೊಡೆಯುವ ಸುಳಿವು ಸಿಕ್ಕಿದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಕೂಡ ಆರ್ಭಟ ಮುಂದುವರೆದಿದೆ. 90 ಕೋಟಿ ರೂ. ಗಳಿಸಿದ್ದ ಮಲ್ಟಿಸ್ಟಾರರ್ ಕುರುಕ್ಷೇತ್ರ ಹಾಗೂ 105 ಕೋಟಿ ರೂ. ಬಾಚಿದ್ದ '777 ಚಾರ್ಲಿ' ದಾಖಲೆ ಅಳಿಸಿ ಹಾಕಿದೆ. 125 ಕೋಟಿ ರೂ. ಗ್ರಾಸ್ ಕಲೆಕ್ಷನ್ ಆಡಿದ್ದ 'ಸು ಫ್ರಂ ಸೋ' ದಾಖಲೆ ಕೂಡ ಇವತ್ತು ಹಳೆಯದಾಗಲಿದೆ. ವಿಕಿಪಿಡಿಯ ಪ್ರಕಾರ..
ಅತಿಹೆಚ್ಚು ಗಳಿಕೆ ಕಂಡ ಕನ್ನಡ ಸಿನಿಮಾಗಳ ಪಟ್ಟಿ
- KGF -2 (1200 ಕೋಟಿ ರೂ.)
2. ಕಾಂತಾರ-1 (850-852 ಕೋಟಿ ರೂ.)
3. ಕಾಂತಾರ (400-450 ಕೋಟಿ ರೂ.)
4. ಟಾಕ್ಸಿಕ್ (342 ಕೋಟಿ ರೂ.)
5. KGF- 1 (250 ಕೋಟಿ ರೂ.)
6. ವಿಕ್ರಾಂತ್ ರೋಣ (150-160 ಕೋಟಿ ರೂ.)
7. ಜೇಮ್ಸ್ (151 ಕೋಟಿ ರೂ.)