ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಟ ಅನಂತ್ ನಾಗ್ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಸಿನಿಮಾ, ರಾಜಕೀಯ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಶಾಸಕರಾಗಿ ಹಾಗೂ ಜೆ.ಎಚ್. ಪಟೇಲ್ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಬಳಿಕ 2004ರಲ್ಲಿ , ಅವರು ಜನತಾದಳ (ಜಾತ್ಯತೀತ) ಪಕ್ಷದಿಂದ ನಗರದ ಚಾಮರಾಜಪೇಟೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.
ಕಳೆದ ಇಪ್ಪತ್ತು ವರ್ಷಗಳಿಂದ ಅನಂತ್ ನಾಗ್ ರಾಜಕೀಯರಂಗದಿಂದ ದೂರವೇ ಉಳಿದಿದ್ದರು. ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ನಟನೆಯಲ್ಲಿ ಕೂಡ ಆಸಕ್ತಿ ಕಳೆದುಕೊಂಡಿದ್ದಾರೆ. ಒಳ್ಳೆ ಸ್ಕ್ರಿಪ್ಟ್ ಬರ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ಇದೀಗ ರಾಜ್ಯದ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ರೀತಿಯ ಧೈರ್ಯಶಾಲಿಯನ್ನು ನಾನು ನೋಡಿಲ್ಲ ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿ ರಾಜಕೀಯ ನಾಯಕರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಸಿಎಂ ಡಿ. ಕೆ ಶಿವಕುಮಾರ್ ಬಗ್ಗೆ ಪ್ರಶ್ನೆ ಎದುರಾಗಿದೆ. "ಅಂತಹ ಡೇರಿಂಗ್ ರಾಜಕಾರಣಿಯನ್ನು ನಾನು ನೋಡೇ ಇಲ್ಲ. ನನಗೆ ವೈಯಕ್ತಿಕವಾಗಿ ಕೋಟಿ ಕೋಟಿ ಹಣ ಅಂದಾಕ್ಷಣ ನಡುಕ ಶುರುವಾಗುತ್ತೆ.. ಆದ್ರೆ ಡಿ. ಕೆ ಶಿವಕುಮಾರ್ ಹಣದ ವಿಚಾರದಲ್ಲಿ ಹೆದರುವುದೇ ಇಲ್ಲ. ನಮ್ಮ ದೇಶದಲ್ಲಿ ಹೆಚ್ಚು ಹಣ ಅಂದ್ರೆ ಜನ ಹೆದರುತ್ತಾರೆ. ಆ ಭಯವೇ ಅವರಿಗಿಲ್ಲ. ಯಾವ್ದೊ ಟನಲ್ ಮಾಡೋಕೆ 25 ಸಾವಿರ ಕೋಟಿ ಖರ್ಚಾಗುತ್ತೆ ಅಂತಾರೆ.. ಆ ಲೆಕ್ಕ ಕೇಳಿದ್ರೆ ನನಗೆ ಭಯವಾಗುತ್ತೆ. ಆದ್ರೆ ಅವ್ರು ಧೈರ್ಯವಾಗಿ ಮಾತನಾಡ್ತಾರೆ. ಅಲ್ಲಿಂದ ಇಲ್ಲಿಂದ ಹಣ ಬರುತ್ತೆ ಅಂತಾರೆ. ಅಷ್ಟು ಧೈರ್ಯ ಅವರಿಗಿದೆ" ಎಂದಿದ್ದಾರೆ.
“ಡಿಕೆ ಶಿವಕುಮಾರ್ ಅವರಂತಹ ಧೈರ್ಯಶಾಲಿ ರಾಜಕಾರಣಿಯನ್ನು ನಾನು ಇದುವರೆಗೂ ನೋಡೇ ಇಲ್ಲ.”
— DKS fans karnataka🔥🔥🔥 (@Namma_DKS) September 21, 2026
— ಅನಂತ್ ನಾಗ್ pic.twitter.com/3xEraK2uDN