ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಈಗ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ವೀಕ್ಷಕರನ್ನು ರಂಜಿಸ್ತಿದೆ. ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಸ್ನೇಹ, ಜಗಳ, ಲವ್ ಕೂಡ ಗೊತ್ತೇಯಿದೆ. ಆದರೆ ಇದೀಗ ದೊಡ್ಮನೆ ಒಳಗೆ ಏಕಾಏಕಿ ಎಂಗೇಜ್ಮೆಂಟ್ ನಡೆದುಬಿಟ್ಟಿದೆ.

ಸದ್ಯ ಬಿಗ್‌ಬಾಸ್ ತೆಲುಗು ಸೀಸನ್ 10 ನಡೀತಿದೆ. ಈ ವಾರ ಫ್ಯಾಮಿಲಿ ರೌಂಡ್ ಶುರುವಾಗಿದೆ. ಪ್ರೇಮಿಗಳಿಬ್ಬರು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಎಮೋಷನಲ್ ಆಗಿ ಎಪಿಸೋಡ್‌ಗಳು ಮೂಡಿ ಬರ್ತಿದೆ. ಕಾಮಿಡಿ, ಟಾಸ್ಕ್, ಫನ್, ಎಮೋಷನ್ ನಡುವೆ ಲವ್, ಎಂಗೇಜ್ಮೆಂಟ್ ಕೂಡ ವೀಕ್ಷಕರಿಗೆ ಸರ್‌ಪ್ರೈಸ್ ನೀಡಿದೆ.

ಈ ಬಾರಿ ತೆಲುಗು ಬಿಗ್‌ಬಾಸ್ ಶೋನಲ್ಲಿ ಶಿವಕುಮಾರ್ ಎಂಬ ಸ್ಪರ್ಧಿ ಪಾಲ್ಗೊಂಡಿದ್ದಾರೆ. ಆದರೆ ಸೀಸನ್ 7ರಲ್ಲಿ ಕಿರುತೆರೆ ನಟಿ ಪ್ರಿಯಾಂಕ ಜೈನ್ ಗಮನ ಸೆಳೆದಿದ್ದಾರೆ. ಈ ಬಾರಿ ಆಕೆ ದೊಡ್ಮನೆ ಒಳಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಶಿವಕುಮಾರ್ ಹಾಗೂ ಪ್ರಿಯಾಂಕ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಇದೀಗ ಬಿಗ್‌ಬಾಸ್ ಮನೆಯಲ್ಲೇ ಎಂಗೇಜ್‌ಮೆಂಟ್ ಮಾಡಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಶಿವ್ ಹಾಗೂ ಪ್ರಿಯಾಂಕ ಎಂಗೇಜ್ಮೆಂಟ್‌ಗೆ ಬಿಗ್‌ಬಾಸ್ ಆಯೋಜಕರು ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಮನೆ ಒಳಗೆ ಸರ್‌ಪ್ರೈಸ್ ಆಗಿ ಹೋಗಿರುವ ಪ್ರಿಯಾಂಕಳನ್ನು ನೋಡಿ ಶಿವ್ ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಬಳಿಕ ಆತನಿಗೆ ಹೊಸ ಬಟ್ಟೆ ಕೊಟ್ಟು ಧರಿಸಿ ಬರಲು ಹೇಳಿದ್ದಾರೆ. ಬಿಗ್‌ಬಾಸ್ ಇತಿಹಾಸದಲ್ಲೇ ಮೊದಲು ನಾವು ಈ ಮನೆಯಲ್ಲೇ ಎಂಗೇಜ್ಮೆಂಟ್ ಮಾಡಿಕೊಳ್ತೀವಿ ಎಂದು ಪ್ರಿಯಾಂಕ ಹೇಳಿದ್ದಾರೆ. ಇದನ್ನು ಕೇಳಿ ಮನೆ ಮಂದಿ ಹುಬ್ಬೇರಿಸಿದ್ದಾರೆ. ಇಬ್ಬರೂ ಉಂಗುರ ಬದಲಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರೋಮೊ ವೈರಲ್ ಆಗ್ತಿದೆ.

ಬೆಳಗಾವಿ ಮೂಲದ ಶಿವಕುಮಾರ್ ಕನ್ನಡದ 'ನಾಗಕನ್ನಿಕೆ' ಧಾರಾವಾಹಿಯಲ್ಲಿ ನಟಿಸಿದ್ದರು. ಬಳಿಕ ತೆಲುಗು ಧಾರಾವಾಹಿಗಳ ಕಡೆ ಮುಖ ಮಾಡಿದ್ದರು. 'ಮೌನ ರಾಗಂ' ಎಂಬ ಧಾರಾವಾಹಿಯಲ್ಲಿ ಪ್ರಿಯಾಂ ಜೈನ್ ನಟಿಸಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದಾರೆ. ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಕೂಡ ಇದ್ದಾರೆ. ಇದೀಗ ಬಿಗ್‌ಬಾಸ್ ಮನೆಯಲ್ಲಿ ಉಂಗುರು ಬದಲಿಸಿಕೊಂಡು ಮದುವೆಗೆ ಸಜ್ಜಾಗಿದ್ದಾರೆ.