ಮೂರು ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಡಾಲಿ ಧನಂಜಯ್ ನಿರ್ಮಾಣದ 'ಮದರ್ ಪ್ರಾಮಿಸ್' ಸಿನಿಮಾ ಕೊನೆಗೂ ಓಟಿಟಿಗೆ ಬರ್ತಿದೆ. ಪೂರ್ಣಚಂದ್ರ ಮೈಸೂರು ಚಿತ್ರವನ್ನು ನಿರ್ದೇಶಿಸಿ ನಟಿಸಿದ್ದರು. ಜುಲೈ 10ರಂದು ತೆರೆಗೆ ಬಂದಿದ್ದ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ದೊಡ್ಡಮಟ್ಟದಲ್ಲಿ ಸಿನಿಮಾ ಸದ್ದು ಮಾಡಿರಲಿಲ್ಲ.

ರೋಸಿ ಎಂಬ ಪಾತ್ರದಲ್ಲಿ ಧನಂಜಯ್ ನಟಿಸಿದ್ದರು. ಇನ್ನುಳಿದಂತೆ ಪೂರ್ಣಚಂದ್ರ, ಚಿ. ಗುರುದತ್, ವಿನಯ ಪ್ರಸಾದ್, ಗೀತಾ, ನಾಗಭೂಷಣ್ ಚಿತ್ರದಲ್ಲಿದ್ದರು. ಕಾಲ್ಪನಿಕ ಬೆಂಗಳೂರು ನಗರದಲ್ಲಿ ನಡೆಯುವ ಗ್ಯಾಂಗ್‌ಸ್ಟರ್- ಕಾಮಿಡಿ ಇದು. ರಾಹುಲ್ ರಾಯ್ ಛಾಯಾಗ್ರಹಣ ಹಾಗೂ ನವನೀತ್ ಶ್ಯಾಮ್ ಸಂಗೀತ ಚಿತ್ರಕ್ಕಿದೆ. ಅಕ್ಟೋಬರ್ 2ರಂದು ಜೀ-5ನಲ್ಲಿ 'ಮದರ್ ಪ್ರಾಮಿಸ್' ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ.

ರೋಸಿ(ಧನಂಜಯ್) ಹಾಗೂ ದೊನ್ನೆ ಬಿರಿಯಾನಿ(ಮಹಾದೇವ್ ಪ್ರಸಾದ್) ಚಿಕ್ಕಂದಿನಲ್ಲಿ ಸ್ನೇಹಿತರು. ಕಾರಣಾಂತರಗಳಿಂದ ದೂರಾಗ್ತಾರೆ. ರೋಸಿ ಬೈಕ್ ರೇಸರ್ ಜೊತೆಗೆ ಬೆಟ್ಟಿಂಗ್ ಅಡ್ಡ ನಡೆಸುತ್ತಿರುತ್ತಾನೆ. ಇನ್ನು ದೊನ್ನೆ ಬಿರಿಯಾನಿ ಬೆಂಗಳೂರಿನಲ್ಲಿ ಸ್ಮಂಗ್ಲಿಂಗ್ ಕಿಂಗ್‌ಪಿನ್ ಆಗ್ತಾನೆ. ಇವರಿಬ್ಬರ ನಡುವೆ ರ್ಯಾಂಡಿ(ಪೂರ್ಣಚಂದ್ರ ಮೈಸೂರು) ತಗ್ಲಾಕಿಕೊಂಡು ಏನೆಲ್ಲಾ ಆಗುತ್ತೆ ಎನ್ನುವುದು 'ಮದರ್ ಪ್ರಾಮಿಸ್' ಚಿತ್ರದ ಕಥೆ.

ತಾಯಿ ಸೆಂಟಿಮೆಂಟ್ ಕೂಡ ಚಿತ್ರದಲ್ಲಿದೆ. ಧನಂಜಯ್ ತಾಯಿ ಪಾತ್ರದಲ್ಲಿ ವಿನಯ ಪ್ರಸಾದ್ ನಟಿಸಿದ್ದಾರೆ. ಇನ್ನುಳಿದಂತೆ ಹೊಸ ಪ್ರತಿಭೆಗಳ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಸಣ್ಣಪುಟ್ಟ ತಪ್ಪುಗಳ ನಡುವೆಯೂ ಸಿನಿಮಾ ಪ್ರೇಕ್ಷಕರನ್ನು ರಂಜಿಸಿತ್ತು. ಆದರೆ ದೊಡ್ಡದಾಗಿ ಗೆಲ್ಲಲಿಲ್ಲ. ಓಟಿಟಿಯಲ್ಲಿ ರೆಸ್ಪಾನ್ಸ್ ಹೇಗಿರುತ್ತೆ ಕಾದು ನೋಡಬೇಕು.