ಸೂಪರ್ ಸ್ಟಾರ್ ರಜನಿಕಾಂತ್ ಮಗಳನ್ನು ಧನುಷ್ ಮದುವೆ ಆಗಿದ್ದು 18 ವರ್ಷಗಳ ಬಳಿಕ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗಿದ್ದಾರೆ. ಆದರೆ ಮಕ್ಕಳ ವಿಚಾರದಲ್ಲಿ ಅವರಿಬ್ಬರು ಒಟ್ಟಿಗೆ ಇರಲು ತೀರ್ಮಾನಿಸಿದ್ದಾರೆ. ಅವರಿಬ್ಬರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಸ್ವತಃ ತಲೈವಾ ಮುಂದೆ ನಿಂತು ಮದುವೆ ಮಾಡಿಸಿದ್ದರು. ಆದರೆ ಹಲವು ವರ್ಷಗಳ ಬಳಿಕ ಭಿನ್ನಾಭಿಪ್ರಾಯಗಳಿಂದ ಧನುಷ್- ಐಶ್ವರ್ಯ ಬೇರೆಯಾಗಿದ್ದಾರೆ.
ಸದ್ಯ ಮಾಜಿ ಮಾವನಿಗೆ ಧನುಷ್ ಸವಾಲ್ ಹಾಕುತ್ತಿದ್ದಾರೆ ಎಂದು ಭಾರೀ ಚರ್ಚೆ ನಡೀತಿದೆ. ಅದು ಬಾಕ್ಸಾಫೀಸ್ ಕದನದಲ್ಲಿ ನಡೆಯುವ ಪೈಪೋಟಿ ಎನ್ನಲಾಗ್ತಿದೆ. ರಜನಿಕಾಂತ್ ನಟನೆಯ 'ಜೈಲರ್- 2' ಹಾಗೂ ಧನುಷ್ ನಟನೆಯ 'ಓಂ' ಚಿತ್ರಗಳು ಒಂದೇ ದಿನ ಬಿಡುಗಡೆ ಆಗುತ್ತದೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಅಕ್ಟೋಬರ್ 16ರಂದು 'ಜೈಲರ್- 2' ಸಿನಿಮಾ ಬಿಡುಗಡೆ ಮಾಡುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಆದರೆ ಕಾರಣಾಂತರಗಳಿಂದ ತಡವಾಗಬಹುದು ಎನ್ನಲಾಗ್ತಿದೆ.
'ಜೈಲರ್- 2' ಸಿನಿಮಾ ಪೋಸ್ಟ್ ಪೋನ್ ಆಗುವುದರಿಂದ ಅದೇ ದಿನ 'ಓಂ' ಸಿನಿಮಾ ಬಿಡುಗಡೆ ಮಾಡಲು ಧನುಷ್ ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ರಜನಿಕಾಂತ್ ಸಿನಿಮಾ ರಿಲೀಸ್ ಮುಂದೂಡವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಹಾಗಾಗಿ ಎರಡೂ ಸಿನಿಮಾಗಳ ನಡುವೆ ಕ್ಲ್ಯಾಶ್ ಎನ್ನುವ ಚರ್ಚೆ ಮುನ್ನಲೆಗೆ ಬಂದಿದೆ.
ನೆಲ್ಸನ್ ನಿರ್ದೇಶನದ 'ಜೈಲರ್- 2' ಸಿನಿಮಾ ಪೋಸ್ಟ್ ಪ್ರೊಡಕ್ಷನ್ ತಡವಾಗ್ತಿದೆ. ಇತ್ತೀಚೆಗೆ ಕೆಲ ದೃಶ್ಯಗಳನ್ನು ರೀ-ಶೂಟ್ ಮಾಡಿದ್ದಾರೆ. ಹಾಗಾಗಿ ಅಂದುಕೊಂಡ ಸಮಯಕ್ಕೆ ರಿಲೀಸ್ ಸಾಧ್ಯವಾಗದಿರಬಹುದು. ಮುಂದಿನ ವರ್ಷ ಸಂಕ್ರಾಂತಿಗೆ ಸಿನಿಮಾ ತೆರೆಗೆ ಬರಬಹುದು ಎನ್ನಲಾಗ್ತಿದೆ. ಈ ವಿಚಾರ ಗೊತ್ತಾಗಿ ಅಕ್ಟೋಬರ್ 16ರಂದು 'ಓಂ' ಸಿನಿಮಾ ತೆರೆಗೆ ತರುತ್ತಿದ್ದಾರೆ. ಅದು ಬಿಟ್ಟು ಎರಡೂ ಸಿನಿಮಾ ಒಂದೇ ದಿನ ಬಿಡುಗಡೆ ಆಗಲ್ಲ. ಅಂತಹ ತಪ್ಪು ಧನುಷ್ ಮಾಡಲ್ಲ. ರಜನಿಕಾಂತ್ ಬಗ್ಗೆ ಇವತ್ತಿಗೂ ಅವರಿಗೆ ಗೌರವ ಇದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡ್ತಿದ್ದಾರೆ.
'ಜೈಲರ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ಅತಿಥಿ ಪಾತ್ರದಲ್ಲಿ ಅಬ್ಬರಿಸಿ ಕಮಾಲ್ ಮಾಡಿದ್ದರು. ಸೀಕ್ವೆಲ್‌ನಲ್ಲಿ ಕೂಡ ಅವರ ಆರ್ಭಟ ನೋಡಬಹುದು. 'ಅಮರನ್' ಸಿನಿಮಾ ಖ್ಯಾತಿಯ ರಾಜ್‌ಕುಮಾರ್ ಪೆರಿಯಸ್ವಾಮಿ ಈಗ 'ಓಂ' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಸಾಯಿ ಪಲ್ಲವಿ ನಾಯಕಿಯಾಗಿ ಮಿಂಚಿದ್ದು ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.