ಸಿನಿಮಾ ತಾರೆಯರಿಗೆ ಕೆಲವೊಮ್ಮೆ ವಿಚಿತ್ರ ಸನ್ನಿವೇಶಗಳು ಎದುರಾಗುತ್ತವೆ. ನೆಚ್ಚಿನ ನಟ-ನಟಿಯರನ್ನು ನೋಡಬೇಕು, ಮಾತನಾಡಿಸಬೇಕು, ಕೈಕುಲಕಬೇಕು, ಸಾಧ್ಯವಾದರೆ ಜೊತೆಗೆ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳಬೇಕು ಎನ್ನುವುದು ಅಭಿಮಾನಿಗಳ ಆಸೆ. ಕೆಲವರಿಗೆ ಅಂತಹ ಅವಕಾಶ ಕೂಡ ಸಿಗುತ್ತದೆ. ಈಗ ಅಭಿಮಾನಿಯೊಬ್ಬ ರಚಿತಾರಾಮ್ ಕೆನ್ನೆ ಗಿಂಡಿಬಿಟ್ಟಿದ್ದಾನೆ.
ಈ ಬಾರಿ ಅಭಿಮಾನಿಗಳ ಜೊತೆ ರಚಿತಾ ರಾಮ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆರ್‌ಆರ್ ನಗರದ ಸರ್ಕಲ್‌ನಲ್ಲಿ ದೊಡ್ಡ ದೊಡ್ಡ ಕಟೌಟ್ ಹಾಕಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಕೇಕ್ ಕತ್ತರಿಸಿ ನೆಚ್ಚಿನ ನಟಿಯ ಕೈಕುಲುಕಿ ಶುಭಾಶಯ ಕೋರಿದ್ದಾರೆ. ಸರತಿ ಸಾಲಿನಲ್ಲಿ ಬಂದು ಅಭಿಮಾನಿಗಳು ಡಿಂಪಲ್ ಕ್ವೀನ್ ಕೈಕುಲುಕಿ ವಿಶ್ ಮಾಡಿ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ.
ಇದೇ ರೀತಿ ಸರತಿ ಸಾಲಿನಲ್ಲಿ ಬಂದ ಅಭಿಮಾನಿಯೊಬ್ಬ ನೆಚ್ಚಿನ ನಟಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ವಿಶ್ ಮಾಡುವ ನೆಪದಲ್ಲಿ ಆಕೆಯ ಕೆನ್ನೆ ಗಿಂಡಿ ಓಡಿ ಹೋಗಿದ್ದಾನೆ. ಆ ವೀಡಿಯೋ ಸಖತ್ ವೈರಲ್ ಆಗ್ತಿದೆ. ಈ ಅಚಾನಕ್ ಘಟನೆಯಿಂದ ರಚಿತಾ ರಾಮ್ ಸೇರಿ ಅಲ್ಲಿದ್ದವರು ಒಂದು ಕ್ಷಣ ಶಾಕ್ ಆಗಿದ್ದಾರೆ. ಸಾಕಷ್ಟು ಜನ ಅಭಿಮಾನಿಗಳಿಗೆ ಇದೇ ಆಸೆ ಇರುತ್ತೆ, ಈತ ಅದನ್ನು ಮಾಡಿ ತೋರಿಸಿದ್ದಾನೆ ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ. ಇದ್ಯಾಕೋ ಅತಿಯಾಯ್ತು ಎಂದು ಬೇಸರ ವ್ಯಕ್ತಪಡಿಸುವವರು ಇದ್ದಾರೆ.
ಇತ್ತೀಚೆಗೆ ರಚಿತಾ ರಾಮ್ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ದರ್ಶನ್ ಭೇಟಿಗೆ ಯತ್ನಿಸಿದ್ದರು. ನಾಲ್ಕೈದು ಗಂಟೆ ಕಾದ್ರು ಅವಕಾಶ ಮಾತ್ರ ಸಿಗಲಿಲ್ಲ. ಹುಟ್ಟುಹಬ್ಬಕ್ಕೂ ಮುನ್ನ ತಮ್ಮ ಗುರುಗಳ ಆಶೀರ್ವಾದ ಪಡೆಯಲು ಆಕೆ ಅಲ್ಲಿಗೆ ಹೋಗಿದ್ದರು ಎನ್ನಲಾಗ್ತಿದೆ. ತೂಗುದೀಪ ಸಂಸ್ಥೆಯ 'ಬುಲ್ ಬುಲ್' ಸಿನಿಮಾ ಮೂಲಕ ರಚಿತಾ ರಾಮ್ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ನಟಿಸಿದರು. ಕನ್ನಡದ ಖ್ಯಾತ ನಟರ ಜೊತೆಗೆಲ್ಲಾ ನಟಿಸಿ ಗಮನ ಸೆಳೆದರು.
Bro did that exact thing every one of her fans has secretly dreamed of. pic.twitter.com/dM3MEn8gO0
— 𝕍𝕚𝕛𝕚 ✍🏼 (@poetviji) October 3, 2026