2026ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ ಘೋಷಣೆಯಾಗಿದೆ. 'ಧುರಂಧರ್' ಚಿತ್ರಕ್ಕೆ ಸಿಂಹಪಾಲು ಲಭಿಸಿದೆ. 'ಕಾಂತಾರ- 1' ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಹಾಗೂ ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಭಾರತದ ಸಿನಿಮಾ, ಅಂತರರಾಷ್ಟ್ರೀಯ ಸಿನಿಮಾ, ವೆಬ್ ಸೀರಿಸ್, ಟಿವಿ ಮತ್ತು ಸಂಗೀತ ಕ್ಷೇತ್ರದಲ್ಲಿ ವಿಜೇತರನ್ನು ಘೋಷಿಸಲಾಗಿದೆ. 'ಧುರಂಧರ್' ಚಿತ್ರದ ನಟನೆಗಾಗಿ ರಣ್‌ವೀರ್ ಸಿಂಗ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಇನ್ನು ಟೇಲರ್ ಸ್ವಿಫ್ಟ್, ಜೇಮ್ಸ್ ಕ್ಯಾಮರೂನ್, ಮೈಕೆಲ್ ಬಿ. ಜೋರ್ಡಾನ್ ಸೇರಿ ಹಲವು ಅಂತರರಾಷ್ಟ್ರೀಯ ಸೆಲೆಬ್ರಿಟಿಗಳು ಈ ವರ್ಷದ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿದ್ದಾರೆ.

'ಕಾಂತಾರ- 1' ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಕ್ರಿಟಿಕ್ಸ್ ಪ್ರಶಸ್ತಿ ರಿಷಬ್ ಶೆಟ್ಟಿ ಪಡೆದುಕೊಂಡಿರುವುದು ವಿಶೇಷ. ಅರವಿಂದ್ ಕಶ್ಯಪ್ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 'ಧುರಂಧರ್' ಚಿತ್ರಕ್ಕಾಗಿ ಆದಿತ್ಯಧರ್ ಅತ್ಯುತ್ತಮ ನಿರ್ದೇಶಕ, 'ಸಯ್ಯಾರ' ಚಿತ್ರಕ್ಕಾಗಿ ಅನೀತ್ ಪಡ್ಡಾ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 'ಧುರಂಧರ್' ಅತ್ಯುತ್ತಮ ಚಿತ್ರ ಪ್ರಶಸ್ತಿಗೂ ಆಯ್ಕೆಯಾಗಿದೆ. ಇನ್ನುಳಿದ ವಿಜೇತರ ಪಟ್ಟಿ ಇಲ್ಲಿದೆ.

ಅತ್ಯುತ್ತಮ ಪೋಷಕ ನಟ: ವಿನೀತ್ ಕುಮಾರ್ ಸಿಂಗ್ (ಛಾವಾ)

ಅತ್ಯುತ್ತಮ ಸಂಗೀತ ನಿರ್ದೇಶಕ: ಶಾಶ್ವತ್ ಸಂದೇವ್ (ಧುರಂಧರ್)

ವಿಮರ್ಶಕರ ಚಿತ್ರ(ಕ್ರಿಟಿಕ್ಸ್): ಕಾಂತಾರ: ಅಧ್ಯಾಯ 1

ಅತ್ಯುತ್ತಮ ಖಳನಟ: ಅಕ್ಷಯ್ ಖನ್ನಾ (ಧುರಂಧರ್)

ಅತ್ಯುತ್ತಮ ಹಾಸ್ಯನಟ: ರಿತೇಶ್ ದೇಶಮುಖ್ (ಹೌಸ್‌ಫುಲ್)

ಅತ್ಯುತ್ತಮ ನಟ(ಕ್ರಿಟಿಕ್ಸ್): ಯಾಮಿ ಗೌತಮ್ (ಹಕ್)

ಅತ್ಯುತ್ತಮ ಚಿತ್ರಕಥೆ ಮತ್ತು ಸಂಭಾಷಣೆ: ರಿಶು ನಾಥ್ (ಹಕ್)

ಅತ್ಯುತ್ತಮ ಗೀತರಚನೆಕಾರ: ಇರ್ಷಾದ್ ಕಾಮಿಲ್ (ಸಯಾರಾ)

ಅತ್ಯುತ್ತಮ ಹಿನ್ನೆಲೆ ಗಾಯಕ: ಫಹೀಮ್ ಅಬ್ದುಲ್ಲಾ (ಸಯಾರಾ)

ವರ್ಷದ ನಿರ್ಮಾಪಕ: ಆದಿತ್ಯಧರ್, ಜ್ಯೋತಿ ದೇಶಪಾಂಡೆ, ಲೋಕೇಶಧರ್

ಅತ್ಯುತ್ತಮ ನೃತ್ಯ ಸಂಯೋಜನೆ: ಸ್ಯಾಂಡಿ ಮಾಸ್ಟರ್ (ಕೂಲಿ ಚಿತ್ರದ ಮೋನಿಕಾ ಬೆಲೂಸಿ)

ಚಿತ್ರರಂಗಕ್ಕೆ ಅತ್ಯುತ್ತಮ ಕೊಡುಗೆ: ಕಮಲ್ ಹಾಸನ್

ವರ್ಷದ ಕಲಾವಿದ: ಕರಣ್ ಅಗ್ನಾ

ವರ್ಷದ ಹಾಡು: ಸಯಾರಾ

ವರ್ಷದ ಹಾಸ್ಯನಟ: ಸೇಮ್ ರೈನಾ

ಸಂಗೀತ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆ: ಇಳಯರಾಜಾ