ತೆಲುಗು ನಟಿ ಸಮಂತಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಾಗಚೈತನ್ಯಾ ಹಾಗೂ ಸ್ಯಾಮ್ ಡಿವೋರ್ಸ್ ಪಡೆದಿದ್ದರು. ಬಳಿಕ ಆಕೆ ನಿರ್ದೇಶಕ ರಾಜ್ ನಿಡುಮೋರು ಜೊತೆ ಎರಡನೇ ಮದುವೆ ಆಗಿದ್ದರು. ಶೀಘ್ರದಲ್ಲೇ ದಂಪತಿ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ. ತಮ್ಮ ಪ್ರೆಗ್ನೆನ್ಸಿ ಬಗ್ಗೆ THR India ಮ್ಯಾಗಜೀನ್ ಸಂದರ್ಶನದಲ್ಲಿ ಸಮಂತಾ ಮಾತನಾಡಿದ್ದಾರೆ.
ನಾನು ಹಾಗೂ ರಾಜ್ ಮಕ್ಕಳು ಇಲ್ಲದೇ ಇದ್ದರೂ ಪರವಾಗಿಲ್ಲ ಎಂದುಕೊಂಡಿದ್ದೆವು. ಮಗುವಿಗೆ ಪ್ಲ್ಯಾನ್ ಕೂಡ ಮಾಡಿರಲಿಲ್ಲ. ದಿಢೀರನೆ ವಿಷಯ ಗೊತ್ತಾದಾಗ ಅಚ್ಚರಿಯಾಗಿತ್ತು ಎಂದು ಸಮಂತಾ ತಿಳಿಸಿದ್ದಾರೆ. 'ಮಾ ಇಂಟಿ ಬಂಗಾರಂ' ಚಿತ್ರದ 'ಥಸ್ಸದ್ದಿಯಾ' ಹಾಡಿನ ಚಿತ್ರೀಕರಣದ ವೇಳೆ ಕೊಂಚ ಆಯಾಸವಾದಂತೆ ಆಗಿತ್ತು. ವೈದ್ಯರ ಬಳಿ ಪರೀಕ್ಷಿಸಿದಾಗ ನಾನು ಗರ್ಭಣಿ ಆಗಿರುವುದು ವಿಷಯ ಗೊತ್ತಾಯಿತು. ನಿಜಕ್ಕೂ ಆಶ್ಚರ್ಯವಾಗಿತ್ತು. ಈಗ ಉತ್ಸುಕಳಾಗಿದ್ದೇನೆ. ಒಂದು ಮಗು ಜೀವನವನ್ನೇ ಬದಲಾಯಿಸುತ್ತದೆ ಎಂದು ಎಲ್ಲರೂ ಹೇಳ್ತಾರೆ.. ಆ ಬದಲಾವಣೆಗೆ ನಾನು ಸಿದ್ಧಳಾಗಿದ್ದೇನೆ ಅನ್ನಿಸುತ್ತೆ" ಎಂದು ವಿವರಿಸಿದ್ದಾರೆ.
ನಾನು, ರಾಜ್ ಮಕ್ಕಳು ಇಲ್ಲದಿದ್ದರೂ ಓಕೆ ಅಂದುಕೊಂಡಿದ್ದೆವು. ಆದ್ರೆ ಹೀಗೆ ಗರ್ಭಿಣಿ ಆಗ್ತೀನಿ ಎಂದುಕೊಂಡಿರಲಿಲ್ಲ. ನಿಜಕ್ಕೂ ಅಚ್ಚರಿ ಎನಿಸಿತ್ತು. ಗಂಡು ಮಗು, ಹೆಣ್ಣು ಮಗು ಯಾವುದಾದರೂ ಸರಿ ಅವರಿಗೆ ಶಾಪಿಂಗ್ ಮಾಡಬೇಕು. ಮಗುವಿಗೆ ಯಾವ ಹೆಸರು ಇಡಬೇಕು ಎಂದು ಈಗಾಗಲೇ ನಿರ್ಧರಿಸಿದ್ದೇವೆ ಎಂದು ಸ್ಯಾಮ್ ತಿಳಿಸಿದ್ದಾರೆ. ಜೂನ್ 19ಕ್ಕೆ 'ಮಾ ಇಂಟಿ ಬಂಗಾರಂ' ಸಿನಿಮಾ ತೆರೆಗೆ ಬಂದಿತ್ತು. ನಂದಿನಿ ರೆಡ್ಡಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.
'ಫ್ಯಾಮಿಲಿಮ್ಯಾನ್- 2' ವೆಬ್ ಸೀರಿಸ್ ಚಿತ್ರೀಕರಣದ ವೇಳೆ ಸ್ಯಾಮ್ ಹಾಗೂ ರಾಜ್ ಪರಿಚಯವಾಗಿತ್ತು. ಅದಾಗಲೇ ರಾಜ್ ನಿಡುಮೊರು ಕೂಡ ಬೇರೆ ಮದುವೆ ಆಗಿದ್ದರು. ನಾಗಚೈತನ್ಯಾ ಹಾಗೂ ಸಮಂತಾ ದೂರಾದ ಬಳಿಕ 'ಸಿಟಾಡೆಲ್' ವೆಬ್ ಸೀರಿಸ್‌ನಲ್ಲಿ ಆಕೆ ನಟಿಸಿದ್ದರು. ರಾಜ್ ಜೊತೆ ಮತ್ತೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಬಳಿಕ ಇಬ್ಬರೂ ಮದುವೆ ಆಗಲು ನಿರ್ಧರಿಸಿದ್ದರು. ಡಿಸೆಂಬರ್‌ನಲ್ಲಿ ಇಶಾ ಫೌಂಡೇಷನ್ ಆಲಯದಲ್ಲಿ ಸದ್ದಿಲ್ಲದೇ ಮದುವೆ ನಡೆದಿತ್ತು.
'ಮಾ ಇಂಟಿ ಬಂಗಾರಂ' ಚಿತ್ರವನ್ನು ಸ್ವತಃ ಸಮಂತಾ ನಿರ್ಮಿಸಿ ನಟಿಸಿದ್ದರು. ಪತಿ ರಾಜ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಮೇಲ್ವಿಚಾರಣೆ ವಹಿಸಿದ್ದರು. ಚಿತ್ರದ ಪ್ರಚಾರದ ವೇಳೆ ಸಮಂತಾ ಗರ್ಭಿಣಿ ಆಗಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ನಿರ್ದೇಶಕಿ ನಂದಿನಿ ರೆಡ್ಡಿ ಅದನ್ನು ಖಚಿತಪಡಿಸಿದ್ದರು. ಸಕ್ಸಸ್ ಮೀಟ್ ವೇಳೆ ಸ್ಯಾಮ್ ಗುಡ್ ನ್ಯೂಸ್ ಹಂಚಿಕೊಂಡಿದ್ದರು. ಅಂದಹಾಗೆ ಚಿತ್ರದ ಸೀಕ್ವೆಲ್ ಮಾಡುವುದಾಗಿಯೂ ಚಿತ್ರತಂಡ ಹೇಳಿದೆ.