ಗಣೇಶ ಹಬ್ಬದ ಸಂಭ್ರಮದಲ್ಲಿ ವಾರ ಶುರುವಾಗಿದೆ. ಈಗಾಗಲೇ ಕೆಲ ಸಿನಿಮಾಗಳು ಓಟಿಟಿಗೆ ಬಂದಿವೆ. ಇತ್ತ 'ಟಾಕ್ಸಿಕ್', 'ಮಂಡಾದಿ', 'ಹನುಮಾನ್ ಅನ್ಷ್', 'ಸರ್ದಾರ್-2', 'ಅಮೆರಿಕಾ ಅಮೆರಿಕಾ- 2' ಸೇರಿದಂತೆ ಒಂದಷ್ಟು ಸಿನಿಮಾಗಳು ಚಿತ್ರಮಂದಿಗಳಲ್ಲಿ ಸದ್ದು ಮಾಡ್ತಿವೆ. ಕನ್ನಡದ 'ಸಿಟಿಲೈಟ್ಸ್' ಸೇರಿ ಮತ್ತಷ್ಟು ಸಿನಿಮಾಗಳು ಈ ವಾರ ತೆರೆಗೆ ಬರ್ತಿವೆ. ಇನ್ನು ಓಟಿಟಿಯಲ್ಲಿ ಈ ವೀಕೆಂಡ್ 20ಕ್ಕೂ ಅಧಿಕ ಸಿನಿಮಾಗಳು ಸ್ಟ್ರೀಮಿಂಗ್ ಆಗುತ್ತಿವೆ.
ಇರುಮುಡಿ
ರವಿತೇಜಾ ನಟನೆಯ 'ಇರುಮುಡಿ' ಚಿತ್ರಕ್ಕೆ ಈ ವಾರವೇ ಓಟಿಟಿ ಬಿಡುಗಡೆ ಭಾಗ್ಯ ಸಿಕ್ತಿದೆ. 200 ಕೋಟಿ ಕೊಳ್ಳೆ ಹೊಡೆದು ಸದ್ದು ಮಾಡಿದ ಸಿನಿಮಾ ತಿಂಗಳಿಗೂ ಮುನ್ನ ಡಿಜಿಟಪ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡ್ತಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಸೆಪ್ಟೆಂಂಬರ್ 18ರಂದು ಸಿನಿಮಾ ಬಿಡುಗಡೆ ಆಗಲಿದೆ. ಕನ್ನಡ ಸೇರಿ ನಾಲ್ಕು ಭಾಷೆಗಳಿಗೆ ಡಬ್ ಆಗಿ ವೀಕ್ಷಣೆಗೆ ಸಿಗಲಿದೆ. ಯಶ್ ನಟನೆಯ 'ಟಾಕ್ಸಿಕ್' ಎದುರು ಕೂಡ 'ಇರುಮುಡಿ' ಸಿನಿಮಾ ಗೆದ್ದು ಬೀಗಿತ್ತು.
ಮ್ಯಾಂಗೊ ಪಚ್ಚ
ಕಿಚ್ಚ ಸುದೀಪ್ ಸೋದರಳಿಯ ಸಂಚಿತ್ ನಟನೆಯ 'ಮ್ಯಾಂಗೊ ಪಚ್ಚ' ಸಿನಿಮಾ ಗಣೇಶ ಹಬ್ಬದ ಸಂಭ್ರಮದಲ್ಲಿ ಓಟಿಟಿಗೆ ಬಂದಿದೆ. ಜಿಯೋ ಹಾಟ್‌ಸ್ಟರ್‌ನಲ್ಲಿ ಸೆಪ್ಟೆಂಬರ್ 14ರಂದು ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ಮೂರು ತಿಂಗಳ ಹಿಂದೆ ಈ ಸಿನಿಮಾ ತೆರೆಗೆ ಬಂದಿತ್ತು. ಆದ್ರೆ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಸಿನಿಮಾ ವಿಫಲವಾಗಿತ್ತು.
ರಕ್ಕಸಪುರದೋಳ್
ರಾಜ್ ಬಿ ಶೆಟ್ಟಿ ನಟನೆಯ 'ರಕ್ಕಸಪುರದೋಳ್' ಸಿನಿಮಾ ಕೂಡ ಈಗಾಗಲೇ ಓಟಿಟಿಯಲ್ಲಿ ಸದ್ದು ಮಾಡ್ತಿದೆ. ಫೆಬ್ರವರಿಯಲ್ಲಿ ತೆರೆಗೆ ಬಂದಿದ್ದ ಸಿನಿಮಾ ಏಳು ತಿಂಗಳ ಬಳಿಕ ಸ್ಮಾಲ್ ಸ್ಕ್ರೀನ್‌ಗೆ ಎಂಟ್ರಿ ಕೊಟ್ಟಿದೆ. ರವಿವರ್ಮಾ ನಿರ್ಮಾಣದ ಸಿನಿಮಾ ತಕ್ಕಮಟ್ಟಿಗೆ ಹಿಟ್ ಆಗಿತ್ತು. ಪ್ರೈಂ ವೀಡಿಯೋದಲ್ಲಿ ಸದ್ಯ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಥ್ರಿಲ್ಲರ್ ಸಿನಿಮಾಗಳನ್ನು ನೋಡಬಯಸುವವರು ಮಿಸ್ ಮಾಡ್ಲೇಬೇಡಿ.
ಪ್ರೈಂ ವೀಡಿಯೋ
- ವೇಯ್ಟಿಂಗ್ ಹೈ(ಹಿಂದಿ ಸೀರಿಸ್) ಸೆಪ್ಟೆಂಬರ್ 16
- ರಾಮ್ ಅಂಡ್ ಲೀಲಾ(ತಮಿಳು ಸಿನಿಮಾ) ಸೆಪ್ಟೆಂಬರ್ 18
- ನೀಗ್ಲೆ(ಇಂಗ್ಲೀಷ್ ವೆಬ್ ಸೀರಿಸ್)ಸೆಪ್ಟೆಂಬರ್ 16
ಹಾಟ್‌ಸ್ಟರ್
- ಥುಡಕ್ಕಂ(ಮಲಯಾಳಂ ಸಿನಿಮಾ) ಸೆಪ್ಟೆಂಬರ್ 18
- ಲೀ ಕ್ರೌನಿನ್ಸ್ ದಿ ಮಮ್ಮಿ(ಇಂಗ್ಲೀಷ್ ಸಿನಿಮಾ) ಸೆಪ್ಟೆಂಬರ್ 17
ನೆಟ್‌ಫ್ಲಿಕ್ಸ್
- ನಾಟ್ ಎ ಸ್ಟ್ರೇಂಜರ್(ಇಂಗ್ಲೀಷ್ ಸೀರಿಸ್)ಸೆಪ್ಟೆಂಬರ್ 17
- ದಿ ಡಾಲ್ (ಇಂಗ್ಲೀಷ್ ಸೀರಿಸ್)ಸೆಪ್ಟೆಂಬರ್ 16
- ಲಸ್ಟ್ ಸ್ಟೋರಿಸ್- 3(ಹಿಂದಿ ಸೀರಿಸ್) ಸೆಪ್ಟೆಂಬರ್ 18
- ಸ್ಟಾಪ್! ದಟ್! ಟ್ರೈನ್ (ಇಂಗ್ಲೀಷ್ ಸಿನಿಮಾ) ಸೆಪ್ಟೆಂಬರ್ 20