ದೀಪಾವಳಿ ಸಂಭ್ರಮದಲ್ಲಿ 'ರಾಮಾಯಣ' ಚಿತ್ರದ ಜೊತೆಗೆ ತಮಿಳಿನ 'ಮೂಕುತಿ ಅಮ್ಮನ್- 2' ತೆರೆಗೆ ಬಂದಿದೆ. 'ಮಹಾಶಕ್ತಿ' ಹೆಸರಿನಲ್ಲಿ ಕನ್ನಡ ಹಾಗೂ ತೆಲುಗಿಗೆ ಡಬ್ ಆಗಿ ಬಿಡುಗಡೆಯಾಗಿದೆ. ಟೈಟಲ್ ರೋಲ್ನಲ್ಲಿ ನಯನತಾರಾ ಮಿಂಚಿದ್ದಾರೆ. ಸುಂದರ್ .ಸಿ ನಿರ್ದೇಶನದ ಈ ಫ್ಯಾಂಟಸಿ ಚಿತ್ರದಲ್ಲಿ ಕನ್ನಡ ನಟ ದುನಿಯಾ ವಿಜಯ್ ಖಳನಾಯಕನಾಗಿ ಅಬ್ಬರಿಸಿದ್ದಾರೆ.
'ಮೂಕುತಿ ಅಮ್ಮನ್- 2' ಚಿತ್ರಕ್ಕೆ ಪ್ರೇಕ್ಷಕರಿಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರದ ಸಿಜಿ ಬಗ್ಗೆ ಟೀಕೆಗಳು ವ್ಯಕ್ತವಾಗ್ತಿದೆ. ಇದೆಲ್ಲದರ ನಡುವೆ ದುನಿಯಾ ವಿಜಯ್ ನಟನೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಕನ್ನಡದ ಸ್ಟಾರ್ ನಟರು ಪರಭಾಷಾ ಸಿನಿಮಾಗಳಲ್ಲಿ ಹೆಚ್ಚು ನಟಿಸಲು ಆರಂಭಿಸಿದ್ದಾರೆ. ಶಿವರಾಜ್ಕುಮಾರ್, ಉಪೇಂದ್ರ ಬಳಿಕ ದುನಿಯಾ ವಿಜಯ್ ಕೂಡ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸೋಕೆ ಮುಂದಾಗಿದ್ದಾರೆ.
ಈಗಾಗಲೇ ಎರಡು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ದುನಿಯಾ ವಿಜಯ್ಗೆ ತಮಿಳಿನಲ್ಲಿ ಇದು ಮೊದಲ ಸಿನಿಮಾ. ನಯನತಾರ ಎದುರು ವಿಲನ್ ಆಗಿ ಅಬ್ಬರಿಸಿದ್ದಾರೆ. ರೆಜಿನಾ ಕಸೆಂದ್ರ ಹಾಗೂ ವಿಜಯ್ ಕಾಂಬಿನೇಷನ್ 'ಮೂಕುತಿ ಅಮ್ಮನ್- 2' ಚಿತ್ರದಲ್ಲಿ ಗಮನ ಸೆಳೆದಿದೆ. ಮುಂದೆ ಮತ್ತಷ್ಟು ತಮಿಳು ಸಿನಿಮಾ ಅವಕಾಶಗಳು ಅವರನ್ನು ಅರಸಿ ಬರುವುದರಲ್ಲಿ ಎರಡು ಮಾತಿಲ್ಲ.
ಜನ್ಮಜನ್ಮಾಂತರದ ಕಥೆ ಚಿತ್ರದಲ್ಲಿದೆ. ಮೈಲಾಂಜಿ ಹಳ್ಳಿಯ ಪೊಲೀಸ್ ಪೇದೆ ಶಕ್ತಿ ಕಥೆಗೂ 2000 ವರ್ಷಗಳ ಹಿಂದಿನ ಆ ಕಥೆಗೂ ಇರುವ ನಂಟು ಏನು ? ಈಗ ರಾಜಕಾರಣಿಯಾಗಿರುವ ದುನಿಯಾ ವಿಜಯ್ ಹಾಗೂ ಶಕ್ತಿ ನಡುವಿನ ಸಾವಿರಾರು ವರ್ಷಗಳ ವೈರತ್ವ ಏನು ? ಭೈರ(ರೆಜಿನಾ ಕಸೆಂಡ್ರ) ಯಾರು ? ಎನ್ನುವುದನ್ನು ತೆರೆಮೇಲೆ ನೋಡಬೇಕು. ಖಡಕ್ ಪಾತ್ರದಲ್ಲಿ ದುನಿಯಾ ವಿಜಯ್ ಗಮನ ಸೆಳೆದಿದ್ದಾರೆ. ಕನ್ನಡದಲ್ಲಿ ಮೂರು ಸಿನಿಮಾ ನಿರ್ದೇಶಿಸಿ ಸಕ್ಸಸ್ ಕಂಡ ವಿಜಿ ತಮಿಳುನಲ್ಲೂ ಖಾತೆ ತೆರೆದಿದ್ದಾರೆ.
ದುನಿಯಾ ವಿಜಯ್ ನಿರ್ದೇಶನದ 'ಸಿಟಿಲೈಟ್ಸ್' ಸಿನಿಮಾ ಮಾಸ್ ಪ್ರೇಕ್ಷಕರ ಮನಗೆದ್ದಿದ್ದು ಗೊತ್ತೇಯಿದೆ. ಅದಕ್ಕೂ ಮುನ್ನ 'ಸಲಗ' ಹಾಗೂ 'ಭೀಮ' ಚಿತ್ರಗಳನ್ನು ಅವರು ನಿರ್ದೇಶಿಸಿ ನಟಿಸಿ ಸಕ್ಸಸ್ ಕಂಡಿದ್ದರು. ತೆಲುಗಿನಲ್ಲಿ ಪೂರಿ ಜಗನ್ನಾಥ್ ನಿರ್ದೇಶನದ 'ಸ್ಲಂ ಡಾಗ್' ಚಿತ್ರದಲ್ಲಿ ವಿಜಯ್ ಸೇತುಪತಿ ಎದುರು ದುನಿಯಾ ವಿಜಯ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ.
Duniya & regina Pair super👌♥️🙂↔️#MookuthiAmman2 #Duniyavijay pic.twitter.com/QZYVlydyUx
— Dexter (@Dexteraws) November 7, 2026