ಬಹುಕೋಟಿ ವೆಚ್ಚದ 'ರಾಮಾಯಣ' ಸಿನಿಮಾ ಮೊದಲ ಭಾಗ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಮೊದಲ ದಿನವೇ 155 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ವೀಕೆಂಡ್ ದೊಡ್ಡಮಟ್ಟದಲ್ಲಿ ಸದ್ದು ಮಾಡುವ ಸುಳಿವು ಸಿಕ್ಕಿದೆ. ಸೆಲೆಬ್ರೆಟಿಗಳು ಕೂಡ ಸಿನಿಮಾ ನೋಡಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ನಿರ್ದೇಶಕ ರಾಜಮೌಳಿ ಬಳಿಕ ಖ್ಯಾತ ನಟ ಮಹೇಶ್ ಬಾಬು ಹಾಗೂ ತಮಿಳು ನಿರ್ದೇಶಕ ಶಂಕರ್ ಕೂಡ ಸಿನಿಮಾ ನೋಡಿ ಟ್ವೀಟ್ ಮಾಡಿದ್ದಾರೆ. ತೆರೆಮೇಲೆ ಅದ್ಭುತ ದೃಶ್ಯಕಾವ್ಯ ಎಂದು ಶ್ಲಾಘಿಸಿದ್ದಾರೆ. ದೊಡ್ಡದು ಚಿಕ್ಕದು ಎನ್ನುವ ಭೇದಭಾವ ಇಲ್ಲದೇ ಮಹೇಶ್ ಬಾಬು ಸಿನಿಮಾಗಳನ್ನು ನೋಡಿ ಟ್ವೀಟ್ ಮಾಡುತ್ತಾರೆ. 'ರಾಮಾಯಣ' ಸಿನಿಮಾ ನೋಡಿ "ನಮ್ಮ ಬಾಲ್ಯದಿಂದಲೂ ಕೇಳುತ್ತಾ ಬೆಳೆದ ಕಥೆಗಳು, ಬೆಳ್ಳಿತೆರೆಯ ಮೇಲೆ ಇಷ್ಟು ಸುಂದರವಾಗಿ ಜೀವಂತವಾಗಿ ಮೂಡಿಬಂದಿರುವುದು... ನನಗೆ ತುಂಬಾ ಸಂತೋಷ ತಂದಿದೆ. ರಣಬೀರ್, ಯಶ್, ಸಾಯಿ ಪಲ್ಲವಿ ಅದ್ಭುತ... ನಮಿತ್ ಮಲ್ಹೋತ್ರಾ ಹಾಗೂ ನಿತೇಶ್ ತಿವಾರಿ ನಿಮಗೆ ನನ್ನ ನಮನಗಳು. ಇಷ್ಟೊಂದು ಬೃಹತ್ ಪ್ರಮಾಣದ ಸಿನಿಮಾ ರೂಪಿಸಲು ನೀವು ಹಾಕಿದ ಶ್ರಮಕ್ಕೆ ಅಭಿನಂದನೆಗಳು" ಎಂದು ಬರೆದುಕೊಂಡಿದ್ದಾರೆ.
ಅದ್ಭುತ ದೃಶ್ಯಕಾವ್ಯಗಳ ಸರದಾರ ಶಂಕರ್ ಕೂಡ 'ರಾಮಾಯಣ' ಚಿತ್ರವನ್ನು ಕೊಂಡಾಡಿದ್ದಾರೆ. ಎಂತಹ ಅದ್ಭುತ ದೃಶ್ಯವೈಭವ.. ಭಾರತೀಯ ಚಿತ್ರರಂಗದಲ್ಲಿ ಇಂತಹ ದೃಶ್ಯಗಳನ್ನು ಹಿಂದೆಂದೂ ನೋಡಿರಲಿಲ್ಲ. ಭಾರತೀಯ ಸಿನಿಮಾವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಕ್ಕಾಗಿ ನಮಿತ್ ಮತ್ತು ನಿತೇಶ್ ಅವರಿಗೆ ಅಭಿನಂದನೆಗಳು. ಅತ್ಯುತ್ತಮ ವಿಎಫ್‌ಎಕ್ಸ್ (VFX), ಭವ್ಯವಾದ ನಿರ್ಮಾಣ ಮೌಲ್ಯಗಳು, ಆಕರ್ಷಕ ನೋಟ ಮತ್ತು ಅನುಭವ, ರಹಮಾನ್ ಹಾಗೂ ಹ್ಯಾನ್ಸ್ ಝಿಮ್ಮರ್ ಸಂಗೀತ ಅದ್ಭುತ ಎಂದು ಕೊಂಡಾಡಿದ್ದಾರೆ.
ಪ್ರತಿಯೊಂದು ಫ್ರೇಮ್‌ನಲ್ಲೂ ಯಶ್ ಅವರನ್ನು ನೋಡುವುದು ಒಂದು ಆನಂದ. ಅವರು ಅತ್ಯಂತ ಇಷ್ಟವಾಗುವ ಖಳನಾಯಕನ ಪಾತ್ರದಲ್ಲಿ ಅದ್ಭುತ ಅಭಿನಯ ನೀಡಿದ್ದಾರೆ. ರಣ್‌ಬೀರ್ ಮತ್ತು ಸಾಯಿ ಪಲ್ಲವಿ ಅವರಿಗೆ ಶುಭಾಶಯಗಳು. ಈ ಅದ್ಭುತ ಪ್ರಯತ್ನಕ್ಕಾಗಿ ಮತ್ತು ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ತಂದಿದ್ದಕ್ಕಾಗಿ ಇಡೀ ತಂಡಕ್ಕೆ ದೊಡ್ಡ ಮೆಚ್ಚುಗೆ ಎಂದು ಶಂಕರ್ ಟ್ವೀಟ್ ಮಾಡಿದ್ದಾರೆ.
ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಸೇರಿದಂತೆ ಖ್ಯಾತ ಸೆಲೆಬ್ರೆಟಿಗಳು 'ರಾಮಾಯಣ' ಸಿನಿಮಾ ನೋಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕನ್ನಡ ಸಿನಿಮಾ ತಾರೆಯರು ಕೂಡ ಒಬ್ಬೊಬ್ಬರಾಗಿ 'ರಾಮಾಯಣ' ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ.
#Ramayana – What a spectacle!!!
— Shankar Shanmugham (@shankarshanmugh) November 6, 2026
Never seen visuals like this in Indian cinema. Huge appreciation to @malhotra_namit and @niteshtiwari22 for taking Indian cinema to international standards. Brilliant VFX, rich production values, superb look and feel, great music by @arrahman and…
The stories we've grown up hearing since childhood, coming alive so beautifully on the big screen… makes me so happy. ❤️
— Mahesh Babu (@urstrulyMahesh) November 6, 2026
Ranbir, Yash, Sai Pallavi… magical. ❤️❤️❤️@malhotra_namit & @niteshtiwari22 take a bow. Kudos to all your efforts in pulling off a film of this scale.…