ಹಬ್ಬದ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಮಾಡಿದ್ರೆ ಗೆಲ್ಲುತ್ತೆ ಎನ್ನುವ ನಂಬಿಕೆ ಚಿತ್ರರಂಗದಲ್ಲಿದೆ. ಶಾಲಾ, ಕಾಲೇಜು, ಆಫೀಸ್ ರಜೆ ಇರುತ್ತೆ, ಹಬ್ಬ ಮುಗಿಸಿ ಜನ ಬಿಡುವಿನ ಸಮಯದಲ್ಲಿ ಸಿನಿಮಾ ನೋಡೋಕೆ ಬರ್ತಾರೆ ಎನ್ನು ಲೆಕ್ಕಾಚಾರ ಅದು. ಈ ವರ್ಷ ದಸರಾ ಸಂಭ್ರಮದಲ್ಲಿ ಒಂದಷ್ಟು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ.

ಪ್ರತಿವರ್ಷ ಸಂಕ್ರಾಂತಿ, ಸ್ವಾತಂತ್ರ್ಯ ದಿನಾಚರಣೆ, ದಸರಾ, ದೀಪಾವಳಿ ಹಾಗೂ ಕ್ರಿಸ್‌ಮಸ್ ಸಂಭ್ರಮದಲ್ಲಿ ದೊಡ್ಡ ಸಿನಿಮಾಗಳನ್ನು ತೆರೆಗೆ ತರ್ತಾರೆ. ಬಾಲಿವುಡ್‌ನಲ್ಲಿ ಈದ್ ಸಂಭ್ರಮದಲ್ಲಿ ಕೂಡ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಾರೆ. ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣದಲ್ಲಿ ದಸರಾ ಸಂಭ್ರಮ ಜೋರು. ಈ ಬಾರಿ ಆ ಸಡಗರ ಹೆಚ್ಚಿಸೋಕೆ ಇಂಟ್ರೆಸ್ಟಿಂಗ್ ಸಿನಿಮಾಗಳು ಬರ್ತಿವೆ. ದೇಶಭಕ್ತಿ, ಆಕ್ಷನ್, ಫನ್, ಲವ್, ಎಮೋಷನ್ ಹೀಗೆ ವಿಭಿನ್ನ ಅಂಶಗಳಿರುವ ಸಿನಿಮಾಗಳಿವೆ.

ಜೈಲರ್- 2

ರಜನಿಕಾಂತ್ ನಟನೆಯ 'ಜೈಲರ್- 2' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಶಿವರಾಜ್‌ಕುಮಾರ್, ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ಅಬ್ಬರಿಸಿದ್ದಾರೆ. 3 ವರ್ಷಗಳ ಹಿಂದೆ ಬಂದಿದ್ದ 'ಜೈಲರ್' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಗೆದ್ದಿತ್ತು. ದಸರಾ ಸಂಭ್ರಮದಲ್ಲಿ ಅಕ್ಟೋಬರ್ 15ರಂದು ಸೀಕ್ವೆಲ್ ತೆರೆಗಪ್ಪಳಿಸಲಿದೆ. ನೆಲ್ಸನ್ ನಿರ್ದೇಶಶನ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಬೃಂದಾವಿಹಾರಿ

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ರೊಮ್ಯಾಂಟಿಕ್ ಮ್ಯೂಸಿಕಲ್ ಎಂಟರ್‌ಟೈನರ್ 'ಬೃಂದಾವಿಹಾರಿ' ಅಕ್ಟೋಬರ್ 16ಕ್ಕೆ ಬಿಡುಗಡೆ ಆಗಲಿದೆ. ಸೂಪರ್ ಹಿಟ್ 'ಕೃಷ್ಣಂ ಪ್ರಣಯಸಖಿ' ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಮೂಡಿ ಬರ್ತಿದೆ. ಶ್ರೀನಿವಾಸ್ ರಾಜು ಯಾವ ರೀತಿ ಮ್ಯಾಜಿಕ್ ಮಾಡ್ತಾರೆ ಎನ್ನುವ ಕುತೂಹಲ ಮೂಡಿದೆ. ಈಗಾಗಲೇ ಚಿತ್ರದ ಹಾಡುಗಳು ರಿಲೀಸ್ ಆಗಿವೆ. ಗಣಿ ಜೊತೆ ದೇವಿಕಾ ಭಟ್ ಹಾಗೂ ಮಾಳವಿಕಾ ಶರ್ಮಾ ನಾಯಕಿಯರಾಗಿ ಮಿಂಚಿದ್ದಾರೆ.

ರಣಬಾಲಿ

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ರಣಬಾಲಿ' ಚಿತ್ರ ಕೂಡ ದಸರಾ ರೇಸ್‌ನಲ್ಲಿದೆ. ಈ ಐತಿಹಾಸಿಕ ದೇಶಭಕ್ತಿ ಕಥಾಹಂದರದ ಸಿನಿಮಾ ಅಕ್ಟೋಬರ್ 16ರಂದು ತೆರೆಗಪ್ಪಳಿಸಲಿದೆ. 'ಗೀತಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಬಳಿಕ ವಿಜಯ್-ರಶ್ಮಿಕಾ ಜೋಡಿಯ ಮೂರನೇ ಸಿನಿಮಾ ಇದು. ಮದುವೆ ಬಳಿಕ ಒಟ್ಟಿಗೆ ನಟಿಸಿರುವ ಮೊದಲ ಸಿನಿಮಾ ಕೂಡ ಹೌದು. ರಾಹುಲ್ ಸಂಕೃತ್ಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಆದರ್ಶ ಕುಟುಂಬಂ

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನಲ್ಲಿ ವಿಕ್ಟರಿ ವೆಂಕಟೇಶ್ ನಟನೆಯ ಫ್ಯಾಮಿಲಿ ಡ್ರಾಮಾ 'ಆದರ್ಶ ಕುಟುಂಬಂ' ಅಕ್ಟೋಬರ್ 9ಕ್ಕೆ ತೆರೆಗೆ ಬರ್ತಿದೆ. ಚಿತ್ರದಲ್ಲಿ ವೆಂಕಟೇಶ್ ಜೋಡಿಯಾಗಿ ಕನ್ನಡ ನಟಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಎಸ್. ತಮನ್ ಸಂಗೀತದಲ್ಲಿ ಚಿತ್ರದ ಹಾಡುಗಳು ಸದ್ದು ಮಾಡ್ತಿವೆ. ಈ ನಾಲ್ಕು ಸಿನಿಮಾಗಳ ನಡುವೆ ದಸರಾ ಬಾಕ್ಸಾಫೀಸ್ ದಂಗಲ್ ಹೇಗಿರುತ್ತೆ ಕಾದು ನೋಡಬೇಕು.