ಪ್ಯಾನ್ ಇಂಡಿಯಾ ಸಿನಿಮಾಗಳೆಲ್ಲಾ ನಿರೀಕ್ಷೆ ಹುಸಿಯಾಗಿಸುತ್ತಿವೆ. 'ಟಾಕ್ಸಿಕ್' ಬಳಿಕ ನಾನಿ ನಟನೆಯ 'ದಿ ಪ್ಯಾರಡೈಸ್' ಸಿನಿಮಾ ಕೂಡ ಪ್ರೇಕ್ಷಕರ ನಿರೀಕ್ಷೆ ತಲುಪಲು ವಿಫಲವಾಗಿತ್ತು. ಶ್ರೀಕಾಂತ್ ಒಡೆಲ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೂ ಒಳ್ಳೆ ಕಲೆಕ್ಷನ್ ಮಾಡಿತ್ತು. ಇದೀಗ ಓಟಿಟಿ ಸ್ಟ್ರೀಮಿಂಗ್‌ಗೆ ಸಿನಿಮಾ ಸಜ್ಜಾಗಿದೆ.

ಸೆಪ್ಟೆಂಬರ್ 24ರಂದು 'ದಿ ಪ್ಯಾರಡೈಸ್' ಸಿನಿಮಾ ತೆರೆಗೆ ಬಂದಿತ್ತು. ನೀರಸ ಪ್ರತಿಕ್ರಿಯೆ ಬಳಿಕ ಕಲೆಕ್ಷನ್ ಕೂಡ ಕಮ್ಮಿ ಆಗಿತ್ತು. ಆದರೂ 100 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡು ನಿರ್ಮಾಪಕರನ್ನು ದಡ ಸೇರಿಸಿದೆ. ನಾನಿ ಜೊತೆಗೆ ಮೋಹನ್ ಬಾಬು, ಕಯಾದು ಲೋಹರ್ ಚಿತ್ರದ ತಾರಾಗಣದಲ್ಲಿದ್ದಾರೆ. ಸ್ಪೆಷಲ್ ಸಾಂಗ್‌ನಲ್ಲಿ ಕೀರ್ತಿ ಸುರೇಶ್ ಹೆಜ್ಜೆ ಹಾಕಿದ್ದರು.

ಎರಡು ಜಡೆ ಕಟ್ಟಿಕೊಂಡು ಬಹಳ ವಿಭಿನ್ನ ಅವತಾರದಲ್ಲಿ ನಾನಿ ಕಾಣಿಸಿಕೊಂಡಿದ್ದರು. 'ಆಯಾ ಶೇರ್' ಸಾಂಗ್‌ನಿಂದಲೇ ಸಿನಿಮಾ ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿತ್ತು. ಆ ಸಾಂಗ್ ತಂದುಕೊಟ್ಟ ಕ್ರೇಜ್ ನೋಡಿ ಟ್ರೈಲರ್ ಕೂಡ ಬಿಡುಗಡೆ ಮಾಡದೇ ಸಿನಿಮಾ ತೆರೆಗೆ ತರಲಾಗಿತ್ತು.

ಓಟಿಟಿ ಡೇಟ್

ನೆಟ್‌ಫ್ಲಿಕ್ಸ್ 'ದಿ ಪ್ಯಾರಡೈಸ್' ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿದೆ. ಐದು ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಅಕ್ಟೋಬರ್ 23ರಂದು ಓಟಿಟಿಯಲ್ಲಿ ಸಿನಿಮಾ ಬಿಡುಗಡೆ ಆಗುವ ನಿರೀಕ್ಷೆಯಿದೆ.

ಚಿತ್ರದಲ್ಲಿ ಬದಲಾವಣೆ

'ದಿ ಪ್ಯಾರಡೈಸ್' ಚಿತ್ರದ ಒಂದಷ್ಟು ದೃಶ್ಯಗಳ ಬಗ್ಗೆ ಪ್ರೇಕ್ಷಕರು ಬೇಸರಗೊಂಡಿದ್ದರು. ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಓಟಿಟಿಯಲ್ಲಿ ಅಂತಹ ದೃಶ್ಯಗಳ್ನು ಕತ್ತರಿಸಿ ಹಾಕ್ತಾರೆ ಎನ್ನುವ ವದಂತಿ ಹರಿದಾಡುತ್ತಿದೆ. ಆದರೆ ಅದು ಸುಳ್ಳು, ಈಗಾಗಲೇ ಓಟಿಟಿಗೆ ಕಂಟೆಂಟ್ ಕೊಟ್ಟುಬಿಟ್ಟಿರುವುದಾಗಿ ಚಿತ್ರತಂಡದಿಂದ ಮಾಹಿತಿ ಲಭ್ಯವಾಗಿದೆ. ಹಾಗಾಗಿ ಅಕ್ಟೋಬರ್ 23ರಂದು ಸಿನಿಮಾ ನೆಟ್‌ಫ್ಲಿಕ್ಸ್‌ಗೆ ಬರೋದು ಪಕ್ಕಾ ಎನ್ನಲಾಗ್ತಿದೆ.