ಟಾಕ್ಸಿಕ್ ರೀತಿಯ ದೊಡ್ಡ ಸಿನಿಮಾ ಸೋತಿದೆ. 'ಪ್ರೇಮದ ಊರಲಿ' ತರಹದ ಸಣ್ಣ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಬಗ್ಗೆ ಈಗ ಚಿತ್ರರಂಗದಲ್ಲಿ ಚರ್ಚೆ ನಡೀತಿದೆ. ಇನ್ನು ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಹುಚ್ಚು ಯಾಕೆ ಎನ್ನುವ ಪ್ರಶ್ನೆ ಎದ್ದಿದೆ. ಇದೇ ವಿಚಾರದ ಬಗ್ಗೆ ಹಿರಿಯ ನಟ ರಂಗಾಯಣ ರಘು ಪ್ರತಿಕ್ರಿಯಿಸಿದ್ದಾರೆ.
'ಪ್ರೇಮದ ಊರಲಿ' ಚಿತ್ರದ ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು ನಟಿಸಿದ್ದಾರೆ. ಅವರ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂತಾದೊಂದು ಯಶಸ್ಸನ್ನು ನಾವು ನಿರೀಕ್ಷಿಸಿರಲಿಲ್ಲ ಎಂದು ಅವರು ಹೇಳುತ್ತಿದ್ದಾರೆ. ನಿಜಕ್ಕೂ ಇದು ಮ್ಯಾಜಿಕ್, ಯಾವುದೇ ರಾಸಾಯನಿಕ ಗೊಬ್ಬರ ಹಾಕಿಲ್ಲ, ಇದು ಆರ್ಗಾನಿಕ್ ಗೆಲುವು ಎಂದು ಬಣ್ಣಿಸಿದ್ದಾರೆ. ಒಂದು ಸಿನಿಮಾ ಗೆಲ್ತು ಅಂತ ಅದೇ ತರಹದ ಸಿನಿಮಾ ಮಾಡಿದ್ರೆ ಜನ ನೋಡಲ್ಲ ಎಂದಿದ್ದಾರೆ. ವಿಶ್ವವಾಣಿ ಟಿವಿ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.
ಕತ್ತಲು ಕತ್ತಲು ಸಿನಿಮಾ ಗೆಲ್ತು ಅಂತ ಎಲ್ಲರೂ ನಮ್ಮದು ಪ್ಯಾನ್ ಇಂಡಿಯಾ ಆಕ್ಷನ್ ಸಿನಿಮಾ ಅಂದ್ರೆ ಹೆಂಗೆ. ಕರಾವಳಿ ಭಾಗದ ಒಂದು ಸಿನಿಮಾ ಗೆದ್ದಿದ್ದಕ್ಕೆ ಎಲ್ಲರೂ ಅಲ್ಲಿನ ದೈವಗಳ ಕಥೆ ಮಾಡಿ ಸಿನಿಮಾ ಮಾಡಿದ್ರೆ ಯಾರು ನೋಡ್ತಾರೆ ಎಂದು ರಂಗಾಯಣ ರಘು ಪ್ರಶ್ನಿಸಿದ್ದಾರೆ. ಸಿನಿಮಾ ಗೆಲುವಿಗೆ ಸಿದ್ಧಸೂತ್ರ ಎನ್ನುವುದು ಇಲ್ಲ ಎಂದಿದ್ದಾರೆ.
'ಟಾಕ್ಸಿಕ್' ಬಹಳ ವಿಭಿನ್ನ ಪ್ರಯತ್ನ. ಮಿಶ್ರಪ್ರತಿಕ್ರಿಯೆ ಸಿಕ್ತು. 'ಪ್ರೇಮದ ಊರಲಿ' ರೀತಿಯ ಸಣ್ಣ ಸಿನಿಮಾ ಗೆದ್ದಿದೆ ಏನಂತೀರಾ ? ಎನ್ನುವ ಪ್ರಶ್ನೆಗೆ "ಅದು ನೂರಾರು ಕೋಟಿ ಬ್ಯುಸಿನೆಸ್.. ಪ್ರಪಂಚದಲ್ಲಿ ಎಲ್ಲರೂ ಕಣ್ಣಿಂದ ನೋಡಿ ಕಿವಿಯಿಂದ ಕೇಳಿ ಹೃದಯಕ್ಕೆ ತಗೋತ್ತಾರೆ. ಹಾಲಿವುಡ್‌ನವರು ಅವ್ರ ಅಪ್ಪ-ಅಮ್ಮನ ಕಥೆ ಅವ್ರು ಮಾಡ್ತಾರೆ. ನಾವು ಭಾರತೀಯರು ನಮ್ಮ ಅಪ್ಪ-ಅಮ್ಮನ ಕಥೆ ಮಾಡ್ಬೇಕು. ನಮ್ಮ ನೆಲ, ಆಚಾರ, ವಿಚಾರ ಇರಬೇಕು. ಹಾಲಿವುಡ್‌ನವ್ರು ಏನು ಬೇಕಾದ್ರು ಮಾಡ್ತಾರೆ.. ಅಂತಿಮವಾಗಿ ಅವ್ರು ಕಂಟೆಂಟ್‌ಗೆ ಒದ್ದಾಡಬೇಕು, ನಮಗೂ ಕಂಟೆಂಟ್ ಬೇಕು.. 'ಕೆಜಿಎಫ್'-2 ನೋಡಿದ್ರಲ್ಲ, 2000 ಕೋಟಿ ರೂ.ವರೆಗೂ ಹೋಯ್ತು.. ಇದು ಮಿಸ್ ಹೊಡೀತು ಅಂದ್ರೆ ಯೋಚ್ನೆ ಮಾಡ್ಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದು ರಂಗಾಯಣ ರಘು ಹೇಳಿದ್ದಾರೆ.
ಮಾತು ಮುಂದುವರೆಸಿರುವ ರಂಗಾಯಣ ರಘು "ಐದಾರು ವರ್ಷದಿಂದ ಪ್ರೇಕ್ಷಕರಿಂದ ವಿಮುಖರಾಗಬೇಡಿ ಎಂದು ಸಲಹೆ ಕೊಡಲು ಬಯಸುತ್ತೇನೆ. ದೊಡ್ಡ ಸಿನಿಮಾ ಮಾಡಿ ಪರವಾಗಿಲ್ಲ. ಕೆಲ ಸಿನಿಮಾಗಳನ್ನು ನಿಮ್ಮಿಂದ ಮಾಡೋಕೆ ಸಾಧ್ಯವಿಲ್ಲ, ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಿ. ಅಪ್ಪು ಸರ್ ಪಿಆರ್‌ಕೆ ಸಂಸ್ಥೆ ಮಾಡಿ ಹೊಸಬರಿಗೆ ಅವಕಾಶ ಕೊಟ್ರು.. ಸಿನಿಮಾ ನಿರ್ಮಾಣ ಮಾಡಿದ್ರೆ ನೀವು ಪ್ರೇಕ್ಷಕರ ಮಧ್ಯೆ ಇರ್ತೀರಲ್ಲ.. ಕೆಜಿಎಫ್ ಸಿನಿಮಾ ತಗೊಂಡಿದ್ದಾರೆ ಇದನ್ನು ತಗೊಂಡಿಲ್ಲ ಅಂದ್ರೆ ಯೋಚ್ನೆ ಮಾಡಿ ಅಂತ ನಾನು ಹೇಳ್ತೀನಿ.. ಇದಕ್ಕಿಂತಲೂ ದೊಡ್ಡದು ಮಾಡೋ ಶಕ್ತಿ ನಿಮಗಿದೆ. ಅಷ್ಟು ದೊಡ್ಡಮಟ್ಟಕ್ಕೆ ಹೋಗಿ ಕೂತಿದ್ದೀರಾ.. 'ಟಾಕ್ಸಿಕ್' ಸಿನಿಮಾ ಗೆಲ್ಲಬೇಕಿತ್ತು. ಆದ್ರೆ ಸಾಧ್ಯವಾಗ್ಲಿಲ್ಲ, ಯಾಕೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಈ ವೀಡಿಯೋ ವೈರಲ್ ಆಗ್ತಿದೆ.
Raghanna matured words about Toxic disaster 🔥👏#ToxicTheMovie #PremadaOorali pic.twitter.com/gJsmATO5Uh
— ʙᴀɴɢʙᴀɴɢ😎🔥 (@RoonaVikranth) October 7, 2026