ಕನ್ನಡದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳ ಸಂಖ್ಯೆ ಕಮ್ಮಿ. ಆಗೊಮ್ಮೆ ಈಗೊಮ್ಮೆ ಅಂತಹ ಪ್ರಯತ್ನಗಳು ನಡೆದರೂ ದೊಡ್ಡಮಟ್ಟದ ಯಶಸ್ಸು ಸಿಗಲ್ಲ. ಆದರೆ ಇದೀಗ 'ನಾಕುತಂತಿ' ಎಂಬ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ನಾಲ್ವರು ಮಹಿಳೆಯರ ಕಥೆಗಳು ಚಿತ್ರದಲ್ಲಿದೆ. ಸದ್ಯ ಟೀಸರ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ.

ಬಹಳ ಸೊಗಸಾಗಿ ಟೀಸರ್ ಕಟ್ ಮಾಡಿದ್ದು ಮೊದಲ ನೋಟದಲ್ಲೇ 'ನಾಕುತಂತಿ' ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಗೌತಮ್ ಅನ್ವಿತ್, ಮಹೇಶ್ ರಾಜ್, ಶಶಿ ಕುಮಾರ್ ವಿ, ಪ್ರೀತಂ ಶಿವಕುಮಾರ್ ಹೀಗೆ ನಾಲ್ವರು ನಿರ್ದೇಶಕರು ಒಟ್ಟಿಗೆ ಸೇರಿ ನಾಲ್ಕು ಕಥೆಗಳನ್ನು ಒಟ್ಟಿಗೆ ಸೇರಿಸಿ ಒಂದೇ ಸಿನಿಮಾ ಮಾಡಿದ್ದಾರೆ. ಖುಷಿ ರವಿ, ಸಂಗೀತಾ ಭಟ್, ಸಿಂಧೂ ಶ್ರೀನಿವಾಸ್ ಮೂರ್ತಿ ಹಾಗೂ ರೋಶನಿ ಪ್ರಕಾಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಡಿಗ್ರಿ ಪಾಸ್ ಮಾಡಿದ್ರು ಮದುವೆ ಬಳಿಕ ಕೆಲಸಕ್ಕೆ ಹೋಗೋಕೆ ಆಗ್ದೆ ಮನೆಯಲ್ಲೇ ಉಳಿದ ಗೃಹಿಣಿ(ಸಂಗೀತಾ ಭಟ್), ಮನೆಯ ಜವಾಬ್ದಾರಿ ಹೊತ್ತ ಮಹಿಳಾ ಟ್ರಾಫಿಕ್ ಪೊಲೀಸ್(ಸಿಂಧು), ಶ್ರೀಮಂತರ ಮನೆಯ ಯುವತಿ(ರೋಶನಿ) ಹಾಗೂ ಓರ್ವ ನರ್ಸ್(ಖುಷಿ).. ಹೀಗೆ ನಾಲ್ವರು ಹೆಣ್ಣುಮಕ್ಕಳ ಬದುಕಿನ ಕಥೆಗಳು ಇಲ್ಲಿವೆ.

ಛಾಯಾಗ್ರಹಣ, ಎಡಿಟಿಂಗ್, ಮ್ಯೂಸಿಕ್ ಎಲ್ಲವೂ ಮಜವಾಗಿದೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ಟೀಸರ್ ಚಿಂದಿ. ನಾಲ್ವರು ಛಾಯಾಗ್ರಾಹಕರಾದ ವಿವಾನ್ ವಿದ್ಯುತ್, ಜೀವನ್, ವಿಶ್ವಾಸ ಕೌಂಡಿಯಾ, ದಿನೇಶ್ ದಿವಾಕರನ್ ನಾಲ್ಕು ಕಥೆಗಳನ್ನು ಸೆರೆ ಹಿಡಿದಿದ್ದಾರೆ. ಸುಮೇಧ್. ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಕುತೂಹಲಭರಿತ ಟೀಸರ್ ಇಲ್ಲಿದೆ ನೋಡಿ.