ಯುವರಾಜ್‌ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಸಾಂಸಾರಿಕ ಜೀವನ ಬೀದಿಗೆ ಬಂದಿದೆ. ಸಹ ನಟಿ ಜೊತೆ ನನ್ನ ಪತಿಗೆ ಸಂಬಂಧ ಇದೆ ಎಂದು ಶ್ರೀದೇವಿ ಬಹಿರಂಗವಾಗಿ ಹೇಳ್ತಾ ಬರ್ತಿದ್ದಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಯ ಪೋಸ್ಟ್‌ ಹಾಗೂ ನೆಟ್ಟಿಗರ ಪ್ರಶ್ನೆಗಳಿಗೆ ಕೊಡುತ್ತಿರುವ ಉತ್ತರ ಬಹಳ ಚರ್ಚೆ ಹುಟ್ಟಾಕ್ಕಿದೆ.

ಪತ್ನಿಯಿಂದ ಡಿವೋರ್ಸ್ ಕೋರಿ ಯುವರಾಜ್‌ಕುಮಾರ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಶ್ರೀದೇವಿ ಬಗ್ಗೆ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಆ ಆರೋಪಗಳನ್ನು ಸಾಬೀತು ಮಾಡುವವರೆಗೂ ನಾನು ಡಿವೋರ್ಸ್ ಕೊಡಲು ಒಪ್ಪುವುದಿಲ್ಲ ಎಂದು ಶ್ರೀದೇವಿ ಸವಾಲು ಹಾಕಿದ್ದಾರೆ. ಅಧಿಕೃತವಾಗಿ ಇನ್ನು ಇಬ್ಬರಿಗೂ ಡಿವೋರ್ಸ್ ಸಿಕ್ಕಿಲ್ಲ. ತನ್ನ ಮೇಲಿನ ಕಳಂಕ ಕಳೆಯುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಶ್ರೀದೇವಿ ಭೈರಪ್ಪ ಗುಡುಗುತ್ತಲೇ ಇದ್ದಾರೆ.

ನಿಮ್ಮ ಅಣ್ಣನಿಗೆ 'ಸೈಡ್ ಚಿಕ್' ಇದ್ದಾರಲ್ಲ ಎಂದು ಅಭಿಮಾನಿಯೊಬ್ಬನ ಕಾಮೆಂಟ್ ಬಗ್ಗೆ ಶ್ರೀದೇವಿ ಕಿಡಿ ಕಾರಿದ್ದರು. ಬಳಿಕ ಪತಿಯ ಫೋನ್‌ನಲ್ಲಿ 'ಆಕೆ'ಯ ಫೋಟೊಗಳನ್ನು ನೋಡಿ ಶಾಕ್ ಆಗಿದ್ದನ್ನು ಮತ್ತೊಂದು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಸಾಕಷ್ಟು ಕಾಮೆಂಟ್ಸ್ ಬಂದಿತ್ತು. ಕೆಲವರು ಆಕೆಯ ಬೆಂಬಲಕ್ಕೆ ನಿಂತರೆ ಮತ್ತೆ ಕೆಲವರು ಯುವ ರಾಜ್‌ಕುಮಾರ್ ಬೆಂಬಲಿಸಿ ಕಾಮೆಂಟ್ ಮಾಡಿದ್ದರು. ಕೆಲ ಕಾಮೆಂಟ್‌ಗಳಿಗೆ ಶ್ರೀದೇವಿ ರಿಪ್ಲೇ ಮಾಡಿದ್ದಾರೆ.

ನಿಮಗೆ ಬಂದ ಗತಿ 'ಅವಳಿಗೂ' ಬರುತ್ತೆ ಎನ್ನುವುದು ಗೊತ್ತಿಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. "ವಿವಾಹಿತ ಪುರುಷನೊಬ್ಬನಿಗೆ 'ಸೈಡ್‌ ಚಿಕ್' (side chick) ಆಗಿ ಇರುವುದು ಒಬ್ಬ ಮಹಿಳೆ ಹಾಗೂ ಆಕೆಯ ಪೋಷಕರಿಗೆ ಸಂಭವಿಸಬಹುದಾದ ಅತ್ಯಂತ ಹೀನಾಯವಾದ ಸಂಗತಿಯಾಗಿದೆ. ಆಕೆ ಈಗಾಗಲೇ ಅಂತಹ ಸ್ಥಿತಿಯಲ್ಲಿದ್ದಾಳೆ, ಆದರೆ ಅವಳಿಗೆ ಆ ವಿಷಯ ತಿಳಿದಿಲ್ಲವಷ್ಟೇ" ಎಂದು ಶ್ರೀದೇವಿ ಪ್ರತಿಕ್ರಿಯಿಸಿದ್ದಾರೆ.

ಕೈಲಾಗದ ಶತ್ರುವಿನ ಕೊನೆಯ ಆಯುದವೇ "ಅಪಪ್ರಚಾರ" ಎಂದು ಯುವ ಬೆಂಬಲಿಸಿ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಉತ್ತರಿಸಿ "ಅಪಪ್ರಚಾರ = ಇಲ್ಲದೇ ಇರುವುದನ್ನ ಮಾತಾಡೋದು..ಇರೋದನ್ನ ಮಾತಾಡೋದು = ಸತ್ಯ ಹೇಳೋದು.. ನಾನು ಇಷ್ಟು ವರ್ಷಗಳಿಂದ ಕೋರ್ಟ್‌ನಲ್ಲಿ ಹೋರಾಡ್ತಿರೋದು ಯಾಕೆ ಗೊತ್ತಾ? ಜನರಿಗೆ ನಿಜ ಏನು, ಯಾರನ್ನು ಹೇಗೆ ನಡೆಸಿಕೊಂಡಿದ್ದಾರೆ ಅನ್ನೋದು ಗೊತ್ತಾಗಬೇಕು ಅಂತ" ಎಂದು ತಿರುಗೇಟು ನೀಡಿದ್ದಾರೆ.

ಆತ(ಯುವರಾಜ್‌ಕುಮಾರ್) ಇನ್ನೂ ಅವಳೊಂದಿಗೆ ಅಫೇರ್ ಇಟ್ಟುಕೊಂಡಿದ್ದಾರಾ ? ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದು "ಹೌದು" ಎಂದು ಶ್ರೀದೇವಿ ರಿಪ್ಲೇ ಮಾಡಿದ್ದಾರೆ. ಅವರ ಬೆಳವಣಿಗೆ ನೋಡಿ ನಿಮಿಗೆ ಇರಿಟೇಟ್ ಆಗ್ತಿದೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿ ವ್ಯಂಗ್ಯವಾಡಿದ್ದಾರೆ. ಅದಕ್ಕೆ ಶ್ರೀದೇವಿ ಭೈರಪ್ಪ ಪ್ರತಿಕ್ರಿಯಿಸಿ "ಬೆಳವಣಿಗೆ ? ಅವ್ರಿಬ್ರ ಸಂಬಂಧ ಬೆಳವಣಿಗೆ ನೋಡಿ ನಾ?..ಹೌದು ಖಂಡಿತ ಇರಿಟೇಟ್ ಆಗ್ತಿದೆ.. ಇಲ್ಲಿ ನಾನೂ ಡೈವೋರ್ಸ್ ಅದೂ ಕೇಸ್ ಅಂತ ಓಡಾಡ್ವಾಗ, ಇವ್ರಿಬ್ರೂ ಆರಾಮಾಗಿ ಸುತಾಡ್ಕೊಂಡ್ ಇದ್ರೆ ಇರಿಟೇಟ್ ಆಗಲ್ವಾ ? ಎಂದು ಕುಟುಕಿದ್ದಾರೆ.