ಪ್ರಪಂಚದೆಲ್ಲೆಡೆ ಗೌರಿ-ಗಣೇಶ ಹಬ್ಬದ ಸಡಗರ ಮನೆಮಾಡಿದೆ. ಚಿತ್ರರಂಗದಲ್ಲಿ ಕೂಡ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ತಾರೆಯರ ಮನೆಮನಗಳಲ್ಲಿ ಸಡಗರ ಜೋರಾಗಿದೆ. ವಿಘ್ನ ನಿವಾರಕ ಕನ್ನಡ ಚಿತ್ರರಂಗದ ವಿಘ್ನಗಳನ್ನು ನಿವಾರಿಸಲಿ ಎಂದು ಸಿನಿಕರ್ಮಿಗಳು ಪ್ರಾರ್ಥಿಸುತ್ತಿದ್ದಾರೆ. ಇನ್ನು ಹಬ್ಬಕ್ಕೆ ಟೀಸರ್, ಪೋಸ್ಟರ್, ಸಾಂಗ್ ಅಂತ ಸಾಕಷ್ಟು ಸರ್‌ಪ್ರೈಸ್‌ಗಳು ಸಿಕ್ಕಿವೆ.
'ಪವರ್‌ಮ್ಯಾನ್' ಪೋಸ್ಟರ್
ಹಬ್ಬಕ್ಕೆ ಹೊಸ ಹೊಸ ಪೋಸ್ಟರ್ ಬಿಟ್ಟು ಚಿತ್ರತಂಡಗಳು ಶುಭಾಶಯ ಕೋರಿವೆ. ಯುವರಾಜ್‌ಕುಮಾರ್ ನಟನೆಯ 'ಪವರ್‌ಮ್ಯಾನ್' ಸಿನಿಮಾ ಥೀಮ್ ಪೋಸ್ಟರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ತರುಣ್ ಸುಧೀರ್ ಹಾಗೂ ಜಗದೀಶ್ ಗೌಡ ಸಿನಿಮಾ ನಿರ್ಮಾಣ ಮಾಡ್ತಿದ್ದು ಜಡೇಶ್ ಹಂಪಿ ಆಕ್ಷನ್ ಕಟ್ ಹೇಳ್ತಿದ್ದಾರೆ. 'ಯುವ' ಹಾಗೂ 'ಎಕ್ಕ' ಬಳಿಕ ರಾಘಣ್ಣನ ಕಿರಿಮಗ ನಟನೆಯ 3ನೇ ಸಿನಿಮಾ ಇದಾಗಿದೆ. ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದೆ. 2027 ಸಮ್ಮರ್‌ನಲ್ಲಿ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ.
'ರಾಮಾಯಣ' ಸಾಂಗ್
ಗಣೇಶ ಹಬ್ಬದ ಸಂಭ್ರಮದಲ್ಲಿ 'ರಾಮಾಯಣ' ಚಿತ್ರದ 'ಜೈ ಜೈ ರಾಮ್' ಸಾಂಗ್ ಬಿಡುಗಡೆಯಾಗಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ನಟಿಸಿದ್ದಾರೆ. ದೀಪಾವಳಿಗೆ ಮೊದಲ ಭಾಗ ಸಿನಿಮಾ ಬಿಡುಗಡೆ ಆಗಲಿದೆ. ಎ. ಆರ್ ರಹಮಾನ್ ಸಂಗೀತದ ಹಾಡನ್ನ ಶ್ರೇಯಾ ಘೋಷಾಲ್ ಹಾಗೂ ಅರ್ಜಿತ್ ಸಿಂಗ್ ಹಾಡಿರುವುದು ವಿಶೇಷ. ಸದ್ಯಕ್ಕೆ ಹಿಂದಿಯಲ್ಲಿ ಮಾತ್ರ ಸಾಂಗ್ ಬಂದಿದೆ. ಇನ್ನುಳಿದ ಭಾಷೆಗಳಲ್ಲಿ ಶೀಘ್ರದಲ್ಲೇ ಬಿಡುಗಡೆ ಆಗಲಿದೆ.
ಮಗನನ್ನು ಪರಿಚಯಿಸಿದ ಡಾಲಿ
ನಟ ಡಾಲಿ ಧನಂಜಯ್ ಹಬ್ಬದ ಸಂಭ್ರಮದಲ್ಲಿ ತಮ್ಮ ಮಗನನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಮೂರು ತಿಂಗಳ ಹಿಂದೆ ಧನು- ಧನ್ಯತಾ ದಂಪತಿ ಗಂಡು ಮಗುವಿನ ಜನ್ಮ ನೀಡಿದ್ದರು. ಮಗನಿಗೆ 'ಎರೆಯ' ಎಂದು ನಾಮಕರಣ ಮಾಡಿದ್ದಾರೆ. ಇಮ್ಮಡಿ ಪುಲಿಕೇಶಿಯ ಮತ್ತೊಂದು ಹೆಸರಿದು. ಒಡೆಯ, ಸ್ವಾಮಿ, ಅಧಿಪತಿ ಎನ್ನುವ ಅರ್ಥ ಇದೆ.
ಹೊಸ ಪೋಸ್ಟರ್ಸ್
ಹಬ್ಬದ ಸಂಭ್ರಮದಲ್ಲಿ ಪ್ರೇಮ್- ಮೇಘನಾ ಗಾಂವ್ಕರ್ ನಟನೆಯ 'ಕೆಂಪಾಂಬುಧಿ', ಮಾಲಾಶ್ರೀ ಹಾಗೂ ರುಕ್ಮಿಣ ವಸಂತ್ ಕಾಂಬಿನೇಷನ್ 'ಮಂಗಳಗೌರಿ', ಪ್ರಮೋದ್ ನಟನೆಯ 'ಹಲ್ಕಾ ಡಾನ್', ಗಣಿ ನಟನೆಯ 'ತಮ್ಮ ಸುಖಾಗಮನ ಬಯಸುವ', ಚಿಕ್ಕಣ್ಣ ನಟನೆಯ 'ಜೋಡೆತ್ತು', ಗಿಲ್ಲಿ ನಟನ 'ಪಳಾರ್' ಹೀಗೆ ಹಲವು ಸಿನಿಮಾಗಳ ಹೊಸ ಹೊಸ ಪೋಸ್ಟರ್ ಅನಾವರಣವಾಗಿದೆ.
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು 🙏❤️🙏
— Upendra (@nimmaupendra) September 14, 2026
#NextLevel #NiranjanSudhindra #AaradhanaRam #AravindKaushik #ManasaTarun #TarunShivappa pic.twitter.com/KzgeQb38oM