'ಕಾಂತಾರ'- 1 ಬಳಿಕ ಬ್ಯಾಕ್ ಟು ಬ್ಯಾಕ್ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ರಿಷಬ್ ಶೆಟ್ಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಜೈ ಹನುಮಾನ್ ಬಳಿಕ ಶಿವಾಜಿ ಬಯೋಪಿಕ್ ಚಿತ್ರದಲ್ಲಿ ನಟಿಸಬೇಕಿದೆ. 'ಕಾಂತಾರ'- 2 ಸಿನಿಮಾ ಮಾಡುವ ಲೆಕ್ಕಾಚಾರ ಕೂಡ ಇದೆ. ಈ ನಡುವೆ 'ಮಂಜುಮ್ಮೇಲ್ ಬಾಯ್ಸ್' ಖ್ಯಾತಿ ನಿರ್ದೇಶಕ ಚಿದಂಬರಂ ಜೊತೆ ಎರಡೆರಡು ಸಿನಿಮಾ ಮಾಡಲು ಒಪ್ಪಿದ್ದಾರೆ.
ಸದ್ಯ ಪ್ರಶಾಂತ್ ವರ್ಮಾ ನಿರ್ದೇಶನದ 'ಜೈ ಹನುಮಾನ್' ಸಿನಿಮಾ ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಹೈದರಾಬಾದ್ ಟು ಬೆಂಗಳೂರು ಫ್ಲೈಟ್ ಏರಿ ಇಳಿಯುತ್ತಿದ್ದಾರೆ. ಇದೀಗ 'ಜೈ ಹನುಮಾನ್' ಚಿತ್ರದಲ್ಲಿ ಮಮಿತಾ ಬೈಜು ನಟಿಸ್ತಾರೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ. ಮಮಿತಾ ನಟನೆಯ ಸಿನಿಮಾಗಳು ಸಿಕ್ಕಾಪಟ್ಟೆ ಸದ್ದು ಮಾಡ್ತಿವೆ. ಹಾಗಾಗಿ 'ಜೈಹನುಮಾನ್' ಚಿತ್ರದ ಪ್ರಮುಖ ಪಾತ್ರಕ್ಕೆ ಆಕೆಯ ಜೊತೆ ಮಾತುಕತೆ ನಡೀತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.
'ಪ್ರೇಮಲು', 'ಡ್ಯೂಡ್', ಜನನಾಯಗನ್, 'ವಿಶ್ವನಾಥ್ & ಸನ್ಸ್', 'ಬೆತ್ಲೆಹೇಮ್ ಕುಟುಂಬ ಯೂನಿಟ್' ಹೀಗೆ ಇತ್ತೀಚೆಗೆ ಮಮಿತಾ ನಟಿಸಿದ ಸಿನಿಮಾಗಳೆಲ್ಲಾ ಬಾಕ್ಸಾಫೀಸ್ ಶೇಕ್ ಮಾಡಿವೆ. 'ಎರಂಡು ವಾನಂ', 'ಹೆಲೊ ಡಿಯರ್' ಎಂಬ ಸಿನಿಮಾಗಳಲ್ಲಿ ಸದ್ಯ ಆಕೆ ಬಣ್ಣಹಚ್ಚಿದ್ದಾರೆ. ಮುಂದೆ 'ಜೈಹನುಮಾನ್' ಚಿತ್ರದಲ್ಲಿ ಕೂಡ ನಟಿಸ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
'ಜೈಹನುಮಾನ್' ಚಿತ್ರದಲ್ಲಿ ರಿಷಬ್ ಶೆಟ್ಟಿ ಎದುರು ರಾಣಾ ದಗ್ಗುಬಾಟಿ ವಿಲನ್ ಆಗಿ ನಟಿಸುತ್ತಿದ್ದಾರೆ. ಚಿತ್ರ ನಿರ್ಮಾಣಕ್ಕೆ ಮೈತ್ರಿ ಮೂವಿಮೇಕರ್ಸ್ ಜೊರೆ ರಿಷಬ್ ಕೂಡ ಕೈಜೋಡಿಸಿದ್ದಾರೆ. ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದ್ದು ಮುಂದಿನ ವರ್ಷ ತೆರೆಗೆ ಬರಲಿದೆ. ಚಿತ್ರದಲ್ಲಿ ಹನುಮಂತನಾಗಿ ಡಿವೈನ್ ಸ್ಟಾರ್ ದರ್ಶನ ಕೊಡಲಿದ್ದಾರೆ.