ನೆಲ್ಸನ್ ನಿರ್ದೇಶನದ 'ಜೈಲರ್ -2 ' ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿ ಬಾಕ್ಸಾಫೀಸ್ ಶೇಕ್ ಆಗ್ತಿದೆ. ಅಭಿಮಾನಿಗಳು ಗಂಟೆಗೆ ಸಾವಿರ ಸಾವಿರ ಟಿಕೆಟ್ಸ್ ಬುಕ್ ಮಾಡ್ತಿದ್ದಾರೆ. ಕರ್ನಾಟಕದಲ್ಲಿ ಕೂಡ ಸಿನಿಮಾ ದೊಡ್ಡಮಟ್ಟದಲ್ಲಿ ಬಿಡುಗಡೆ ಆಗ್ತಿದ್ದು ಟಿಕೆಟ್ ದರ 1000 ರೂ. ಗಡಿ ದಾಟಿದೆ. ಇದೆಲ್ಲದರ ನಡುವೆ ಸಿನಿಮಾ ಬಜೆಟ್ ಬಗ್ಗೆ ಚರ್ಚೆ ನಡೀತಿದೆ.

3 ವರ್ಷಗಳ ಹಿಂದೆ ಬಂದಿದ್ದ 'ಜೈಲರ್' ಸಿನಿಮಾ ಸೀಕ್ವೆಲ್ ಇದು. ಸನ್ ಪಿಕ್ಚರ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಚಿತ್ರವನ್ನು ನಿರ್ಮಾಣ ಮಾಡಿದೆ. ನೆಲ್ಸನ್ ಹಾಗೂ ತಲೈವಾ ಕಾಂಬಿನೇಷನ್ ಜೊತೆ ಅನಿರುದ್ಧ್ ರವಿಚಂದರ್ ಕೂಡ ಜೊತೆಯಾಗಿರುವುದು ಹೈಪ್ ಹೆಚ್ಚಿಸಿದೆ. 'ಜೈಲರ್' ಚಿತ್ರದ ಲಾಭದಿಂದ ನಿರ್ಮಾಪಕರು ಖುಷಿಯಾಗಿದ್ದು ರಜನಿಕಾಂತ್, ನೆಲ್ಸನ್ ಹಾಗೂ ಅನಿರುದ್ಧ್‌ಗೆ ಕಾರುಗಳನ್ನು ಗಿಫ್ಟ್ ಕೊಟ್ಟಿದ್ದರು. ಜೊತೆಗೆ ಲಾಭದಲ್ಲಿ ಪಾಲು ನೀಡಿ ಮತ್ತೊಂದು ಚಿತ್ರಕ್ಕೆ ಮಾತುಕತೆ ನಡೆಸಿದ್ದರು.

'ಜೈಲರ್' ಸಕ್ಸಸ್ ನೋಡಿ ಈಗ ಅದಕ್ಕಿಂತ ದೊಡ್ಡಮಟ್ಟದಲ್ಲಿ ಸೀಕ್ವೆಲ್ ಕಟ್ಟಿಕೊಡಲಾಗಿದೆ. ಸಿನಿಮಾ ಪ್ರೊಡಕ್ಷನ್ ಕಾಸ್ಟ್ ಕಮ್ಮಿ ಇದ್ದರೂ ಕಲಾವಿದರು, ತಂತ್ರಜ್ಞರ ಸಂಭಾವನೆ ಹೆಚ್ಚಾಗಿದೆ. ರಜನಿಕಾಂತ್ ಸಂಭಾವನೆ ಜೊತೆಗೆ ಲಾಭದಲ್ಲಿ ಪಾಲು ಪಡೆಯುತ್ತಿದ್ದಾರೆ. ಹಾಗಾಗಿ ಸಿನಿಮಾ ಎಷ್ಟು ದೊಡ್ಡಮಟ್ಟದಲ್ಲಿ ಗೆಲ್ಲುತ್ತೋ ಅಷ್ಟು ದೊಡ್ಡದಾಗಿ ಅವರ ಆದಾಯ ಹೆಚ್ಚಾಗಲಿದೆ.

ಚಿತ್ರದ ಬಜೆಟ್

ಅಧಿಕೃತವಾಗಿ ಸಿನಿಮಾ ಬಜೆಟ್ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ ಫಿಲ್ಮಿಬೀಟ್ ವರದಿ ಪ್ರಕಾರ 250ರಿಂದ 300 ಕೋಟಿ ರೂ. ಬಜೆಟ್‌ನಲ್ಲಿ 'ಜೈಲರ್'-2 ಸಿನಿಮಾ ನಿರ್ಮಾಣವಾಗಿದೆ. ಇದರಲ್ಲಿ ಕಲಾವಿದರ ಸಂಭಾವನೆ ಕೂಡ ಸೇರಿದೆ. 100 ಕೋಟಿ ಬಜೆಟ್ ಅನ್ನು ಮಾತ್ರ ಚಿತ್ರೀಕರಣಕ್ಕೆ ಬಳಸಲಾಗಿದೆ. ಇನ್ನುಳಿದ 200 ಕೋಟಿ ಕಲಾವಿದರು ಹಾಗೂ ತಂತ್ರಜ್ಞರಿಗೆ ಸಂಭಾವನೆ ರೂಪದಲ್ಲಿ ಕೊಟ್ಟಿದ್ದಾರೆ ಎನ್ನಲಾಗ್ತಿದೆ.

ರಜನಿಕಾಂತ್ ಸಂಭಾವನೆ ?

ತಲೈವಾ ಸಂಭಾವನೆ 100 ಕೋಟಿ ರೂ. ಗಡಿ ದಾಟಿ ಬಹಳ ವರ್ಷಗಳೇ ಕಳೆದಿದೆ. ಪ್ರತಿ ಚಿತ್ರಕ್ಕೆ ಅವರು ಅಷ್ಟು ಚಾರ್ಜ್ ಮಾಡ್ತಾರೆ. ಸದ್ಯ 'ಜೈಲರ್'- 2 ಚಿತ್ರಕ್ಕೆ 110 ಕೋಟಿ ರೂ. ಸಂಭಾವನೆ ರೂಪದಲ್ಲಿ ನೇರವಾಗಿ ಸಿಗಲಿದ್ದು ಲಾಭದಲ್ಲಿ ಕೂಡ ಪಾಲು ಕೊಡುವಂತೆ ಮಾತುಕತೆ ನಡೆದಿದೆ. ಹಾಗಾಗಿ ಒಟ್ಟು ಸಂಭಾವನೆ 150 ಕೋಟಿ ರೂ. ದಾಟಬಹುದು ಎಂದು ಕಾಲಿವುಡ್ ಅಂಗಳದಲ್ಲಿ ಚರ್ಚೆ ನಡೀತಿದೆ.

ಇನ್ನುಳಿದವರ ಸಂಭಾವನೆ

ರಜನಿಕಾಂತ್ ಬಳಿಕ ಮೋಹನ್ ಲಾಲ್ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಸಣ್ಣ ಅತಿಥಿ ಪಾತ್ರಕ್ಕೆ ಅವರಿಗೆ ಸಿಗುವ ಮೊತ್ತ ಭಾರೀ ದೊಡ್ಡದು ಎನ್ನಲಾಗ್ತಿದೆ. 'ಜೈಲರ್' ಚಿತ್ರಕ್ಕೆ ಶಿವಣ್ಣ 4ರಿಂದ 5 ಕೋಟಿ ರೂ. ಸಂಭಾವನೆ ಪಡೆದಿದ್ದರು ಎನ್ನಲಾಗಿತ್ತು. ನರಸಿಂಹ ಪಾತ್ರ ಹಿಟ್ ಆಗಿದ್ದು ಗೊತ್ತೇಯಿದೆ. ಹಾಗಾಗಿ ಸೀಕ್ವೆಲ್‌ನಲ್ಲಿ ಸೆಂಚುರಿ ಸ್ಟಾರ್ ಸಂಭಾವನೆ ಮತ್ತಷ್ಟು ಹೆಚ್ಚಾಗಿದೆ. ಚಿತ್ರ ನಿರ್ದೇಶನಕ್ಕಾಗಿ ನೆಲ್ಸನ್, ಸಂಗೀತ ಸಂಯೋಜನೆಗಾಗಿ ಅನಿರುದ್ಧ್ ಕೂಡ ಕೋಟಿ ಕೋಟಿ ಸಂಭಾವನೆ ಜೇಬಿಗಿಳಿಸಿದ್ದಾರೆ. ಹೃತಿಕ್ ರೋಷನ್ ಯಾವುದೇ ಸಂಭಾವನೆ ಪಡೆಯದೇ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.