ಸ್ಟಾರ್ ನಟ ಮಾತ್ರವಲ್ಲ ಸ್ಟಾರ್ ನಿರ್ದೇಶಕದ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಕೂಡ ಸಹಜ. 'ಜೈಲರ್' ಸರಣಿ ಸಿನಿಮಾಗಳ ಮೂಲಕ ನೆಲ್ಸನ್ ದಿಲೀಪ್ ಕುಮಾರ್ ಹೆಸರು ಭಾರತೀಯ ಚಿತ್ರರಂಗದಲ್ಲಿ ದೊಡ್ಡದಾಗಿ ಕೇಳಿಬರ್ತಿದೆ. ಪ್ರೇಕ್ಷಕರ ನಾಡಿಮಿಡಿತ ಅರಿತು ಅವರು ಸಿನಿಮಾಗಳನ್ನು ಮಾಡಿ ಗೆಲ್ತಿದ್ದಾರೆ. 'ಜೈಲರ್- 2' ನಂತರ ತೆಲುಗು ನಟನ ಜೊತೆ ಕೈಜೋಡಿಸುತ್ತಾರೆ ಎನ್ನಲಾಗ್ತಿದೆ.
ಈಗಾಗಲೇ ಕಮಲ್ ಹಾಸನ್ ಹಾಗೂ ರಜನಿಕಾಂತ್ ಕಾಂಬಿನೇಷನ್‌ನಲ್ಲಿ ನೆಲ್ಸನ್ ನಿರ್ದೇಶನದ ಸಿನಿಮಾ ಘೋಷಣೆಯಾಗಿದೆ. ಆ ಸಿನಿಮಾ ಬಳಿಕವೇ ಅವರು ತೆಲುಗು ಚಿತ್ರರಂಗ ಪ್ರವೇಶ ಮಾಡಲಿದ್ದಾರೆ. ಒಂದು ವೇಳೆ ಕಮಲ್-ರಜನಿ ಸಿನಿಮಾ ತಡವಾದರೆ ಕೂಡಲೇ ತೆಲುಗು ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಸಿತಾರ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದೆ. ಜ್ಯೂ. ಎನ್‌ಟಿಆರ್ ಹೀರೊ ಆಗಿ ನಟಿಸುವ ಸಾಧ್ಯತೆಯಿದೆ.
'ಜೈಲರ್' ಬೆನ್ನಲ್ಲೇ ನೆಲ್ಸನ್ ತೆಲುಗು ಸಿನಿಮಾ ಮಾಡುವ ಬಗ್ಗೆ ಚರ್ಚೆ ನಡೀತು. ಅಷ್ಟರಲ್ಲೇ ಸೀಕ್ವಲ್ ಹಾಗೂ ರಜನಿ-ಕಮಲ್ ಮಲ್ಟಿಸ್ಟಾರರ್ ಸಿನಿಮಾಗಳ ಅವಕಾಶ ಅವರಿಗೆ ಸಿಕ್ಕಿತ್ತು. ಹಾಗಾಗಿ ತೆಲುಗು ಅವಕಾಶಗಳನ್ನು ಪಕ್ಕಕ್ಕೆ ಇಟ್ಟಿದ್ದರು. ಈ ವಿಚಾರವನ್ನು ಸ್ವತಃ ರಜನಿಕಾಂತ್ ಸಹ ಹೇಳಿದ್ದರು. ಸದ್ಯ 'ಜೈಲರ್- 2' ಚಿತ್ರದ ಆಂಧ್ರ, ತೆಲಂಗಾಣ ವಿತರಣೆ ಹಕ್ಕು ನಾಗವಂಶಿ ಪಡೆದುಕೊಂಡಿದ್ದಾರೆ. ಅದಕ್ಕಾಗಿ ಭಾರೀ ಹಣ ಕೊಟ್ಟಿದ್ದಾರೆ.
ಮುಂದೆ ನೆಲ್ಸನ್ ನಮಗೆ ಸಿನಿಮಾ ಮಾಡಿಕೊಡುವ ಬಗ್ಗೆ ಚರ್ಚೆ ನಡೀತಿದೆ. ಹಾಗಾಗಿಯೇ ಹೆಚ್ಚು ಹಣ ಕೊಟ್ಟು 'ಜೈಲರ್- 2' ಸಿನಿಮಾ ರೈಟ್ಸ್ ಕೊಂಡುಕೊಂಡದ್ದೇವೆ ಎಂದು ನಾಗವಂಶಿ ಹೇಳಿದ್ದಾರೆ. ಎನ್‌ಟಿಆರ್ ನಟಿಸ್ತಾರಾ ಎನ್ನುವುದನ್ನು ಈಗ ಹೇಳಲು ಸಾಧ್ಯವಿಲ್ಲ ಎಂದು ನಾಗವಂಶಿ ತಿಳಿಸಿದ್ದಾರೆ. ಒಟ್ಟಾರೆ ನೆಲ್ಸನ್ ನಿರ್ದೇಶನದಲ್ಲಿ ಜ್ಯೂ. ಎನ್‌ಟಿಆರ್ ನಟಿಸುವ ಸಾಧ್ಯತೆ ದಟ್ಟವಾಗಿದೆ.
ಎಂಟು ವರ್ಷಗಳ ಹಿಂದೆ 'ಕೊಲಮಾವು ಕೊಕಿಲ' ಚಿತ್ರದ ಮೂಲಕ ನೆಲ್ಸನ್ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. ಬಳಿಕ 'ಡಾಕ್ಟರ್', 'ಬೀಸ್ಟ್' ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದರು. ಅಷ್ಟರಲ್ಲೇ ರಜನಿಕಾಂತ್ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಅದನ್ನು ಸಾಬೀತುಪಡಿಸಿಕೊಂಡಿದ್ದಾರೆ. ತಲೈವಾ ಜೊತೆ ಮೂರನೇ ಚಿತ್ರಕ್ಕೆ ಅಣಿಯಾಗುತ್ತಿದ್ದಾರೆ.
NTR – Nelson – Anirudh !!
— Telugu Chitraalu (@CineChitraalu) October 17, 2026
Initial Reports Came In That the Title Was “ROCK”.#JrNTR pic.twitter.com/8pPOgPZIBo