ತಮಿಳುನಾಡು ಸಿಎಂ ವಿಜಯ್ ಹಾಗೂ ನಟಿ ತ್ರಿಶಾ ಆತ್ಮೀಯ ಒಡನಾಟ ಗುಟ್ಟಾಗಿ ಏನು ಉಳಿದಿಲ್ಲ. ವಿಜಯ್ ಪತ್ನಿ ಸಂಗೀತಾ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದು ಬಳಿಕ ಅರ್ಜಿ ವಾಪಸ್ ಪಡೆದಿದ್ದು ಗೊತ್ತೇಯಿದೆ. ನಟಿಯೊಂದಿಗೆ ವಿಜಯ್ ಒಡನಾಟವೇ ತಮ್ಮ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣ ಎಂದಿದ್ದರು. ಆದ್ರೆ ನಟಿಯ ಹೆಸರು ಹೇಳಿರಲಿಲ್ಲ. ಡಿವೋರ್ಸ್ ಚರ್ಚೆ ಶುರುವಾಗುತ್ತಿದ್ದಂತೆ ವಿಜಯ್ ಹಾಗೂ ತ್ರಿಶಾ ಒಟ್ಟಿಗೆ ಕಾಣಿಸಿಕೊಳ್ಳಲು ಶುರು ಮಾಡಿದ್ದರು.

ಮತ್ತೊಮ್ಮೆ ಸಿಎಂ ವಿಜಯ್ ಹಾಗೂ ನಟಿ ತ್ರಿಶಾ ಮದುವೆ ಸಮಾರಂಭವೊಂದಕ್ಕೆ ಒಟ್ಟಿಗೆ ಬಂದಿದ್ದಾರೆ. ನವಜೋಡಿಯನ್ನು ಇಬ್ಬರೂ ಒಟ್ಟಿಗೆ ಒಟ್ಟಿಗೆ ಹರಿಸಿ ಕ್ಯಾಮರಾಗಳಿಗೆ ಪೋಸ್ ಕೊಟ್ಟು ಹೋಗಿದ್ದಾರೆ. ವೈಎಸ್ ಅನಿಲ್ ರೆಡ್ಡಿ ಮಗಳು ಶ್ರೇಯಾ ಮದುವೆ ಆರತಕ್ಷತೆ ಕಾರ್ಯಕ್ರಮ ಚೆನ್ನೈನಲ್ಲಿ ನಡೆದಿದೆ. ಚೆನ್ನೈನ ದಿ ಲೀಲಾ ಪ್ಯಾಲೇಸ್‌ನಲ್ಲಿ ನಡೆದ ವಿವಾಹ ಸಮಾರಂಭ ದಕ್ಷಿಣ ಭಾರತದ ರಾಜಕೀಯ, ಉದ್ಯಮ ಹಾಗೂ ಸಿನಿಮಾ ಕ್ಷೇತ್ರಗಳ ಸೆಲೆಬ್ರಿಟಿಗಳಿಂದ ತುಂಬಿತ್ತು.

ಆಂಧ್ರಪ್ರದೇಶದ ಮಾಜಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸೋದರ ಸಂಬಂಧಿ ಅನಿಲ್ ರೆಡ್ಡಿ ಮಗಳ ಮದುವೆ ಇದು. ಹಾಗಾಗಿ ಆಂಧ್ರ ಹಾಗೂ ತೆಲಂಗಾಣದ ಸಾಕಷ್ಟು ಗಣ್ಯರು ನವಜೋಡಿಗೆ ಶುಭ ಹಾರೈಸಲು ಚೆನ್ನೈಗೆ ಹೋಗಿದ್ದರು.ಜಗನ್ ಮೋಹನ್ ರೆಡ್ಡಿ ತಮ್ಮ ಪತ್ನಿ ಭಾರತಿ ಅವರೊಂದಿಗೆ ಬಂದು ನವವಿವಾಹಿತರನ್ನು ಆಶೀರ್ವದಿಸಿದರು. ತೆಲಂಗಾಣದ ಬಿಆರ್‌ಎಸ್ ಕಾರ್ಯನಿರ್ವಾಹಕ ಅಧ್ಯಕ್ಷ ಕೆಟಿಆರ್ ತಮ್ಮ ಪತ್ನಿಯೊಂದಿಗೆ ಕಾರ್ಯಕ್ರಮಕ್ಕೆ ಹಾಜರಿದ್ದರು.

ತ್ರಿಶಾ ಜೊತೆ ಮದುವೆ ಸಮಾರಂಭಕ್ಕೆ ಹೋಗಿದ್ದ ತಮಿಳುನಾಡು ಸಿಎಂ ವಿಜಯ್ ನೇರವಾಗಿ ವೇದಿಕೆಗೆ ಬಂದು ವೈ.ಎಸ್. ಜಗನ್ ಅವರನ್ನು ಅಪ್ಪಿಕೊಂಡು ಉಭಯಕುಶಲೋಪರಿ ವಿಚಾರಿಸಿದರು. ವೇದಿಕೆ ಮುಂಭಾಗದಲ್ಲಿ ಕೆಲಸಮಯ ಒಟ್ಟಿಗೆ ಕೂತಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ವೈರಲ್ ಆಗ್ತಿದೆ. ಇದೇ ವರ್ಷ ಮಾರ್ಚ್‌ನಲ್ಲಿ ವಿಜಯ್ ಹಾಗೂ ತ್ರಿಶಾ ಇಬ್ಬರೂ ಚಿತ್ರ ನಿರ್ಮಾಪಕ ಕಲ್ಪಾತಿ ಎಸ್. ಸುರೇಶ್ ಅವರ ಮಗನ ಮದುವೆಯ ರಿಸೆಪ್ಷನ್‌ಗೆ ಒಟ್ಟಿಗೆ ಆಗಮಿಸಿದ್ದರು. ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದ ಸಂಗೀತಾಗೆ ತಿರುಗೇಟು ಕೊಡುವಂತೆ ನಡೆದುಕೊಂಡಿದ್ದರು.

ತಮಿಳು ನಟ ಅಜಿತ್ ತಾಯಿ ನಿಧನದ ವೇಳೆ ಕೂಡ ಸಿಎಂ ವಿಜಯ್ ಹಾಗೂ ತ್ರಿಶಾ ಒಟ್ಟಿಗೆ ಹೋಗಿ ಸಾಂತ್ವನ ಹೇಳಿದ್ದರು. ಯುಕೆಯಲ್ಲಿ ಅಜಿತ್ ಕಾರ್ ರೇಸ್ ವೀಕ್ಷಿಸಲು ಕೂಡ ವಿಜಯ್ ಹಾಗೂ ತ್ರಿಶಾ ಹೋಗಿದ್ದು ಭಾರೀ ಚರ್ಚೆ ಹುಟ್ಟು ಹಾಕಿತ್ತು. ಇದೀಗ ಮತ್ತೆ ಅನಿಲ್ ರೆಡ್ಡಿ ಮಗಳ ಮದುವೆ ಸಮಾರಂಭಕ್ಕೆ ಇಬ್ಬರೂ ಒಟ್ಟಿಗೆ ಹಾಜರಾಗಿರುವುದು ಚರ್ಚೆ ಹುಟ್ಟಾಕ್ಕಿದೆ.