ಸಿನಿಮಾಗಳಲ್ಲಿ ರೊಮ್ಯಾಂಟಿಕ್ ದೃಶ್ಯಗಳನ್ನು ಹೇಗೆ ಚಿತ್ರೀಕರಿಸ್ತಾರೆ ? ಅಷ್ಟು ಗಾಢವಾಗಿ ದೃಶ್ಯಗಳಲ್ಲಿ ನಟಿಸುವ ನಟ-ನಟಿಯರು ದೈಹಿಕ ಉದ್ರೇಕಗೊಳ್ಳಲ್ವಾ ? ಕೊನೆಪಕ್ಷ 10ರಿಂದ 20 ಜನ ತಂತ್ರಜ್ಞರು ಸೆಟ್‌ನಲ್ಲಿ ಇದ್ರು ಅವರ ಎದುರು ಇಂತಹ ದೃಶ್ಯಗಳಲ್ಲಿ ಹೇಗೆ ನಟಿಸ್ತಾರೆ ? ಎಂದು ಕೆಲವರಿಗೆ ಅನುಮಾನ ಇದೆ. ಮುಂಬೈ ಬೆಡಗಿ ನೈರಾ ಬ್ಯಾನರ್ಜಿ ಇದೇ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಬಿಂದಾಸ್ ದೃಶ್ಯಗಳಲ್ಲಿ ನಟಿಸೋ ಬಗ್ಗೆ ಈಗಾಗಲೇ ಕೆಲವರು ಮಾತನಾಡಿದ್ದಾರೆ. ಅದೆಲ್ಲಾ ಬರೀ ನಟನೆ ಅಷ್ಟೆ. ಸೆಟ್‌ನಲ್ಲಿ ಅಷ್ಟು ಜನ ಇರುವಾಗ ನಿಜಕ್ಕೂ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸೋದು ಕಷ್ಟ ಎಂದಿದ್ದಾರೆ. ಹೀಗೆ ರೊಮ್ಯಾಂಟಿಕ್ ದೃಶ್ಯಗಳ ಚಿತ್ರೀಕರಣದ ವೇಳೆ ನಟರು ಉದ್ರೇಕಗೊಳ್ಳುವುದನ್ನು ತಪ್ಪಿಸಲು, ಹಸ್ತಮೈ*ಥುನ ಮಾಡಿಕೊಳ್ಳುವಂತೆ ಸಲಹೆ ಕೊಡ್ತಾರಂತೆ ಎಂದು ನೈರಾ ಬ್ಯಾನರ್ಜಿ ಹೇಳಿದ್ದಾರೆ. ಕನ್ನಡದಲ್ಲಿ 'ಸವಾರಿ- 2' ಹಾಗೂ 'ಟೈಗರ್' ಎಂಬ ಸಿನಿಮಾಗಳಲ್ಲಿ ಕೂಡ ಆಕೆ ನಟಿಸಿದ್ದಾರೆ.
ಮುಂಬೈನಲ್ಲಿ ಹುಟ್ಟಿ ಬೆಳೆದ ನೈರಾ ಬ್ಯಾನರ್ಜಿ 'ತೆಲುಗಿನ ಆ ಒಕ್ಕಡು' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದವರು. ಬಳಿಕ ದಕ್ಷಿಣದ ನಾಲ್ಕು ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ಚಿತ್ರಗಳಲ್ಲಿ ಕೂಡ ಅವಕಾಶ ಪಡೆದಿದ್ದರು. ಸಾಕಷ್ಟು ಕಿರುತೆರೆ ಕಾರ್ಯಕ್ರಮಗಳಲ್ಲಿ ಕೂಡ ಮಿಂಚಿದ್ದಾರೆ. Galatta India ಯೂಟ್ಯೂಬ್ ಚಾನಲ್ ಪಾಡ್‌ಕಾಸ್ಟ್‌ನಲ್ಲಿ ಆಕೆ ನಟಿಸಿದ್ದಾರೆ. ಈ ವೇಳೆ ನಟ-ನಟಿ ಪ್ರಣಯದ ದೃಶ್ಯಗಳ ಚಿತ್ರೀಕರಣದ ಬಗ್ಗೆ ಮಾತನಾಡಿದ್ದಾರೆ.
ರೊಮ್ಯಾಂಟಿಕ್ ದೃಶ್ಯದಲ್ಲಿ ನಟಿಸೋ ಮುನ್ನ ಚಿತ್ರೀಕರಣಕ್ಕಾಗಿ ಸೆಟ್‌ನಲ್ಲಿ ಕೆಲವು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಚಿತ್ರತಂಡ ನಟ-ನಟಿಯರ ಕೋಣೆಗಳಿಗೆ ಒಂದು ಟ್ರೇ ಕಳುಹಿಸುತ್ತದೆ; ಅದರಲ್ಲಿ ಚ್ಯೂಯಿಂಗ್ ಗಮ್, ಪರ್ಫ್ಯೂಮ್ ಮತ್ತು ಸ್ಯಾನಿಟೈಸರ್‌ನಂತಹ ವಸ್ತುಗಳಿರುತ್ತವೆ. ಕೆಲ ನಟರಿಗೆ ಹಸ್ತಮೈ*ಥುನ ಮಾಡಿಕೊಳ್ಳುವಂತೆಯೂ ಸೂಚಿಸಲಾಗುತ್ತಂತೆ. ಹೀಗೆ ಮಾಡುವುದರಿಂದ, ಅವರು ತಮ್ಮ ನಟನೆ ಮತ್ತು ಸೃಜನಶೀಲತೆಯ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತೆ. ಈ ವಿಷಯವನ್ನು ಸಹ ನಟರೊಬ್ಬರು ನನಗೆ ಹೇಳಿದ್ರು ಎಂದು ನೈರಾ ಬ್ಯಾನರ್ಜಿ ಹೇಳಿರುವುದು ವೈರಲ್ ಆಗ್ತಿದೆ.
Nyrraa Banerjee: During intimate Scenes Man gets instructions to go and do something so that you don't get any kind of feeling.
— Gagan Choudhary (@trigguuuu) October 30, 2026
WTF bruh!! pic.twitter.com/MRPXIV3ODr