ಹೊಸಬರ 'ಪ್ರೇಮದ ಊರಲಿ' ಸಿನಿಮಾ ಎಲ್ಲೆಲ್ಲೂ ಹವಾ ಸೃಷ್ಟಿಸಿದೆ. ಕನ್ನಡದ ಬಳಿಕ ಈಗ ತೆಲುಗಿಗೂ ಸಿನಿಮಾ ಡಬ್ ಆಗಿ ಬಿಡುಗಡೆ ಆಗಿದೆ. ಅಲ್ಲಿನ ಪ್ರೇಕ್ಷಕರು ಸಿನಿಮಾ ಮೆಚ್ಚಿಕೊಂಡಿದ್ದಾರೆ. ಜೀವನದ ಮೌಲ್ಯಗಳು, ಭಾವನೆಗಳ ಮೆರವಣಿಗೆಯ ಸುಮಧುರ ಅನುಭವಕ್ಕೆ ಸಾಕ್ಷಿ ಆಗಿದ್ದಾರೆ. ಕರ್ನಾಟಕದಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಇದೀಗ ವಿಶ್ವದಾದ್ಯಂತ ಸಿನಿಮಾ ತೆರೆಗಪ್ಪಳಿಸಲು ಸಜ್ಜಾಗಿದೆ.
ಕನ್ನಡದ 'ಕೆಜಿಎಫ್' ಹಾಗೂ 'ಕಾಂತಾರ' ಸರಣಿ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದವು. 'ಕೆಜಿಎಫ್' ಚಿತ್ರ ಏಕಕಾಲಕ್ಕೆ ದೊಡ್ಡದಾಗಿ ಬಿಡುಗಡೆ ಆಗಿತ್ತು. ಆದರೆ 'ಕಾಂತಾರ' ಕನ್ನಡದಲ್ಲಿ ಗೆದ್ದ ಬಳಿಕ ವಿವಿಧ ಭಾಷೆಗಳಿಗೆ ಡಬ್ ಆಗಿ ಜಯಭೇರಿ ಬಾರಿಸಿತ್ತು. 'ಸು ಫ್ರಂ ಸೋ' ಚಿತ್ರದ ಕೂಡ ಇದೇ ರೀತಿ ಮ್ಯಾಜಿಕ್ ಮಾಡಿತ್ತು. ಅದೇ ಹಾದಿಯಲ್ಲಿ ಈಗ 'ಪ್ರೇಮದ ಊರಲಿ' ಪಯಣ ದೊಡ್ಡದಾಗುತ್ತಿದೆ.
ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ವಿಶ್ವದಾದ್ಯಂತ 'ಪ್ರೇಮದ ಊರಲಿ' ಚಿತ್ರದ ವಿತರಣಾ ಹಕ್ಕನ್ನು ಕೊಂಡುಕೊಂಡಿದೆ. ಚಿತ್ರವನ್ನು ಅಕ್ಟೋಬರ್ 9ಕ್ಕೆ ವಿಶ್ವದಾದ್ಯಂತ ಭರ್ಜರಿಯಾಗಿ ರಿಲೀಸ್ ಮಾಡಲು ಸಂಸ್ಥೆ ಮುಂದಾಗಿದೆ. ಉತ್ತರ ಭಾರತದಲ್ಲಿ ಅನಿಲ್ ಥಡಾನಿ ಮೂಲಕ ಸಿನಿಮಾ ಬಿಡುಗಡೆ ಆಗುತ್ತಿರವುದು ವಿಶೇಷ. 'ಕೆಜಿಎಫ್' ಹಾಗೂ 'ಕಾಂತಾರ' ಸರಣಿ ಸಿನಿಮಾಗಳನ್ನು ಅನಿಲ್ ಥಡಾನಿ ಉತ್ತರ ಭಾರತದಲ್ಲಿ ಪ್ರೇಕ್ಷಕರ ಮುಂದಿಟ್ಟು ಸಕ್ಸಸ್ ಕಂಡಿದ್ದರು.
ದಾಖಲೆ ಸಂಖ್ಯೆಯ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಕೆಆರ್‌ಜಿ ಸಂಸ್ಥೆ ತಯಾರಿ ನಡೆಸಿದೆ. ವಿಶ್ವದಾದ್ಯಂತ ಕನ್ನಡಿಗರಿಂದ ಭಾರೀ ಬೇಡಿಕೆ ಶುರುವಾಗಿದ್ದು ಅದಕ್ಕೆ ತಕ್ಕಂತೆ ಸಿನಿಮಾ ತೆರೆಮೇಲೆ ಬರಲಿದೆ. 'ಪ್ರೇಮದ ಊರಲಿ' ಚಿತ್ರದ ಬಗ್ಗೆ ಒಳ್ಳೆ ಮಾತುಗಳು ಕೇಳಿಬರುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ನಿರ್ಮಾಪಕ ಹಾಗೂ ವಿತರಕ ಕಾರ್ತಿಕ್ ಗೌಡ ಬಳಿ ಕೆಲವರು ಮನವಿ ಮಾಡಿದ್ದರು. ಈ ಚಿತ್ರವನ್ನು ದೊಡ್ಡಮಟ್ಟದಲ್ಲಿ ಪ್ರೇಕ್ಷಕರ ಮುಂದೆ ತರಲು ಚಿತ್ರತಂಡದ ಜೊತೆ ಕೈಜೋಡಿಸಿ ಎಂದಿದ್ದರು. ಅದರಂತೆ ಈಗ ಕೆಆರ್‌ಜಿ ಸಂಸ್ಥೆ ಈ ಪ್ರಯತ್ನಕ್ಕೆ ಮುಂದಾಗಿದೆ.
ಎರಡನೇ ಶನಿವಾರ ಕೂಡ 'ಪ್ರೇಮದ ಊರಲಿ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದೆ. 1 ಲಕ್ಷಕ್ಕೂ ಹೆಚ್ಚು ಟಿಕೆಟ್ ಬುಕ್ ಆಗಿ 3 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಆಗಿರುವ ಅಂದಾಜಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಸಿನಿಮಾ ತೆರೆಮೇಲೆ ದರ್ಬಾರ್ ನಡೆಸುತ್ತಿದೆ.
Get ready North India to experience the saga of love💗
— KRG Studios (@KRG_Studios) October 4, 2026
Premada Ooralli releasing in North India by AA Films
Catch in theatres from 09th Oct, 2026 pic.twitter.com/se8ZclaMg9