ರೇಣುಕಾಸ್ವಾಮಿ ಪ್ರಕರಣದ ಇತ್ತೀಚಿನ ಬೆಳವಣಿಗೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣದ 14 ಆರೋಪಿ ಪ್ರದೋಷ್ ಮಾಫಿ ಸಾಕ್ಷಿ ಆಗಿ ಬದಲಾಗಿರುವುದು ಗೊತ್ತೇಯಿದೆ. ಆತ ಸಾಕ್ಷ್ಯ ನುಡಿಯದಂತೆ ದರ್ಶನ್ ಮಾಡಿದ ಪ್ರಯತ್ನ ಎಲ್ಲವೂ ವಿಫಲವಾಗಿತ್ತು. ನಾಲ್ಕು ದಿನಗಳಿಂದ ಪ್ರದೋಷ್ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸುತ್ತಿದ್ದಾನೆ. ಇದಕ್ಕೆಲ್ಲಾ ಸವಾಲು ಹಾಕಲು ದರ್ಶನ್ ಮಾಸ್ಟರ್ ಪ್ಲ್ಯಾನ್ ಮಾಡಿದಂತೆ ಕಾಣ್ತಿದೆ.
ಪ್ರದೋಷ್ ಮಾಫಿ ಸಾಕ್ಷಿ ಹೇಳದಂತೆ ಮನವಿ ಮಾಡಿ ದರ್ಶನ್ ಪದೇ ಪದೇ ಅರ್ಜಿ ಹಾಕಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಈಗ ಮುಂದೇನು ಎನ್ನುವ ಲೆಕ್ಕಾಚಾರಕ್ಕೆ ಬಂದಿದ್ದಾರೆ. ಹೈಕೋರ್ಟ್ ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಪತಿ ಪರ ವಿಜಯಲಕ್ಷ್ಮಿ ದರ್ಶನ್ ಅರ್ಜಿ ಹಾಕಿದ್ದಾರೆ. ಸೆಪ್ಟೆಂಬರ್ 23ರಂದು ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಕೆ ಆಗಿದೆ. ಅಕ್ಟೋಬರ್ 7ರಂದು ಸುಪ್ರೀಂ ಕೋರ್ಟ್‌ನಲ್ಲಿ ಈ ಅರ್ಜಿ ವಿಚಾರಣೆ ನಡೆಯಲಿದೆ.
ನಾಲ್ಕು ದಿನಗಳಿಂದ ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಾಗ್ತಿದೆ. ಇದೆಲ್ಲದರ ನಡುವೆ ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಸಲ್ಲಿಸಿರುವ ಅರ್ಜಿಯ ಅದೊಂದು ಅಂಶ ಗಮನ ಸೆಳೆದಿದೆ. "ಸಾಕ್ಷ್ಯ ನುಡಿಯಲಿ.. ಆದ್ರೆ.. ಆ ಬಳಿಕ ಮಾತು ಬದಲಿಸಬಾರದು. ನಿನ್ನೆ ಹೇಳೋಕೆ ಮರೆತ್ತಿದ್ದೆ, ಇವತ್ತು ಹೇಳ್ತೀನಿ ಸೇರಿಸಿಕೊಳ್ಳಿ ಅಂದ್ರೆ ಒಪ್ಪಬೇಡಿ, ಪ್ರದೋಷ್ ತನ್ನ ಹೇಳಿಕೆ ಬದಲಾಯಿಸಿ ತಿರುಚದಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ ಎಂದು ಟಿವಿ5 ಕನ್ನಡ ವಾಹಿನಿ ವರದಿ ಮಾಡಿದೆ. ಪ್ರದೋಷ್ ಹೇಳಿಕೆ ದಾಖಲಿಸಿದ ಬಳಿಕ ದರ್ಶನ್ ಪರ ವಕೀಲರಿಂದ ಪಾಟಿ ಸವಾಲು ಪ್ರಕ್ರಿಯೆ ನಡೆಯಲಿದೆ. ಇಂತಹ ಸಮಯದಲ್ಲಿ ಈ ವಿಚಾರ ಪ್ರಾಮುಖ್ಯತೆ ಪಡೆದುಕೊಳ್ಳಲಾಗುತ್ತದೆ.
ಪ್ರದೋಷ್ ಹೇಳಿದ ಮಾತ್ರಕ್ಕೆ ಎಲ್ಲವನ್ನು ನ್ಯಾಯಾಲಯ ಒಪ್ಪುವುದಿಲ್ಲ. ದರ್ಶನ್ ಪರ ವಕೀಲರು ಮಾತ್ರವಲ್ಲ ಇತರೆ ಆರೋಪಿಗಳ ಪರ ವಕೀಲರು ಕೂಡ ಪಾಟಿ ಸವಾಲು ಮಾಡ್ತಾರೆ. ವಕೀಲರ ಪ್ರಶ್ನೆಗಳಿಗೆ ಪ್ರದೋಷ್ ಸರಿಯಾದ ಉತ್ತರ ಕೊಡಬೇಕಾಗುತ್ತದೆ. ಅಂತಹ ಸಮಯದಲ್ಲಿ ಹೇಳಿಕೆ ಬದಲಿಸಲು ಯತ್ನಿಸಬಾರದು ಎನ್ನುವ ಕಾರಣಕ್ಕೆ ದರ್ಶನ್ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಈ ವಿಚಾರವನ್ನು ಪ್ರಸ್ತಾಪಿದ್ದಾರೆ ಎನ್ನಲಾಗ್ತಿದೆ. ಅಂದ್ರೆ ಪ್ರದೋಷ್ ಬಾಣಕ್ಕೆ ದರ್ಶನ್ ತಿರುಗುಬಾಣ ಸಿದ್ಧಪಡಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.