ಭಾರತೀಯ ಚಿತ್ರರಂಗ ಕಂಡ ಮಹಾನ್ ಪ್ರತಿಭೆ ಶಂಕರ್ ನಾಗ್. ಬಹಳ ಸಣ್ಣ ಸಮಯದಲ್ಲಿ ಸಾಕಷ್ಟು ಅದ್ಭುತಗಳನ್ನು ಸೃಷ್ಟಿಸಿದವರು. ತನ್ನ ಜೊತೆ ಸಾಕಷ್ಟು ಜನರನ್ನು ಬೆಳೆಸಿದ್ದರು. ಬಹಳ ಬೇಗ ಅವರು ಬಾರದ ಲೋಕಕ್ಕೆ ಹೊರಟುಬಿಟ್ಟರು. ಇವತ್ತಿಗೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಶಂಕ್ರಣ್ಣ ನನ್ನ ಗುರು ಎಂದು ಬಾಲಿವುಡ್ ಖ್ಯಾತ ನಿರ್ದೇಶಕಿ, ಕೊರಿಯೋಗ್ರಫರ್ ಫರ್ಹಾ ಖಾನ್ ಹೇಳಿರುವುದು ವೈರಲ್ ಆಗ್ತಿದೆ.
ಮೈ ಹೂ ನಾ, ಓಂ ಶಾಂತಿ ಓಂ, ಹ್ಯಾಪಿ ನ್ಯೂ ಇಯರ್ ರೀತಿಯ ಸಿನಿಮಾಗಳನ್ನು ಫರ್ಹಾ ನಿರ್ದೇಶನ ಮಾಡಿ ಗೆದ್ದಿದ್ದಾರೆ. ನೂರಾರು ಬಾಲಿವುಡ್ ಗೀತೆಗಳಿಗೆ ಡ್ಯಾನ್ಸ್ ಕಂಪೋಸ್ ಮಾಡಿದ್ದಾರೆ. ಖ್ಯಾತ ನಟ, ನಟಿಯರನ್ನು ತಾಳಕ್ಕೆ ತಕ್ಕಂತೆ ಕುಣಿಸಿದ್ದಾರೆ. ಕಿರುತೆರೆಯಲ್ಲೂ ಚಾಪು ಮೂಡಿಸಿದ್ದಾರೆ. ಇಂತಿಪ್ಪ ಫರ್ಹಾ ಖಾನ್ ನಮ್ಮ ಶಂಕ್ರಣ್ಣನನ್ನು ನೆನಪಿಸಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಶಂಕರ್ ನಾಗ್ ಕುರಿತಾದ ವೀಡಿಯೋವೊಂದಕ್ಕೆ ಫರ್ಹಾ ಖಾನ್ ಕಾಮೆಂಟ್ ಮಾಡಿದ್ದಾರೆ. "ನನ್ನ ಮೊದಲ ಮಾರ್ಗದರ್ಶಕ(Mentor) ಶಂಕರ್ ನಾಗ್.. ಅಂತಹವರು ಮತ್ತೊಬ್ಬರು ಇಲ್ಲ.. ಬಹಳ ಅದ್ಭುತ ವ್ಯಕ್ತಿ ಅವ್ರು" ಎಂದು ಬರೆದುಕೊಂಡಿದ್ದಾರೆ. ಇನ್ನು ನೋಡಿ ಕೆಲವರು ಅಚ್ಚರಿಗೊಂಡಿದ್ದಾರೆ. ಅರೇ, ಫರ್ಹಾ ಖಾನ್ ಯಾವಾಗ ಶಂಕ್ರಣ್ಣ ಜೊತೆಗೆ ಕೆಲಸ ಮಾಡಿದ್ದರು. ಆಕೆ ನನ್ನ ಗುರು ಎಂದು ಯಾಕೆ ಹೇಳಿದ್ರು ಎಂದು ಅಚ್ಚರಿಗೊಂಡಿದ್ದಾರೆ. ಶಂಕರ್ ನಾಗ್ 'ಮಾಲ್ಗುಡಿ ಡೇಸ್' ಎಂಬ ಅದ್ಭುತ ಟಿವಿ ಸೀರಿಸ್ ಕಟ್ಟಿಕೊಟ್ಟಿದ್ದು ಗೊತ್ತೇಯಿದೆ. ಅದಕ್ಕೆ ಫರ್ಹಾ ಕೆಲಸ ಮಾಡಿದ್ದರು.
ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಕಲಿಯುತ್ತಿದ್ದ ಫರ್ಹಾ ಖಾನ್ 'ಮಾಲ್ಗುಡಿ ಡೇಸ್' ಟಿವಿ ಸೀರಿಸ್‌ನಲ್ಲಿ ಕೆಲಸ ಮಾಡುವ ಅವಕಾಶ ಪಡೆದಿದ್ದರು. ಶಂಕರ್ ನಾಗ್ ಜೊತೆ ಸಹಾಯಕರಾಗಿ ದುಡಿದಿದ್ದರು. ಹಿಂದಿಯಲ್ಲಿ 'ಮಾಲ್ಗುಡಿ ಡೇಸ್' ಮೂಡಿ ಬಂದಿತ್ತು. ಅಚ್ಚರಿ ಎಂದರೆ ರೋಹಿತ್ ಶ್ರೀನಾಥ್ ಮಾಡಿದ್ದ ರಾಜಂ ಪಾತ್ರಕ್ಕೆ ಫರ್ಹಾ ಡಬ್ಬಿಂಗ್ ಮಾಡಿದ್ದರು. ಸಂದರ್ಶನವೊಂದರಲ್ಲಿ ಆಕೆ ಈ ಬಗ್ಗೆ ಮಾತನಾಡಿದ್ದರು. 'ಮಾಲ್ಗುಡಿ ಡೇಸ್' ಚಿತ್ರೀಕರಣದ ವೇಳೆ ಬೆಂಗಳೂರಿನಲ್ಲಿ ಬಂದು ಕೆಲ ದಿನ ಆಕೆ ನೆಲೆಸಿದ್ದರು. ಈ ವಿಚಾರವನ್ನು ಸ್ವತಃ ಮಾಸ್ಟರ್ ಆನಂದ್ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದರು.
ಇನ್ನು ಅದೇ ವೈರಲ್ ವೀಡಿಯೋಗೆ ತಮಿಳು ನಟ, ನಿರ್ದೇಶಕ ಸಿದ್ದಾರ್ಥ್ ಕೂಡ ಕಾಮೆಂಟ್ ಮಾಡಿದ್ದಾರೆ.
WHAT....??!!
— ಅಲ್ಪಸಂಖ್ಯಾತ (@alpasankhyata) September 12, 2026
Was Shankar Nag actually a mentor to Farah Khan?? 🤯
ಹೀಗೊಂದ್ ವಿಷಯ ಇದೆ ಅಂತಾನೇ ಗೊತ್ತಿರ್ಲಿಲ್ಲ... 😊 pic.twitter.com/b3YvF7NdZK