ನಟ ಶಿವರಾಜ್‌ಕುಮಾರ್ ಹಾಗೂ ನಟ ಜಗ್ಗೇಶ್ ಆತ್ಮೀಯ ಸ್ನೇಹಿತರು. ಜಗ್ಗಣ್ಣ ಮೊದಲಿನಿಂದಲೂ ದೊಡ್ಮನೆ ಜೊತೆ ಆತ್ಮೀಯ ಅನುಬಂಧ ಇಟ್ಟುಕೊಂಡಿದ್ದಾರೆ. ನವರಸನಾಯಕನ ಕಾಮಿಡಿ ಟೈಮಿಂಗ್ ನೋಡಿ ವರನಟ ಡಾ. ರಾಜ್‌ಕುಮಾರ್ ಕೂಡ ಅಭಿಮಾನಿ ಆಗಿಬಿಟ್ಟಿದ್ದರು. ಇತ್ತೀಚೆಗೆ ಜಗ್ಗೇಶ್ ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿರುವ ಶಿವಣ್ಣನ ಮನೆಗೆ ಭೇಟಿ ನೀಡಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಈ ಆತ್ಮೀಯ ಭೇಟಿಯ ಬಗ್ಗೆ ಜಗ್ಗೇಶ್ ಪೋಸ್ಟ್ ಮಾಡಿದ್ದಾರೆ. "ಇಂದು ನನ್ನ ನಲ್ಮೆಯ ಸಹೋದರ ಶಿವರಾಜ್ ಕುಮಾರ್ ಅವರ ಮನೆಗೆ ತೆರಳಿ ಅರ್ಧಘಂಟೆ ಕಾಲಕಳೆದು ಬಂದೆ. 40ವರ್ಷದ ಆ ಆತ್ಮೀಯ ಭಾವ ಕರಗದೆ ಕಲ್ಪವೃಕ್ಷವಾಗೆ ಉಳಿದಿದೆ.. ಅವರ ಶ್ರೀಮತಿ ಗೀತ ಮನೆಗೆ ಬಂದ ಅಣ್ಣನಂತೆ ತಮ್ಮ ಮಮತೆ ನನಗೆ ವ್ಯಕ್ತಪಡಿಸಿ ಕೈಗಡಿಯಾರ ಕೊಡಿಸಿದ್ದು ಕಂಡು ಭಾವುಕನಾದೆ..ನನ್ನ ಪ್ರೀತಿಯ ರಾಜಣ್ಣ ಅವರ ಸರ್ವಗುಣ ಮಗನಿಗೆ ಧಾರೆ ಎರೆದು ಹೋಗಿದ್ದಾರೆ.. ರಾಜಣ್ಣನ ಜೊತೆ ಕೂತ ದಿನಗಳು ಮನಸ್ಸಿನಲ್ಲಿ ತರಂಗದಂತೆ ಮರುಕಳಿಸಿದವು.. ಅವರ ಕುಟುಂಬಕ್ಕೆ ಸಂತೋಷ ಸಡಗರ ಚಿರಾಸ್ಥಿಯಂತೆ ನಿತ್ಯ ನಿರಂತರ ರಾಯರಕೃಪೆಯಿಂದ ಸಿಗಲಿ" ಎಂದು ಬರೆದುಕೊಂಡಿದ್ದಾರೆ.
ಚಿತ್ರರಂಗದಲ್ಲಿ ಶಿವರಾಜ್‌ಕುಮಾರ್ ಅವರಿಗೆ ಅಣ್ಣನ ಸ್ಥಾನ ಇದೆ. ಇನ್ನು ಅಣ್ಣ-ತಂಗಿ ಬಾಂಧವ್ಯದ ಸಿನಿಮಾಗಳಲ್ಲಿ ಕೂಡ ನಟಿಸಿ ಮನೆ ಮಾತನಾಡಿದ್ದಾರೆ. ಇತ್ತೀಚೆಗೆ ರಕ್ಷಾಬಂಧನ್ ಹಿನ್ನೆಲೆಯಲ್ಲಿ ಕೆಲವರು ಅವರ ಕೈಗೆ ರಾಖಿ ಕಟ್ಟಿಕೊಟ್ಟಿದ್ದರು. ಇದೀಗ ಜಗ್ಗಣ್ಣ ಕೂಡ ಶಿವಣ್ಣನ ಮನೆಗೆ ತೆರಳಿ ರಾಖಿ ಕಟ್ಟಿದ್ದಾರೆ. ವರ್ಸಾಶೆಯ ಗ್ರೆಸಾ ರಿಯಾಕ್ಷನ್ ವಾಚನ್ನು ಜಗ್ಗೇಶ್ ಅವರ ಕೈಗೆ ಶಿವಣ್ಣ-ಗೀತಾ ದಂಪತಿ ಕಟ್ಟಿದ್ದಾರೆ. ಅಂದಾಜು 2 ಲಕ್ಷ ರೂ. ಬೆಲೆಬಾಳುವ ವಾಚ್ ಇದು. ಅತ್ಯುನ್ನತ ತಂತ್ರಜ್ಞಾನ ಈ ವಾಚ್‌ನಲ್ಲಿದೆ.
'ಜೋಡಿ' ಎಂಬ ಚಿತ್ರದಲ್ಲಿ ಶಿವಣ್ಣ- ಜಗ್ಗೇಶ್ ಒಟ್ಟಿಗೆ ನಟಿಸಿದ್ದರು. ಇನ್ನುಳಿದಂತೆ ಎಲ್ಲೆ ಸಿಕ್ಕರೂ ಅದೇ ಸೋದರ ಬಾಂಧವ್ಯ ಆತ್ಮೀಯತೆ ಇರುತ್ತದೆ. ಇದೀಗ ಮತ್ತೊಮ್ಮೆ ಇಬ್ಬರ ಸ್ನೇಹದ ಬಗ್ಗೆ ಸ್ವತಃ ಜಗ್ಗಣ್ಣ ಮಾತನಾಡಿದ್ದಾರೆ.
ಇಂದು ನನ್ನ ನಲ್ಮೆಯ ಸಹೋದರ #ಶಿವರಾಜ್_ಕುಮಾರ ರವರ ಮನೆಗೆ ನನ್ನ ಆತ್ಮೀಯ ಮಿತ್ರ ಶ್ರೀನಿಧಿ ರವರೊಂದಿಗೆ ತೆರಳಿ ಅರ್ಧಘಂಟೆ ಕಾಲಕಳೆದು ಬಂದೆ❤️
— ನವರಸನಾಯಕ ಜಗ್ಗೇಶ್ (@Jaggesh2) September 13, 2026
40ವರ್ಷದ ಆ ಆತ್ಮೀಯ ಭಾವ ಕರಗದೆ ಕಲ್ಪವೃಕ್ಷವಾಗೆ ಉಳಿದಿದೆ..
ಅವರ ಶ್ರೀಮತಿ ಗೀತ ಮನೆಗೆ ಬಂದ ಅಣ್ಣನಂತೆ ತಮ್ಮ ಮಮತೆ ನನಗೆ ವ್ಯೆಕ್ತಪಡಿಸಿ ಕೈಗಡಿಯಾರ ಕೊಡಿಸಿದ್ದು ಕಂಡು ಭಾವುಕನಾದೆ..
ನನ್ನ ಪ್ರೀತಿಯ… pic.twitter.com/T0Z3KPCRk5