ರಣ್ಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ನಟನೆಯ 'ರಾಮಾಯಣ: ರೈಸ್ ಆಫ್ ದಿ ಲೆಜೆಂಡ್' ಚಿತ್ರ ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಭಾರೀ ಚರ್ಚೆ ಹುಟ್ಟಾಕ್ಕಿದೆ. ಬಹುತೇಕರು ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ. ಕೆಲವರು ವಾಲ್ಮೀಕಿ ರಾಮಾಯಣದ ಜೊತೆ ಹೋಲಿಸಿ ಟೀಕಿಸುತ್ತಿದ್ದಾರೆ.
ಪಾತ್ರವರ್ಗದ ಆಯ್ಕೆಯಲ್ಲಿ ಕೂಡ ಚಿತ್ರತಂಡ ಎಡವಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಸಾಯಿ ಪಲ್ಲವಿ ಆಯ್ಕೆ ತಪ್ಪಾಗಿದೆ ಎನ್ನುವ ಕಾಮೆಂಟ್ಸ್ ಶುರುವಾಗಿದೆ. ಚಿತ್ರದಲ್ಲಿ ಸೀತೆಗಿಂತ ಮಂಡೋದರಿ(ಕಾಜಲ್ ಅಗರ್ವಾಲ್), ಶೂರ್ಪನಖಿ(ರಕುಲ್ ಪ್ರೀತ್ ಸಿಂಗ್) ಬಹಳ ಸುಂದರವಾಗಿದ್ದಾರೆ ಎಂದು ಕೆಲವರು ವ್ಯಂಗ್ಯವಾಡುತ್ತಿದ್ದಾರೆ. ಇನ್ನು ಪ್ರೌಢಾವಸ್ಥೆಯ ರಾವಣನ ಪಾತ್ರ ಮಾಡಿರುವುದು ಯಾರು ಎನ್ನುವ ಚರ್ಚೆ ಶುರುವಾಗಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಹಿರಿಯ ಮಗ ರಾಘವ್ ಮಲ್ಹೋತ್ರಾ ಆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಚರ್ಚೆ ಶುರುವಾಗಿದೆ. ಈ ಬಗ್ಗೆ ಚರ್ಚೆ ಶುರುವಾಗಿದೆ.
ಆ ಪಾತ್ರಕ್ಕ ರಾಘವ್ ಮಲ್ಹೋತ್ರಾ ಆಯ್ಕೆ ಬಗ್ಗೆ ಕೂಡ ಪರ ವಿರೋಧ ಚರ್ಚೆ ಶುರುವಾಗಿದೆ. ಕೆಲವರು ಆತನ ನಟನೆ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ನಿರ್ಮಾಪಕನ ಮಗ ಎನ್ನುವ ಕಾರಣಕ್ಕೆ ಅವಕಾಶ ಸಿಕ್ಕಿದೆ. ಬೇರೆಯವರಿಗೆ ಕೊಡಬಹುದಿತ್ತು. ಕಲಾವಿದರ ತಪ್ಪಾದ ಆಯ್ಕೆಯಿಂದಲೇ ಅರ್ಧ ಸಿನಿಮಾ ಸೋತಿದೆ ಎಂದು ಕಾಮೆಂಟ್ ಮಾಡುವವರು ಇದ್ದಾರೆ. ದೈಹಿಕವಾಗಿ ಯಶ್ ಅವರನ್ನು ರಾಘವ್ ಮಲ್ಹೋತ್ರಾ ಹೋಲುತ್ತಾರೆ, ಯಶ್ ಡ್ಯೂಪ್ ರೀತಿ ಕಾಣುತ್ತಾರೆ ಎನ್ನುವ ಕಾರಣಕ್ಕೆ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ.
ಹಲವು ವರ್ಷಗಳಿಂದ 'ರಾಮಾಯಣ' ಚಿತ್ರವನ್ನು ಅದ್ಧೂರಿಯಾಗಿ ತೆರೆಗೆ ತರಲು ನಮಿತ್ ಮಲ್ಹೋತ್ರಾ ಕನಸು ಕಂಡಿದ್ದರು. ಭಾರತದಲ್ಲಿ ಮಾತ್ರವಲ್ಲದೇ ಹಾಲಿವುಡ್ನಲ್ಲಿ ಕೂಡ ದೊಡ್ಡದಾಗಿ ಸಿನಿಮಾ ಬಿಡುಗಡೆ ಮಾಡುವ ಮನಸ್ಸು ಮಾಡಿದ್ದರು. ಅದಕ್ಕಾಗಿ ಸೋನಿ ಪಿಕ್ಚರ್ಸ್ ಸಂಸ್ಥೆ ಜೊತೆ ಡೀಲ್ ಕುದುರಿಸಿದ್ದರು. ಗ್ಲೋಬಲ್ ಮಟ್ಟದಲ್ಲಿ ನಮ್ಮ ಕಥೆಯನ್ನು ತೆರೆಮೇಲೆ ಮೇಲೆ ತೋರಿಸಬೇಕು ಎಂದು ಹಗಳಿರುಳು ಶ್ರಮಿಸಿದ್ದರು. ನಮಿತ್ ಕನಸಿಗೆ ಯಶ್ ಕೈ ಜೋಡಿಸಿದ್ದರು. ರಾವಣನಾಗಿ ನಟಿಸುವುದು ಮಾತ್ರವಲ್ಲದೇ ನಿರ್ಮಾಪಕನಾಗಿ ಸಾಥ್ ಕೊಟ್ಟಿದ್ದಾರೆ.
ಅಂದಹಾಗೆ ಏಳೆಂಟು ವರ್ಷಗಳ ಹಿಂದೆ ಅಲ್ಲು ಅರವಿಂದ್ ಹಾಗೂ ಮಧು ಮಂತೆನ ಜೊತೆ ಸೇರಿ 'ರಾಮಾಯಣ' ಚಿತ್ರ ನಿರ್ಮಿಸಲು ನಮಿತ್ ಮಲ್ಹೋತ್ರಾ ಮುಂದಾಗಿದ್ದರು. ನಿತೇಶ್ ತಿವಾರಿ ನಿರ್ದೇಶನದಲ್ಲೇ ಸಿನಿಮಾ ನಿರ್ಮಿಸಲು ಪ್ರಯತ್ನಗಳು ನಡೆದಿತ್ತು. ಬಳಿಕ ಅಲ್ಲು ಅರವಿಂದ್ ಹಾಗೂ ಮಧು ಮಂತೆನಾ ತಂಡದಿಂದ ಹೊರ ಬಂದಿದ್ದರು. ಯಶ್ ಹೊಸದಾಗಿ ಸೇರಿಕೊಂಡಿದ್ದರು. ಎರಡು ಭಾಗಗಳಾಗಿ 'ರಾಮಾಯಣ' ಸಿನಿಮಾ ತೆರೆಗೆ ಬರ್ತಿದೆ. ಎರಡನೇ ಭಾಗ ನೋಡಲು ಪ್ರೇಕ್ಷಕರು 2028ರ ದೀಪಾವಳಿವರೆಗೂ ಕಾಯಬೇಕು.