ಮಥಿಮಾರನ್ ಪುಗಜೆಂಧಿ ನಿರ್ದೇಶನದ ಸ್ಪೋರ್ಟ್ ಆಕ್ಷನ್ ಡ್ರಾಮಾ 'ಮಂಡಾಡಿ' ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಸೂರಿ ಹಾಗೂ ಸುಹಾಸ್ ನಟನೆಯ ಸಿನಿಮಾ ಬಾಕ್ಸಾಫೀಸ್‌ ಶೇಕ್ ಮಾಡ್ತಿದೆ. ವಿಶ್ವದಾದ್ಯಂತ 150 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ತಿಂಗಳಿಗೂ ಮುನ್ನ ಇದೀಗ ಸಿನಿಮಾ ಓಟಿಟಿಗೆ ಬರ್ತಿದೆ.

ಆರ್‌ಎಸ್ ಇನ್‌ಫೋಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ 'ಮಂಡಾಡಿ' ಸಿನಿಮಾ ನಿರ್ಮಾಣವಾಗಿದೆ. ಯಾವುದೇ ನಿರೀಕ್ಷೆ ಇಲ್ಲದೇ ಬಂದ ಸಿನಿಮಾ ಎಲ್ಲರ ಹುಬ್ಬೇರಿಸಿ ಗೆದ್ದಿದೆ. ಸೆಪ್ಟೆಂಬರ್ 10ರಂದು ಗಣೇಶ ಹಬ್ಬದ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬಂದಿತ್ತು. ತಮಿಳುನಾಡು ಕರಾವಳಿಯಲ್ಲಿ ನಡೆಯುವ ಸಾಂಪ್ರದಾಯಿಕ ದೋಣಿ ನಡೆಸುವ ಸ್ಪರ್ಧೆಯ ಸುತ್ತಾ ಸಿನಿಮಾ ಕಥೆ ಸಾಗುತ್ತದೆ.

ಒಂದ್ಕಾಲದಲ್ಲಿ ಹಾಸ್ಯ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ಸೂರಿ ಸಿಕ್ಕಾಪಟ್ಟೆ ರಗಡ್ ಅವತಾರದಲ್ಲಿ ನಟಿಸಿ ಗೆದ್ದಿದ್ದಾರೆ. ಜಿ. ವಿ ಪ್ರಕಾಶ್ ಕುಮಾರ್ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಎನಿಸಿಕೊಂಡಿದೆ. ಇತರೆ ಸ್ಪೋರ್ಟ್ಸ್ ಡ್ರಾಮಾ ಸಿನಿಮಾಗಳಿಗಿಂತ ಬಹಳ ಭಿನ್ನ ಎನಿಸುವ 'ಮಂಡಾಡಿ' ಪ್ರೇಕ್ಷಕರ ಮನ ಗೆದ್ದಿತ್ತು. ತೆಲುಗಿಗೂ ಡಬ್ ಆಗಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣ್ತಿದೆ.

ಚಿತ್ರಮಂದಿರಗಳಲ್ಲಿ ಒಳ್ಳೆ ರೆಸ್ಪಾನ್ಸ್ ಇದ್ದರೂ ಅಕ್ಟೋಬರ್ 8ರಂದು ಸಿನಿಮಾ ಓಟಿಟಿಗೆ ಬರ್ತಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡ ಸೇರಿ ಐದು ಭಾಷೆಗಳಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ಸಾಕಷ್ಟು ಜನ ಓಟಿಟಿಯಲ್ಲಿ ಸಿನಿಮಾ ನೋಡಲು ಕಾಯುತ್ತಿದ್ದರು. ಅಂತಹವರಿಗೆ ಇದು ಗುಡ್ ನ್ಯೂಸ್ ಎಂದೇ ಹೇಳಬೇಕು. ಸೂರಿ ಜೊತೆಗೆ ಮಹಿಮಾ ನಂಬಿಯಾರ್, ಸತ್ಯರಾಜ್, ರವೀಂದ್ರ ವಿಜಯ್, ಬಾಲ ಸರವಣನ್ ಚಿತ್ರದ ತಾರಾಗಣದಲ್ಲಿದ್ದಾರೆ. ಎಸ್‌. ಆರ್ ಕದಿರ್ ಛಾಯಾಗ್ರಹಣ ಕೂಡ ಚಿತ್ರಕ್ಕೆ ಹೆಚ್ಚಿನ ಬಲ ತುಂಬಿದೆ.