ನವರಸ ನಾಯಕ ಜಗ್ಗೇಶ್ ಕೆಲ ದಿನಗಳಿಂದ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. 'ರಂಗನಾಯಕ' ಸಿನಿಮಾ ಹೀನಾಯವಾಗಿದ್ದು ಸೋತಿದ್ದು ಮಾತ್ರವಲ್ಲ ಸಾಕಷ್ಟು ಟೀಕೆಗೂ ಗುರಿಯಾಗಿತ್ತು. ಅದ್ಯಾವಮಟ್ಟಿಗೆ ಅಂದ್ರೆ ಸ್ವತಃ ಜಗ್ಗಣ್ಣ ಕ್ಷಮೆ ಕೇಳಿದ್ದರು. ಇನ್ನು ಮುಂದೆ ಅಂತಹ ಸಿನಿಮಾ ಮಾಡಲ್ಲ ಎಂದಿದ್ದರು.
ಎರಡು ವರ್ಷಗಳ ಬಳಿಕ ಜಗ್ಗೇಶ್ ಮತ್ತೆ ಬಣ್ಣ ಹಚ್ಚಲು ಮುಂದಾಗಿದ್ದಾರೆ. 'ಭರತ' ಹೆಸರಿನ ಚಿತ್ರದಲ್ಲಿ ಅವರು ನಟಿಸಲಿದ್ದ ಪೋಸ್ಟರ್ಗಳು ರಿಲೀಸ್ ಆಗಿ ಗಮನ ಸೆಳೆದಿದೆ. ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ರಿಚಾ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ರಿಚಾ ಶ್ರೀರಾಮ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ರಾಜ್ ಬ್ರದರ್ಸ್ ಸಿನಿಮಾ ಕಟ್ಟಿಕೊಡಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಹಾಗೂ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ 'ಭರತ' ಚಿತ್ರಕ್ಕಿದೆ.
ಒಂದು ಪೋಸ್ಟರ್ನಲ್ಲಿ ಸೂಟ್ ಧರಿಸಿ ಸಖತ್ ಸ್ಟೈಲಿಶ್ ಲುಕ್ನಲ್ಲಿ ಜಗ್ಗಣ್ಣ ಕಾಣಿಸಿಕೊಂಡಿದ್ದಾರೆ. ಮತ್ತೊಂದರಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿದಂತೆ, ಚಿಟ್ಟೆಗಳು ಹಾರಾಡುತ್ತಿರುವಂತೆ ಪೋಸ್ಟರ್ ಡಿಸೈನ್ ಮಾಡಿದ್ದಾರೆ. ಸಂಪೂರ್ಣವಾಗಿ ನಾಯಕನ ಮುಖ ತೋರಿಸದೇ ಕುತೂಹಲ ಮೂಡಿಸಲಾಗಿದೆ. ಪೋಸ್ಟರ್ಗಳನ್ನು ಗಮನಿಸಿದರೆ ಜಗ್ಗೇಶ್ ಚಿತ್ರದಲ್ಲಿ ಗ್ರೇ ಶೇಡ್ ಪಾತ್ರದಲ್ಲಿ ನಟಿಸುತ್ತಿರುವಂತೆ ಕಾಣ್ತಿದೆ.
ಜಗ್ಗೇಶ್ ನಟಿಸಿದ 'ತೋತಾಪುರಿ' ಸರಣಿ ಸಿನಿಮಾಗಳು ಗೆಲ್ಲಲಿಲ್ಲ. ನಡುವೆ ಬಂದಿದ್ದ 'ರಾಘವೇಂದ್ರ ಸ್ಟೋರ್ಸ್' ಕೊಂಚ ಗಮನ ಸೆಳೆದಿತ್ತು. ಬಳಿಕ ಗುರುಪ್ರಸಾದ್ ನಿರ್ದೇಶನದಲ್ಲಿ ಬಂದಿದ್ದ 'ರಂಗನಾಯಕ' ಸಿನಿಮಾ ಕಹಿ ಕನಸಾಗಿ ಉಳಿದುಬಿಟ್ಟಿದೆ. ರಾಜ್ಯಸಭೆ ಸಂಸದರಾಗಿ ಜಗ್ಗೇಶ್ ಅತ್ತ ರಾಜಕೀಯರಂಗದಲ್ಲಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಮತ್ತೆ ಅವರು ಬಣ್ಣ ಹಚ್ಚಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. 'ಭರತ' ಸಿನಿಮಾ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಸಿಗಲಿದೆ.
ನನ್ನ ಅನುಭವ:)
— ನವರಸನಾಯಕ ಜಗ್ಗೇಶ್ (@Jaggesh2) November 20, 2026
ನಮ್ಮ ತಂದೆ ಬಂಧು ಮಿತ್ರರು ನಾವುಗಳು ಬಾಲ್ಯದಲ್ಲಿ ಇದ್ದಾಗ
ಮಾಡಿದ ತಪ್ಪು ಏನೆಂದರೆ ಅನ್ಯರ ಮಕ್ಕಳನ್ನು ಹೊಗಳಿ ತಮ್ಮ ಮಕ್ಕಳ ತೆಗಳುವುದು!!!
ಆಗ ನಾನು ಪ್ರತಿದಿನ ಒಬ್ಬನೆ ಅಳುತ್ತಿದ್ದ ಬಾಲ್ಯದ ದಿನಗಳು...!!
ಪಾಪ ಪ್ರತಿತಂದೆ ಮಾಡುವ ಈ ತಪ್ಪಿಗೆ ಕಾರಣ ತಮ್ಮಂತೆ ತಮ್ಮ ಮಕ್ಕಳು ಆಗಬೇಕು ಎಂಬ ಆತುರು!!!
As per child… pic.twitter.com/LrGhyO3eF2