'ರಾಮಾಯಣ' ಚಿತ್ರದಲ್ಲಿ ಮಂಡೋದಿಯಾಗಿ ಕಾಜಲ್ ಅಗರ್‌ವಾಲ್ ನಟಿಸಿದ್ದಾರೆ. ಒಂದೆರಡು ಸನ್ನಿವೇಶಗಳಲ್ಲಿ ಕಾಣಿಸಿಕೊಂಡರೂ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಚಿತ್ರದ ಶೂಟಿಂಗ್ ಅನುಭವವನ್ನು ಕಾಜಲ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು 'ಇಂಡಿಯನ್- 2' ಸಿನಿಮಾ ಸೆಟ್‌ನಲ್ಲಿ ಕ್ರೇಜ್ ಉರುಳಿಬಿದ್ದ ನಡೆದ ದುರಂತವನ್ನು ಆಕೆ ನೆನಪಿಸಿಕೊಂಡಿದ್ದಾರೆ.

2020ರ ಫೆಬ್ರವರಿ 19ರಂದು ಚೆನ್ನೈನ ಇವಿಪಿ (EVP) ಫಿಲ್ಮ್ ಸಿಟಿಯಲ್ಲಿ 'ಇಂಡಿಯನ್ 2' ಸಿನಿಮಾ ಚಿತ್ರೀಕರಣ ನಡೀತಿತ್ತು. ರಾತ್ರಿ ಚಿತ್ರೀಕರಣದ ವೇಳೆ ದೊಡ್ಡ ಕ್ರೇಜ್ ಒಂದು ಚಿತ್ರೀಕರಣಕ್ಕೆ ಹಾಕಿದ್ದ ಡೇರೆ ಮೇಲೆ ಉರುಳಿ ಬಿದ್ದಿತ್ತು. ಕ್ರೇನ್ ದುರಂತದಲ್ಲಿ ಮೂವರು ಸಿಬ್ಬಂದಿ ಸಾವನ್ನಪ್ಪಿ, 9 ಮಂದಿ ಗಾಯಗೊಂಡಿದ್ದರು. ಅವತ್ತು ಆ ಜಾಗದಲ್ಲಿ ನಟಿ ಕಾಜಲ್ ಅಗರ್‌ವಾಲ್ ಸಹ ಇದ್ದರು. ಆ ದಿನ ಏನಾಯ್ತು ಎಂದು ಆಕೆ ನೆನಪಿಸಿಕೊಂಡಿದ್ದಾರೆ.

'ರಾಮಾಯಣ' ಸಿನಿಮಾ ಸಕ್ಸಸ್ ಸಂಭ್ರಮದಲ್ಲಿ Humans of Bombay ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಕಾಜಲ್ ಅಗರ್‌ವಾಲ್ ಮಾತನಾಡಿದ್ದಾರೆ. ಆ ದುರಂತ ನೆನೆದು "ಅವತ್ತು ನನ್ನ ಜೀವವೇ ಮೊದಲು ಹೋಗಬೇಕಿತ್ತು" ಎಂದು ದಿಗ್ಬ್ರಾಂತಿ ವ್ಯಕ್ತಪಡಿಸಿದ್ದಾರೆ. "ಚಿತ್ರೀಕರಣದ ಸೆಟ್‌ನಲ್ಲಿ ಸಾಮಾನ್ಯವಾಗಿ ಶಾಟ್ ಮುಗಿದ ಬಳಿಕ ಎಲ್ಲರೂ ಮಾನಿಟರ್ ಸುತ್ತಲೂ ಕುಳಿತಿದ್ದರು. ಅಂದು ಒಂದು ಆಕ್ಷನ್ ದೃಶ್ಯದ ಚಿತ್ರೀಕರಣಕ್ಕಾಗಿ 80 ವರ್ಷದ ವೃದ್ಧೆಯ ವೇಷ ಧರಿಸಿದ್ದೆ. ಇದ್ದಕ್ಕಿದಂತೆ ಮಾನಿಟರ್ ಸುತ್ತಾ ಕುಳಿತವರು ಎದ್ದು ಓಡುತ್ತಿದ್ದರು. ಆಗ ಟೇಬಲ್ ತಾಗಿ ನಾನು ಕೆಳಗೆ ಬಿದ್ದೆ. ಹಿಂದಿರುಗಿ ನೋಡಿದಾಗ 100 ಅಡಿ ಎತ್ತರದ ಬೃಹತ್ ಕ್ರೇನ್ ನೇರವಾಗಿ ಬಿತ್ತು" ಎಂದು ಆ ಘಟನೆ ನೆನೆದು ಆತಂಕ ವ್ಯಕ್ತಪಡಿಸಿದ್ದಾರೆ.

ಆ ಕ್ಷಣದಲ್ಲಿ ನನಗೆ ಏನು ಮಾಡಬೇಕೆಂದೇ ತೋಚದೆ ದಿಗ್ಭ್ರಮೆಯಾಗಿತ್ತು. ಆಗ ಯಾರೋ ಕೈ ಹಿಡಿದು ಪಕ್ಕಕ್ಕೆ ಎಳೆದಂತೆ ಅವರಿಗೆ ಭಾಸವಾಯಿತು. ಕ್ರೇನ್ ಪಕ್ಕದಲ್ಲೇ ಬಿದ್ದಿತ್ತು ಎಂದು ಹೇಳಿ ಕಾಜಲ್ ಆ ಕಹಿ ಘಟನೆ ಬಗ್ಗೆ ಹೇಳಿದ್ದಾರೆ. ಆ ಬಳಿಕ ನಾನು ಶ್ರೀಕೃಷ್ಣನ ಭಕ್ತಳಾದೆ ಎಂದು ವಿವರಿಸಿದ್ದಾರೆ. ಈ ಘಟನೆ ಬಳಿಕ 'ಇಂಡಿಯನ್- 2' ಸಿನಿಮಾ ಚಿತ್ರೀಕರಣ ಬಹಳ ದಿನ ನಿಂತು ಹೋಗಿತ್ತು. ಮೃತಪಟ್ಟವರು ಕುಟುಂಬಗಳಿಗೆ ಹಾಗೂ ಗಾಯಗೊಂಡವರಿಗೆ ನಿರ್ಮಾಪಕರು ಬೆಂಬಲವಾಗಿ ನಿಂತರು. ಬಹಳ ತಡವಾಗಿ ಚಿತ್ರೀಕರಣ ಮುಗಿಸಿ ಸಿನಿಮಾ ತೆರೆಗೆ ಬಂದಿತ್ತು.

'ಇಂಡಿಯನ್- 2' ಸಿನಿಮಾ ಹೀನಾಯವಾಗಿ ಸೋತಿತ್ತು. 'ಇದೀಗ ಇಂಡಿಯನ್- 3' ಸಿನಿಮಾ ತೆರೆಗೆ ತರಲು ಶಂಕರ್ ಮುಂದಾಗಿದ್ದಾರೆ. ಕಾರಣಾಂತರಗಳಿಂದ ಆ ಸಿನಿಮಾ ಡಬ್ಬಾ ಸೇರುವಂತಾಗಿದೆ.