ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳ ಹವಾ ಜೋರಾಗಿದೆ. 'ಸಿಟಿಲೈಟ್ಸ್', 'ಬೇಲ್' ಹಾಗೂ 'ಪ್ರೇಮದ ಊರಲಿ' ಸಿನಿಮಾಗಳು ಭರ್ಜರಿ ಪ್ರದರ್ಶನ ಕಾಣ್ತದೆ. ಅದರಲ್ಲೂ 'ಪ್ರೇಮದ ಊರಲಿ' ದೇಶಾದ್ಯಂತ ಟ್ರೆಂಡ್ ಆಗ್ತಿದೆ. ಇತ್ತ ಓಟಿಟಿಯಲ್ಲಿ ಈ ವಾರ ಇಂಟ್ರೆಸ್ಟಿಂಗ್ ಸಿನಿಮಾಗಳು ಸ್ಟ್ರೀಮಿಂಗ್ ಆಗ್ತಿದೆ.
ಮುಂದಿನ ವಾರ ದಸರಾ ಸಂಭ್ರಮದಲ್ಲಿ ಒಂದಷ್ಟು ದೊಡ್ಡ ಸಿನಿಮಾಗಳು ಬಿಡುಗಡೆಗೆ ಅಣಿಯಾಗಿದೆ. 'ಜೈಲರ್- 2', 'ರಣಬಾಲಿ', 'ಬೃಂದಾವಿಹಾರಿ' ಸಿನಿಮಾಗಳು ಈ ಲಿಸ್ಟ್‌ನಲ್ಲಿದೆ. ಒಂದ್ಕಡೆ ಚಿತ್ರಮಂದಿರ ಮತ್ತೊಂದು ಕಡೆ ಓಟಿಟಿಯಲ್ಲಿ ಸಿನಿರಸಿಕರಿಗೆ ಭರ್ಜರಿ ಮನರಂಜನೆ ಕಾದಿದೆ. ನೆಟ್‌ಫ್ಲಿಕ್ಸ್, ಪ್ರೈಂ ವೀಡಿಯೋ, ಜಿಯೋ ಹಾಟ್‌ಸ್ಟರ್ ಹಾಗೂ ಜೀ5ನಲ್ಲಿ ಈ ವಾರ ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗುತ್ತೆ? ಮುಂದೆ ಓದಿ..
ವೀಡಿಯೋ
ಶ್ರೀನಿಧಿ ಬೆಂಗಳೂರು ನಿರ್ದೇಶನದ 'ವೀಡಿಯೋ' ಸಿನಿಮಾ ಇತ್ತೀಚೆಗೆ ತೆರೆಕಂಡು ಒಳ್ಳೆ ರೆಸ್ಪಾನ್ಸ್ ಪಡೆದಿತ್ತು. ಆದರೆ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲಿಲ್ಲ. ಅಕ್ಟೋಬರ್ 9ರಂದು ಅಮೇಜಾನ್ ಪ್ರೈಂನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಕನ್ನಡ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಡಬ್ ಆಗಿ ವೀಕ್ಷಣೆಗೆ ಸಿಗಲಿದೆ. ಭರತ್ ಕೆ ತುಮಕೂರು, ಜೀವನ್ ಶಿವಕುಮಾರ್, ತೇಜೇಶ್ ಎಸ್ ಮಂಜುನಾಥ್ ಮತ್ತು ಪ್ರಿಯಾ ಜೆ ಆಚಾರ್ ಚಿತ್ರದಲ್ಲಿ ನಟಿಸಿದ್ದಾರೆ.
ಪ್ರಧಮ ದೃಷ್ಟಿಯ ಕುಟ್ಟಕ್ಕರ್
ಮಲಯಾಳಂ ಕ್ರೈಂ ಥ್ರಿಲ್ಲರ್ 'ಪ್ರಧಮ ದೃಷ್ಟಿಯ ಕುಟ್ಟಕ್ಕರ್' ಸಿನಿಮಾ ತಿಂಗಳಿಗೂ ಮುನ್ನ ಓಟಿಟಿಗೆ ಬರ್ತಿದೆ. ಅಕ್ಟೋಬರ್ 9ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ನೋಡಬಹುದು. ಕನ್ನಡಕ್ಕೂ ಡಬ್ ಆಗಿ ಸಿನಿಮಾ ರಿಲೀಸ್ ಆಗಲಿದೆ. ಶಹದ್ ನಿಲಂಬೂರ್ ನಿರ್ದೇಶನದ ಚಿತ್ರದಲ್ಲಿ ಪಾರ್ವತಿ ತಿರುವೋತು, ಮ್ಯಾಥ್ಯೂ ಥಾಮಸ್, ಉನ್ನಿಮಯ ಪ್ರಸಾದ್ ಮತ್ತು ಸಿದ್ಧಾರ್ಥ್ ಭರತನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಓಟಿಟಿಯಲ್ಲಿ ನೋಡಲು ಸಾಕಷ್ಟು ಜನ ಕಾಯ್ತಿದ್ದಾರೆ.
ಮಂಡಾಡಿ
ತಮಿಳಿನ ಲೇಟೆಸ್ಟ್ ಸೆನ್ಸೇಷನಲ್ ಸಿನಿಮಾ 'ಮಂಡಾಡಿ' ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಆರಂಭವಾಗಿದೆ. ಸೂರಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಬಾಕ್ಸಾಫೀಸ್‌ನಲ್ಲಿ 150 ಕೋಟಿ ರೂ. ಕೊಳ್ಳೆ ಹೊಡೆದಿತ್ತು. ಇದೀಗ ಸ್ಮಾಲ್ ಸ್ಕ್ರೀನ್‌ನಲ್ಲಿ ಸದ್ದು ಮಾಡ್ತಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಅಕ್ಟೋಬರ್ 8ರಿಂದ ಸಿನಿಮಾ ವೀಕ್ಷಣೆಗೆ ಸಿಗ್ತಿದೆ.
ಹಾಟ್‌ಸ್ಟರ್
- ಷೆರಿಫ್ ಕಂಟ್ರಿ ಸೀಸನ್- 2(ಇಂಗ್ಲೀಷ್ ವೆಬ್ ಸೀರಿಸ್) ಅಕ್ಟೋಬರ್ 9
- ಮಾರ್ಷೆಲ್ ಕಾಂಬಾಟ್(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 8
- ಟ್ರೆಷರ್ ಐಲ್ಯಾಂಡ್ (ಇಂಗ್ಲೀಷ್ ವೆಬ್ ಸೀರಿಸ್) ಅಕ್ಟೋಬರ್ 11
- ಪತಿ ಪತ್ನಿ ಔರ್ ಪಂಗಾ ಸೀಸನ್- 2 (ಹಿಂದಿ ರಿಯಾಲಿಟಿ ಶೋ) ಅಕ್ಟೋಬರ್ 10
ನೆಟ್‌ಫ್ಲಿಕ್ಸ್
- ಇನ್‌ಸೈಡ್ ದಿ ಸರ್ಕಲ್(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 7
- ಬಿಲೋ (ಇಂಗ್ಲೀಷ್ ವೆಬ್ ಸೀರಿಸ್) ಅಕ್ಟೋಬರ್ 8
- ಎಪಿಕ್(ತೆಲುಗು ಸಿನಿಮಾ) ಅಕ್ಟೋಬರ್ 9
- ಅನಿಮಲ್ಸ್ (ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 9
- ಹಂಟೆಡ್ ಹೋಟೆಲ್ ಸೀಸನ್-2 (ಇಂಗ್ಲೀಷ್ ಸೀರಿಸ್) ಅಕ್ಟೋಬರ್ 9
- ರಿಪೋರ್ಟಿಂಗ್ ಲೈವ್(ಹಿಂದಿ ಸಿನಿಮಾ) ಅಕ್ಟೋಬರ್ 9
ಪ್ರೈಂ ವೀಡಿಯೋ
- ಸ್ಪೈಡರ್‌ಮ್ಯಾನ್: ಬ್ರ್ಯಾಂಡ್ ನ್ಯೂ ಡೇ(ಬಾಡಿಗೆಗೆ)ಅಕ್ಟೋಬರ್ 6
- ಇಷ್ಕಾ ಇಷ್ಕಾ(ಹಿಂದಿ ಸೀರಿಸ್) ಅಕ್ಟೋಬರ್ 7