ಕನ್ನಡ ಚಿತ್ರರಂಗದಲ್ಲಿ ನಿಂತು ಕುಂತ್ರು ಈಗ 'ಪ್ರೇಮದ ಊರಲಿ' ಜಪ ಶುರುವಾಗಿದೆ. ಹೊಸಬರ ತಂಡವೊಂದು ತೆರೆಮೇಲೆ ಅಕ್ಷರಶಃ ಮ್ಯಾಜಿಕ್ ಮಾಡಿದೆ. ಒಂದಷ್ಟು ನ್ಯೂನ್ಯತೆಗಳ ಹೊರತಾಗಿಯೂ ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಿದೆ. ಎಲ್ಲೆಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಎರಡನೇ ವಾರಾಂತ್ಯದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.
ಆರಂಭದಲ್ಲಿ ಬರೀ ಲಕ್ಷಗಳಲ್ಲಿ ಗಳಿಕೆ ಕಾಣುತ್ತಿದ್ದ ಸಿನಿಮಾ ಎರಡನೇ ವಾರ ಕೋಟಿಗಳಲ್ಲಿ ಗಟ್ಟಿಪೆಟ್ಟಿಗೆ ದೋಚುತ್ತಿದೆ. ಹತ್ತಾರು ಕೋಟಿ ಅಲ್ಲದೇ ಇದ್ದರೂ ಬಜೆಟ್‌ಗೆ ಹೋಲಿಸಿದರೆ ಕಲೆಕ್ಷನ್ ಅದ್ಭುತ ಎನ್ನುವಂತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡ ಸಿನಿಮಾಗಳನ್ನು ನೋಡಲು ಹಿಂದೇಟು ಹಾಕುತ್ತಿದ್ದವರು ಫ್ಯಾಮಿಲಿ ಸಮೇತ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಎರಡನೇ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಸಿನಿಮಾ ಶೋಗಳೆಲ್ಲಾ ಹೌಸ್‌ಫುಲ್ ಆಗಿದ್ದು ವಿಶೇಷ.
ನಿಧಾನವಾಗಿ ಹೊರರಾಜ್ಯಗಳಲ್ಲಿ ಕೂಡ 'ಪ್ರೇಮದ ಊರಲಿ' ಸಿನಿಮಾ ಸದ್ದು ಮಾಡ್ತಿದೆ. ತೆಲುಗಿಗೆ ಡಬ್ ಆಗಿ ಆಂಧ್ರ, ತೆಲಂಗಾಣದಲ್ಲಿ ಸಿನಿಮಾ ಬಿಡುಗಡೆಯಾಗಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರವನ್ನು ಅಲ್ಲಿನ ಪ್ರೇಕ್ಷಕರು, ವಿಮರ್ಶಕರು ಹಾಡಿ ಹೊಗಳುತ್ತಿದ್ದಾರೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರಚಾರ ಹಾಗೂ ಸ್ಕ್ರೀನ್‌ಗಳು ಸಿಕ್ತಿಲ್ಲ. ಇನ್ನು ಇದೇ ಶುಕ್ರವಾರದಿಂದ ದೇಶವಿದೇಶಗಳಲ್ಲಿ 'ಪ್ರೇಮದ ಊರಲಿ' ಸಿನಿಮಾ ಬಿಡುಗಡೆ ಆಗ್ತಿದೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ವಿಶ್ವದಾದ್ಯಂತ ಸಿನಿಮಾ ವಿತರಣೆ ಹಕ್ಕು ಕೊಂಡುಕೊಂಡಿದ್ದು ಅನಿಲ್ ಥದಾನಿ ಮೂಲಕ ಉತ್ತರ ಭಾರತದಲ್ಲಿ ಸಿನಿಮಾ ತೆರೆಗಪ್ಪಳಿಸಲು ಸಜ್ಜಾಗಿದೆ
ತಮಿಳುನಾಡಿನಲ್ಲಿ ಕ್ರೇಜ್
ಕರ್ನಾಕಟದಲ್ಲಿ ಕನ್ನಡ ಸಿನಿಮಾ ನೋಡಲ್ಲ ಎನ್ನುವ ಆರೋಪ ಇದೆ. ಆದರೆ ಪಕ್ಕದ ತಮಿಳುನಾಡಿನಲ್ಲಿ ಕೂಡ 'ಪ್ರೇಮದ ಊರಲಿ' ಸಿನಿಮಾ ಸದ್ದು ಮಾಡ್ತಿದೆ. ಕರ್ನಾಟಕದ ಗಡಿಯಲ್ಲಿರುವ ಹೊಸೂರಿನ ಗ್ರ್ಯಾಂಡ್ ಸಿನಿಮಾಸ್ ಚಿತ್ರಮಂದಿರದಲ್ಲಿ ಸಿನಿಮಾ ಕನ್ನಡದಲ್ಲೇ ಭರ್ಜರಿ ಪ್ರದರ್ಶನ ಕಾಣ್ತಿದೆ. ಬೇಡಿಕೆ ನೋಡಿ ಭಾನುವಾರ(ಅಕ್ಟೋಬರ್ 4) ಬೆಳಗ್ಗೆ 6.15ಕ್ಕೆ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಅದಕ್ಕೂ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಇನ್ನುಳಿದಂತೆ ಶುಕ್ರವಾರ, ಶನಿವಾರ ಹಾಗೂ ಭಾನುವಾರದ ಶೋಗಳೆಲ್ಲಾ ಭರ್ತಿ ಆಗಿತ್ತು. ಬೆಂಗಳೂರಿನ ಕೆಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಹ ಭಾನುವಾರ ಬೆಳಗ್ಗೆ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.
10ನೇ ದಿನದ ಕಲೆಕ್ಷನ್
ದಿನದಿಂದ ದಿನಕ್ಕೆ 'ಪ್ರೇಮದ ಊರಲಿ' ಸಿನಿಮಾ ಕಲೆಕ್ಷನ್ ಹೆಚ್ಚಿಸಿಕೊಂಡು ಬರ್ತಿದೆ. ಭಾನುವಾರ 3.85 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿ ಗಮನ ಸೆಳೆದಿದೆ. ಈವರೆಗೆ 16.96 ಕೋಟಿ ರೂ. ಗ್ರಾಸ್ ಜೊತೆಗೆ 14.57 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೇಗೆ ಸದ್ದು ಮಾಡ್ತಿದೆ ಎನ್ನುವುದು ಹೌಸ್‌ಫುಲ್ ಶೋಗಳನ್ನು ನೋಡಿದರೆ ಅರ್ಥವಾಗುತ್ತದೆ.
ಸಿಂಗಲ್ ಸ್ಕ್ರೀನ್‌ಗಳಲ್ಲಿ ಹವಾ
ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾತ್ರವಲ್ಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಕೂಡ 'ಪ್ರೇಮದ ಊರಲಿ' ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ವರ್ಷವಿಡೀ ಪರಭಾಷಾ ಸಿನಿಮಾಗಳ ಆರ್ಭಟ ಜೋರಾಗಿರುವ ಹೊಂಗಸಂದ್ರದ ಬೃಂದಾ ರೀತಿಯ ಚಿತ್ರಮಂದಿರಗಳಲ್ಲಿ ಕೂಡ ಈ ಸಿನಿಮಾ ದಾಖಲೆ ಬರೆದಿದೆ. ಅಲ್ಲಿ ವಾರಾಂತ್ಯದ ಎಲ್ಲಾ ಶೋಗಳು ಹೌಸ್‌ಫುಲ್ ಆಗಿತ್ತು.
#PremadaOorali
— Grand Cinemas (@cinemas_grand) October 3, 2026
EMS added on 4.10.26[Sunday] at 6:15 am due to huge demand.
Advances open now.
Ticket price-Rs.150 only. #GrandCinemasHosur #districtbyzomato #ticketnew @KA_Talkies @KABoxOffice1 @NamCinema @filmycorner9 @Kannada_BO @PopcornKannada pic.twitter.com/qsbvPqspSF
Sensational blcokbuster movie 'Premadha Oorali' movie today B2B 3 shows Houseful🔥📈
— Brundha RGB Laser 4K Projection (@Brundha4k_atmos) October 4, 2026
Premada Oorali - Kannada - 3 shows
01:00 PM
07:00 PM
10:15 PM
Book tickets now on 'BOOK MY SHOW' 🎫
📍 Brundha Theatre, Bengaluru.#brundhatheatre #premadaoorali #Kannada #movie pic.twitter.com/ov7hpYXUQT