ನೆಲ್ಸನ್ ನಿರ್ದೇಶನದಲ್ಲಿ ರಜನಿಕಾಂತ್ ನಟನೆಯ 'ಜೈಲರ್- 2' ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಚಿತ್ರದ ಒಂದೊಂದೇ ಸಾಂಗ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಆದರೆ 'ಜೈಲರ್' ಆಲ್ಬಮ್ ಮುಂದೆ ಸೀಕ್ವೆಲ್ ಸಾಂಗ್ಸ್ ಡಲ್ ಆಗಿದೆ. ಹೊಸದಾಗಿ ಬಿಡುಗಡೆ ಆಗಿರುವ 'ಬಿಂದಾಸ್' ಸಾಂಗ್ ಕೂಡ ಅಷ್ಟೇನು ಕಿಕ್ ಕೊಡ್ತಿಲ್ಲ.
ರಜನಿಕಾಂತ್ ಹಾಗೂ ಅನಿರುದ್ಧ್ ರವಿಚಂದರ್ ಕಾಂಬೋ ಹಿಟ್ ಆಗಿದೆ. ತಲೈವಾ ಸಿನಿಮಾ ಅಂದ್ರೆ ಕಾಲಿವುಡ್ ರಾಕ್‌ಸ್ಟಾರ್ ಕೊಂಚ ಹೆಚ್ಚೇ ಕೇರ್ ತಗೊಂಡು ಟ್ಯೂನ್ ಹಾಕ್ತಾರೆ. ಆದರೆ 'ಜೈಲರ್- 2' ಚಿತ್ರದ ಯಾವುದೇ ಸಾಂಗ್ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿಲ್ಲ. ಬರ್ತಾ ಬರ್ತಾ ಅನಿರುದ್ದ್ ಹವಾ ಕಮ್ಮಿ ಆಗ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ. ಕ್ಯಾಚಿ ಟ್ಯೂನು, ಲಿರಿಕ್ಸ್ ಮೂಲಕ ಅನಿರುದ್ಧ್ ಸಾಂಗ್ಸ್ ಸದಾ ಸದ್ದು ಮಾಡ್ತಾವೆ. ತೆಲುಗಿನ 'ದಿ ಪ್ಯಾರಡೈಸ್' ಚಿತ್ರವನ್ನು 'ಆಯಾ ಶೇರ್' ಸಾಂಗ್‌ನಿಂದಲೇ ಫೇಮಸ್ ಮಾಡಿಬಿಟ್ಟಿದ್ದರು. ಆದರೆ ಯಾಕೋ ಈಗ ಮಿಸ್ ಹೊಡೀತಿದೆ.
ರಜನಿಕಾಂತ್ ನಟನೆಯ ಮುಂದಿನ ಎರಡು ಸಿನಿಮಾಗಳಿಗೂ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಮಾಡ್ತಿದ್ದಾರೆ. ಇನ್ನು ತಮ್ಮ ಹಂಟಿಂಗ್ ಬಿಜಿಎಂ ಮೂಲಕ ಅನಿ ಗಮನ ಸೆಳೆಯುತ್ತಾರೆ. 'ಜೈಲರ್- 2' ಟೀಸರ್‌ನಲ್ಲಿದ್ದ ಬಿಜಿಎಂ ಕೂಡ ಭರ್ಜರಿ ಆಗಿತ್ತು. ಆದರೆ ಸಾಂಗ್ಸ್‌ನಲ್ಲಿ ಆ ಜಾದೂ ಕಂಡು ಬರ್ತಿಲ್ಲ. 'ಜೈಲರ್' ಚಿತ್ರದ 'ಕಾವಾಲಯ್ಯ' ಹಾಗೂ 'ಕೂಲಿ' ಚಿತ್ರದ 'ಮೋನಿಕಾ' ಸಾಂಗ್ಸ್ ಎದುರು ಈಗ ಬಂದಿರುವ 'ಅಲಾ ಬೊಲೇಲೋ' ಹಾಗೂ 'ಬಿಂದಾಸ್' ಸಾಂಗ್‌ಗಳನ್ನು ಹೋಲಿಕೆ ಮಾಡಲು ಸಾಧ್ಯವಾಗ್ತಿಲ್ಲ.
ಯಶ್ ನಟನೆಯ 'ಟಾಕ್ಸಿಕ್' ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಮಾಡ್ತಾರೆ ಎನ್ನುವ ವದಂತಿ ಹರಿದಾಡಿತ್ತು. ಅಂತಿಮವಾಗಿ ರವಿ ಬಸ್ರೂರು ಆ ಜವಾಬ್ದಾರಿಯನ್ನು ವಹಿಸಿಕೊಂಡು ಗೆದ್ದಿದ್ದರು. ಸದ್ಯ 'ಜೈಲರ್- 2' ಆಲ್ಬಮ್ ಕೇಳಿದ್ಮೇಲೆ 'ಟಾಕ್ಸಿಕ್' ಚಿತ್ರಕ್ಕೆ ಅನಿ ಮ್ಯೂಸಿಕ್ ಮಾಡದೇ ಇದ್ದಿದ್ದೇ ಒಳ್ಳೆದಾಯ್ತು ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ.