ಹಿಟ್ ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆ ಮಿಂಚಿದ್ದ ದೀಪಾ ಸನ್ನಿಧಿ ದಿಢೀರ್ ಚಿತ್ರರಂಗದಿಂದ ದೂರಾಗಿಬಿಟ್ಟಿದ್ದರು. ಆಕೆಯನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ದೀಪಾ ಮಾತ್ರ ಸೈಲೆಂಟ್ ಆಗಿಬಿಟ್ಟಿದ್ದಾರೆ. ದೀಪಾವಳಿ ಸಂಭ್ರಮದಲ್ಲಿ ಹಬ್ಬದ ಶುಭಾಶಯ ಕೋರಿ ಪೋಸ್ಟ್ ಮಾಡಿದ್ದಾರೆ.

ಲೆಹಂಗಾ ಚೋಲಿ ಧರಿಸಿ ದೀಪಾ ಒಂದಷ್ಟು ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಅದನ್ನು ಮಾಟೆಂಜ್ ಮಾಡಿ ವೀಡಿಯೋ ಪೋಸ್ಟ್ ಮಾಡಿದ್ದಾರೆ. ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ದೀಪಾ ಪೋಸ್ಟ್ ಸಖತ್ ವೈರಲ್ ಆಗ್ತಿದೆ. ಇಷ್ಟು ದಿನ ಏನ್ ಮಾಡ್ತಿದ್ದೀರಾ ಮೇಡಂ, ಮತ್ತೆ ಸಿನಿಮಾಗಳಲ್ಲಿ ನಟಿಸೋದು ಯಾವಾಗ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

"ಇವಾಗ ದೀಪಾವಳಿ ಹಬ್ಬಕೆ ಕಳೆ ಬಂತು" ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ರೆ, "ಅಪರೂಪಕ್ಕೆ ಕಾಣಿಸ್ಕೊಂಡ್ರಲ್ಲಾ" ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ದರ್ಶನ್ ಜೊತೆ 'ಸಾರಥಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ದೀಪಾ ಸನ್ನಿಧಿ ಚಿತ್ರರಂಗ ಪ್ರವೇಶಿಸಿದ್ದರು. ಪರಮಾತ್ಮ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೋಡಿಯಾಗಿ ಮೋಡಿ ಮಾಡಿದ್ದರು. 'ಜಾನು' ಚಿತ್ರದಲ್ಲಿ ಯಶ್ ಜೊತೆಯಾಗಿದ್ದರು. 'ಸಕ್ಕರೆ', 'ಎಂದೆಂದು ನಿನಗಾಗಿ' ಕನ್ನಡದಲ್ಲಿ ಆಕೆ ನಟಿಸಿದ ಸಿನಿಮಾ. ಬಳಿಕ ತಮಿಳು ಚಿತ್ರಗಳಲ್ಲಿ ನಟಿಸಿದ್ದರು.

'ಚೌಕ' ಚಿತ್ರದಲ್ಲೊಂದು ಪಾತ್ರ ಮಾಡಿದ್ದ ದೀಪಾ ಕೊನೆಗೆ 'ಚಕ್ರವರ್ತಿ' ಚಿತ್ರದ ಶಾಂತಿ ಪಾತ್ರದ ಮೂಲಕ ಸಿನಿಮಾಗಳಿಗೆ ಬ್ರೇಕ್ ಹಾಕಿದ್ದರು. ಬಳಿಕ ಸೈಲೆಂಟ್ ಆಗಿಬಿಟ್ಟರು. ಚಿಕ್ಕಮಗಳೂರು ಮೂಲದ ಈ ಚೆಲುವೆ ನಿಜವಾದ ಹೆಸರು 'ರಹಸ್ಯ'. ಬಳಿಕ ದೀಪಾ ಸನ್ನಿಧಿ ಎಂದು ಹೆಸರು ಬದಲಿಸಿಕೊಂಡಿದ್ದರು. ಆಕೆಯನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ದೀಪಾವಳಿ ಸಂಭ್ರಮದಲ್ಲಿ ಆ ಬಗ್ಗೆ ಏನಾದರೂ ಅಪ್‌ಡೇಟ್ ಸಿಗುತ್ತಾ ಕಾದು ನೋಡಬೇಕು.