'ಕಾಂತಾರ' ಸರಣಿ ಹಿಟ್ ಬಳಿಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸಿನಿಮಾಗಳ ಕಡೆ ಮುಖ ಮಾಡಿದ್ದಾರೆ. ಹಿಂದಿ, ತೆಲುಗು ನಿರ್ದೇಶಕರ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 'ಜೈಹನುಮಾನ್' ಹಾಗೂ ಶಿವಾಜಿ ಬಯೋಪಿಕ್ ಬಳಿಕ ಮಲಯಾಳಂ ನಿರ್ದೇಶಕನ ಜೊತೆ ರಿಷಬ್ ಕೈಜೋಡಿಸುತ್ತಾರೆ ಎನ್ನಲಾಗ್ತಿದೆ.

'ಮಂಜುಮ್ಮೇಲ್ ಬಾಯ್ಸ್' ಸಿನಿಮಾ ಖ್ಯಾತಿಯ ಚಿದಂಬರಂ ನಿರ್ದೇಶನದ ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಎರಡು ವರ್ಷಗಳ ಹಿಂದೆ ಬಂದಿದ್ದ ಸರ್ವೈವಲ್ ಥ್ರಿಲ್ಲರ್ 'ಮಂಜುಮ್ಮೇಲ್ ಬಾಯ್ಸ್' ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದು ಗೊತ್ತೇಯಿದೆ. ಮಲಯಾಳಂ ಚಿತ್ರರಂಗದಲ್ಲಿ ಆವರೆಗಿನ ಎಲ್ಲಾ ದಾಖಲೆಗಳನ್ನು ಚಿತ್ರ ಅಳಿಸಿ ಹಾಕಿತ್ತು. ಇದೇ ವರ್ಷ 'ಬಾಲನ್- ದಿ ಬಾಯ್' ಎಂಬ ಸಿನಿಮಾ ಕಟ್ಟಿಕೊಟ್ಟು ಚಿದಂಬರಂ ಗಮನ ಸೆಳೆದಿದ್ದರು.

ರಿಷಬ್ ಹಾಗೂ ಚಿದಂಬರಂ ಕಾಂಬಿನೇಷನ್ ಚಿತ್ರವನ್ನು ಥಮೀನ್ಸ್ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡಲಿದ್ದು ಮುಂದಿನ ವರ್ಷ ಸಿನಿಮಾ ಶುರುವಾಗುತ್ತದೆ ಎನ್ನಲಾಗ್ತಿದೆ. ಇದೊಂದು ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಆಗಿರಲಿದ್ದು ಬಹಳ ಅದ್ಧೂರಿಯಾಗಿ ತೆರೆಗೆ ತರುವ ಪ್ರಯತ್ನ ನಡೀತಿದೆ. ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.