ಒಂದ್ಕಡೆ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ನಡೀತಿದೆ. ಮತ್ತೊಂದು ಕಡೆ ದರ್ಶನ್ ಯಾವಾಗ ಜೈಲಿನಿಂದ ಬಿಡುಗಡೆಯಾಗಿ ಹೊರಗಡೆ ಬರ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಕೂಡ ಪತಿಯ ನೆನಪಿನಲ್ಲಿ ಕಾಲ ಕಳೆಯುತ್ತಿದ್ದಾರೆ. ದೇವರ ಮೊರೆ ಹೋಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ವೀವ್ ಆಗಿರುವ ವಿಜಯಲಕ್ಷ್ಮಿ ತಮ್ಮ ಮನಸ್ಸಿನ ಭಾವನೆಗಳನ್ನು ಪೋಸ್ಟ್ ಮಾಡುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ ಸದ್ಯ ವಿಜಯಲಕ್ಷ್ಮಿ ದರ್ಶನ್ ಹಾಕಿರುವ ಪೋಸ್ಟ್ ವೈರಲ್ ಆಗ್ತಿದೆ. "ಎಲ್ಲಾ ಹಿರಿಯರಲ್ಲೂ ವಿವೇಕವಿರುತ್ತದೆ ಎಂದೇನಿಲ್ಲ. ಅವರಲ್ಲಿ ಕೆಲವರೇ ಅವ್ಯವಸ್ಥೆ ಮತ್ತು ಗೊಂದಲಕ್ಕೆ ಮೂಲ ಕಾರಣವಾಗಿರುತ್ತಾರೆ" ಎಂದು ಬರೆದುಕೊಂಡಿದ್ದಾರೆ. ಇವತ್ತಿನ ಸಣ್ಣ ಆಲೋಚನೆ ಎಂದಿದ್ದಾರೆ.
ವಿಜಯಲಕ್ಷ್ಮಿ ಯಾರಿಗೆ ಯಾಕೆ ಹೀಗೆ ಹೇಳಿದ್ರು ಎನ್ನುವುದು ಅರ್ಥವಾಗಿಲ್ಲ. ಇನ್ನು ಪತಿ ದರ್ಶನ್ ಜೊತೆಗಿನ ಫೋಟೊ ಹಂಚಿಕೊಂಡು You're My Favourite Kind of Chaos ಸಾಂಗ್ ಸೇರಿಸಿ ಇನ್ಸ್ಟಾ ಸ್ಟೋರಿ ಹಾಕಿಕೊಂಡಿದ್ದಾರೆ. 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಪ್ರಕರಣದ ಸಾಕ್ಷಿಗಳ ವಿಚಾರಣೆ ನಡೀತಿದೆ. ಪುನೀತ್ ಬಳಿಕ ಮತ್ತೊಬ್ಬ ಪ್ರತ್ಯಕ್ಷ ಸಾಕ್ಷಿ ಕಿರಣ್ ಕೂಡ ಉಲ್ಟಾ ಹೊಡೆದಿದ್ದಾನೆ. ನಿನ್ನೆ(ನವೆಂಬರ್ 23) ನ್ಯಾಯಾಲಯದಲ್ಲಿ ಕಿರಣ್ ಹಾಜರಾಗಿದ್ದ. 2024ರ ಜೂನ್ 8ರಂದು ಬೆಳಿಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ಕಿರಣ್ ಶೆಡ್ ಬಳಿ ಕೆಲಸ ಮಾಡಿದ್ದೆ..ಶೆಡ್ನಲ್ಲಿ ಯಾವುದೇ ಘಟನೆ ನಡೆದಿಲ್ಲ, ಆರೋಪಿಗಳು ಯಾರು ಎನ್ನುವುದು ನನಗೆ ಗೊತ್ತಿಲ್ಲ ಎಂದಿದ್ದಾನೆ. ವಿಚಾರಣೆಯನ್ನು ನವೆಂಬರ್ 30ಕ್ಕೆ ಮುಂದೂಡಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಸಂಕಷ್ಟ ಎದುರಿಸುತ್ತಿದ್ದಾರೆ. ಬೆನ್ನು ನೋವಿನ ಸಮಸ್ಯೆ ಹೆಚ್ಚಾಗಿದ್ದು ಜೈಲಿನಲ್ಲೇ ಫಿಸಿಯೋಥೆರಪಿ ಮಾಡಲಾಗ್ತಿದೆ. ಆದರೂ ನೋವು ಕಮ್ಮಿ ಆಗಿಲ್ಲ. ಜೈಲಿನ ಹೊರಗಡೆ ವಿಶೇಷ ಚಿಕಿತ್ಸೆ ಪಡೆಯಲು ಅನುಮತಿ 59ನೇ ಸಿಸಿಹೆಚ್ ನ್ಯಾಯಾಲಯಕ್ಕೆ ದರ್ಶನ್ ಅರ್ಜಿ ಸಲ್ಲಿಸಿದ್ದಾರೆ. ಫಿಸಿಯೋಥೆರಪಿ ಚಿಕಿತ್ಸೆ ಮುಂದುವರೆಸಲು ಜೈಲು ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿದ್ದಾರೆ.