ಕಮಲ್ ಹಾಸನ್ ಹೊಸ ಸಿನಿಮಾ ಟೈಟಲ್ ಘೋಷಣೆಯಾಗಿದೆ. 'ಸಂಡಿಯಾರ್' ಹೆಸರಿನ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಕಮಲ್ ನಟಿಸುತ್ತಿದ್ದಾರೆ. ತಮ್ಮದೇ ರಾಜ್‌ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಸಿನಿಮಾ ತೆರೆಗೆ ತರುತ್ತಿದ್ದಾರೆ. ಕಮಲ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.
ಒಂದ್ಕಡೆ ರಾಜಕೀಯರಂಗದಲ್ಲಿ ಬ್ಯುಸಿಯಾಗಿರುವ ಕಮಲ್ ಮತ್ತೊಂದು ಕಡೆ ಸಿನಿ ಜರ್ನಿ ಮುಂದುವರೆಸಿದ್ದಾರೆ. ಕೆಲ ವರ್ಷಗಳ ಕಾಲ ಅವರು ನಟಿಸಿದ ಯಾವುದೇ ಸಿನಿಮಾ ಸದ್ದು ಮಾಡಲಿಲ್ಲ. ಕಮಲ್ ದರ್ಬಾರ್ ಮುಗೀತು ಎಂದುಕೊಳ್ಳುವ ಸಮಯದಲ್ಲೇ 'ವಿಕ್ರಂ' ಸಿನಿಮಾ ಬಂದು ಸಂಚಲನ ಸೃಷ್ಟಿಸಿತ್ತು. ಬಳಿಕ ಮತ್ತೆ ಕಮಲ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರು. 'ಥಗ್ ಲೈಫ್' ಸಿನಿಮಾ ಸೋಲು ಭಾರೀ ಪೆಟ್ಟು ಕೊಟ್ಟಿತ್ತು.
ಸದ್ಯ 'ಸಂಡಿಯಾರ್' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ರಜನಿಕಾಂತ್ ಜೊತೆ ಮಲ್ಟಿಸ್ಟಾರರ್ ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ. 'ಸಂಡಿಯಾರ್' ಅಂದ್ರೆ ರೌಡಿ, ಜಗಳಗಂಟ ಎನ್ನುವ ಅರ್ಥವಿದೆ. 22 ವರ್ಷಗಳ ಹಿಂದೆ 'ವಿರುಮಾಂಡಿ' ಎಂಬ ಚಿತ್ರದಲ್ಲಿ ಕಮಲ್ ನಟಿಸಿದ್ದರು. ಆ ಚಿತ್ರಕ್ಕೂ 'ಸಂಡಿಯಾರ್' ಎನ್ನುವ ಟೈಟಲ್ ಇಡಲು ನಿರ್ಧರಿಸಿದ್ದರು. ಕೊನೆಗೆ ಬದಲಾಗಿತ್ತು. ಅಂತೂ ಇಂತೂ ಆ ಟೈಟಲ್‌ನಲ್ಲೇ ಕಮಲ್ ಹಾಸನ್ ನಟಿಸುವಂತಾಗಿದೆ.
12 ವರ್ಷಗಳ ಹಿಂದೆ ಇದೇ ಟೈಟಲ್‌ನಲ್ಲಿ ಮತ್ತೊಂದು ಸಿನಿಮಾ ಬಂದು ಹೋಗಿತ್ತು. ಹೊಸ ಪೋಸ್ಟರ್‌ನಲ್ಲಿ ಕಮಲ್ ಹಾಸನ್ ಪಿಸ್ತೂಲ್ ಹಿಡಿದು ಖಡಕ್ ಆಗಿ ದರ್ಶನ ಕೊಟ್ಟಿದ್ದಾರೆ. "6 ಸುತ್ತುಗಳು, ಕಿಂಚಿತ್ತೂ ಕರುಣೆಯಿಲ್ಲ. ಸೇಡು ತೃಪ್ತಿಯನ್ನು ನೀಡಬಹುದು, ಆದರೆ... ನಮ್ಮ 'ಸಂಡಿಯಾರ್'ಗೆ ಹುಟ್ಟುಹಬ್ಬದ ಶುಭಾಶಯಗಳು! ಚಿತ್ರೀಕರಣ ಇಂದೇ ಆರಂಭ" ಎಂದು ಚಿತ್ರತಂಡ ಪೋಸ್ಟ್ ಮಾಡಿದೆ. ಎಸ್. ಯು ಅರುಣ್‌ಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಎಸ್. ಯು ಅರುಣ್ ಕುಮಾರ್ ನಿರ್ದೇಶನದ ಆರನೇ ಸಿನಿಮಾ 'ಸಂಡಿಯಾರ್'. ಇದಕ್ಕೂ ಮುನ್ನ 'ಪನ್ನೈಯಾರುಮ್ ಪದ್ಮಿನಿಯುಮ್', 'ಸೇತುಪತಿ', 'ಸಿಂಧುಬಾದ್', 'ಚಿತ್ತಾ' ಹಾಗೂ 'ವೀರ ಧೀರ ಸೂರ' ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದರು.
6 ROUNDS, ZERO MERCY 🔥
— Raaj Kamal Films International (@RKFI) November 7, 2026
Revenge does give satisfaction, but…
Happy Birthday to our, SANDIYAR!
SHOOT BEGINS TODAY #KamalHaasan #SUArunkumar #Sandiyar #சண்டியர்#SandiyarSambavam #HappyBirthdayKamalHaasan #HBDKamalHaasan #CelebratingKamalHaasan @ikamalhaasan #Mahendran… pic.twitter.com/cPOGMVAZ69