ಚಿತ್ರಮಂದಿರಗಳಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸ್ತಿವೆ. ಓಟಿಟಿಗೆ ಬಂದರೂ 'ಇರುಮುಡಿ' ಸಿನಿಮಾ ಚಿತ್ರಮಂದಿರಗಳಲ್ಲಿ ಸದ್ದು ಮಾಡ್ತಿದೆ. ಕನ್ನಡದ 'ಸಿಟಿಲೈಟ್ಸ್', 'ಪ್ರೇಮದ ಊರಲಿ', ತೆಲುಗಿನ 'ದಿ ಪ್ಯಾರಡೈಸ್' ಸಿನಿಮಾ ಕೂಡ ಯಶಸ್ವಿ ಪ್ರದರ್ಶನ ಕಾಣ್ತಿದೆ. ಈ ವಾರ ಶಿವಣ್ಣ ನಟನೆಯ 'ಬೇಲ್' ಹಾಗೂ ತಮಿಳಿನ 'ಸಿಗ್ಮಾ' ಸಿನಿಮಾಗಳು ತೆರೆಗೆ ಬರ್ತಿದೆ.
ಇತ್ತ ಓಟಿಟಿಯಲ್ಲಿ ಇಂಟ್ರೆಸ್ಟಿಂಗ್ ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸಲಿವೆ. ಮಲಯಾಳಂ ಬ್ಲಾಕ್‌ಬಸ್ಟರ್ ಸಿನಿಮಾ 'ಬೆತ್ಲೆಹೇಮ್ ಕುಡುಂಬ ಯೂನಿಟ್' ಕೂಡ ಲಿಸ್ಟ್‌ನಲ್ಲಿದೆ. ಡಾಲಿ ಧನಂಜಯ್ ನಿರ್ಮಿಸಿ ನಟಿಸಿರುವ 'ಮದರ್ ಪ್ರಾಮಿಸ್' ಸಿನಿಮಾ ಸಹ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡಲಿದೆ. ಬೇರೆ ಯಾವೆಲ್ಲಾ ಸಿನಿಮಾಗಳನ್ನು ಈ ವಾರ ಓಟಿಟಿಯಲ್ಲಿ ನೋಡಬಹುದು.. ಮುಂದೆ ಓದಿ.
'ಬೆತ್ಲೆಹೇಮ್ ಕುಡುಂಬ ಯೂನಿಟ್'
ಬರೋಬ್ಬರಿ 325 ಕೋಟಿ ರೂ. ಕಲೆಕ್ಷನ್ ಮಾಡಿ ಮಲಯಾಳಂ ಚಿತ್ರರಂಗದಲ್ಲಿ ದಾಖಲೆ ಬರೆದ ಸಿನಿಮಾ 'ಬೆತ್ಲೆಹೇಮ್ ಕುಡುಂಬ ಯೂನಿಟ್'. ನಿವಿನ್ ಪೌಲಿ ಹಾಗೂ ಕಯಾದು ಲೊಹರ್ ನಟನೆಯ ರೊಮ್ಯಾಂಟಿಕ್ ಕಾಮೆಡಿ ಸಿನಿಮಾ ಈ ವಾರ ಓಟಿಟಿಗೆ ಬರ್ತಿದೆ. ಜಿಯೋ ಹಾಟ್‌ಸ್ಟರ್‌ನಲ್ಲಿ ಅಕ್ಟೋಬರ್ 2ರಂದು ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಕನ್ನಡ ಸೇರಿ 5 ಭಾಷೆಗಳಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.
ಮದರ್ ಪ್ರಾಮಿಸ್
ಪೂರ್ಣಚಂದ್ರ ಮೈಸೂರು ನಿರ್ದೇಶನದ ಗ್ಯಾಂಗ್‌ಸ್ಟರ್ ಕಾಮಿಡಿ ಸಿನಿಮಾ 'ಮದರ್ ಪ್ರಾಮಿಸ್' ಜೀ-5ನಲ್ಲಿ ಬಿಡುಗಡೆಗೆ ಅಣಿಯಾಗಿದೆ. ಅಕ್ಟೋಬರ್ 2ರಂದು ಮನೆಯಲ್ಲೇ ಕೂತು ಸಿನಿಮಾ ನೋಡಬಹುದು. ಡಾಲಿ ಧನಂಜಯ್ ಸಿನಿಮಾ ನಿರ್ಮಿಸುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿ. ಗುರುದತ್, ವಿನಯ ಪ್ರಸಾದ್, ಗೀತಾ ಚಿತ್ರದ ತಾರಾಗಣದಲ್ಲಿದ್ದಾರೆ.
ಪ್ರೈಂ ವೀಡಿಯೊ
- ದುಪಾಯಿಯಾ ಸೀಸನ್-2(ಹಿಂದಿ ಸೀರಿಸ್) ಅಕ್ಟೋಬರ್ 1
ಜೀ- 5
- ಪೂಜಾ ಮೇರಿ ಜಾನ್ (ಹಿಂದಿ ಸಿನಿಮಾ) ಅಕ್ಟೋಬರ್ 2
- ಈವಿಲ್ ಡೆಡ್ ಬರ್ನ್ (ಹಾಲಿವುಡ್ ಸಿನಿಮಾ) ಅಕ್ಟೋಬರ್ 2
- ಪಂಥಡಿಕಮ್(ಮಲಯಾಳಂ ಸೀರಿಸ್) ಅಕ್ಟೋಬರ್ 1
ನೆಟ್‌ಫ್ಲಿಕ್ಸ್
- ಲೆಗೊ ಒನ್ ಪೀಸ್(ವೆಬ್ ಸೀರಿಸ್) ಸೆಪ್ಟೆಂಬರ್ 29
- ಮೆದುಶಾ ಸೀಸನ್ 2(ವೆಬ್ ಸೀರಿಸ್) ಸೆಪ್ಟೆಂಬರ್ 30
- ರೊಮಾಚಕಂ(ತೆಲುಗು ಸಿನಿಮಾ) ಅಕ್ಟೋಬರ್ 1