ಒಂದು ಸೂಪರ್ ಹಿಟ್ ಸಿನಿಮಾ ಸೀಕ್ವೆಲ್ ಬರುವುದು ಸರ್ವೇಸಾಮಾನ್ಯ. ಆದರೆ ಒಂದೇ ಚಿತ್ರಕ್ಕೆ ಎರಡು ಬೇರೆ ಬೇರೆ ಸೀಕ್ವೆಲ್ ಬಂದ್ರೆ ಹೇಗೆ ? ಇಂತಾದೊಂದು ವಿಚಿತ್ರ ಸನ್ನಿವೇಶಕ್ಕೆ ತೆಲುಗಿನ 'ಹನುಮಾನ್' ಸಾಕ್ಷಿ ಆಗ್ತಿದೆ. ಪ್ರಶಾಂತ್ ವರ್ಮಾ ನಿರ್ದೇಶನದ 'ಹನುಮಾನ್' ಸಿನಿಮಾ ಎರಡು ವರ್ಷಗಳ ಹಿಂದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಕಡಿಮೆ ಬಜೆಟ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು.
ಸೂಪರ್ ಹಿಟ್ 'ಹನುಮಾನ್' ಚಿತ್ರದ ಸೀಕ್ವೆಲ್ ಅನ್ನು ಪ್ರಶಾಂತ್ ವರ್ಮಾ ಕಟ್ಟಿಕೊಡುತ್ತಿದ್ದಾರೆ. ಹನುಮಂತನಾಗಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಜೊತೆ ಸೇರಿ ಸಿನಿಮಾ ನಿರ್ಮಾಣಕ್ಕೂ ಡಿವೈನ್ ಸ್ಟಾರ್ ಕೈಜೋಡಿಸಿದ್ದಾರೆ. ಅಂಜನಾದ್ರಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ ಚಿತ್ರಕ್ಕೆ ಚಾಲನೆ ಕೊಡಲಾಗಿತ್ತು. ಇದೀಗ 'ಹನುಮಾನ್' ಕಥೆಯನ್ನು ಮುಂದುವರೆಸುವುದಾಗಿ ಹೇಳಿ ಮತ್ತೊಂದು ಸಿನಿಮಾ ಘೋಷಣೆ ಮಾಡಲಾಗಿದೆ.
ಪ್ರೈಂ ಶೋ ಎಂಟರ್‌ಟೈನ್‌ಮೆಂಟ್ ಸಂಸ್ಥೆ 'ಹನುಮಾನ್' ಸಿನಿಮಾ ನಿರ್ಮಿಸಿತ್ತು. ಇದೀಗ ಅದೇ ಸಂಸ್ಥೆ 'ಹನುಮಾನ್- 2' ಸಿನಿಮಾ ಘೋಷಿಸಿದೆ. ಮೆಗಾ ಫ್ಯಾಮಿಲಿ ಕುಡಿ ಪಂಜಾ ವೈಷ್ಣವ್ ತೇಜ ಚಿತ್ರದಲ್ಲಿ ಹೀರೊ ಆಗಿ ನಟಿಸುತ್ತಿದ್ದಾರೆ. ಹೀಗೆ ಒಂದೆ ಹಿಟ್ ಚಿತ್ರಕ್ಕೆ ಎರಡೆರಡು ಸೀಕ್ವೆಲ್ ಮಾಡೋಕೆ ಹೊರಟಿರುವುದು ಭಾರತದಲ್ಲಿ ಇದೇ ಮೊದಲ ಪ್ರಯತ್ನ ಅನಿಸುತ್ತಿದ್ದಾರೆ. ಪ್ರೈಂ ಶೋ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಹಾಗೂ ನಿರ್ದೇಶಕ ಪ್ರಶಾಂತ್ ವರ್ಮಾ ನಡುವಿನ ಭಿನ್ನಾಭಿಪ್ರಾಯದಿಂದ ಹೀಗೆ ಆಗಿರಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಈಗೋ ಕಾರಣಕ್ಕೆ ಹೀಗೆ ಪ್ರೈಂ ಶೋ ಸಂಸ್ಥೆ ಮತ್ತೊಂದು ಸಿನಿಮಾ ಮಾಡುವುದು ಸರಿಯಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ರಿಷಬ್ ಹಾಗೂ ಪ್ರಶಾಂತ್ ವರ್ಮಾ ಜೋಡಿಯ 'ಜೈಹನುಮಾನ್' ಸಿನಿಮಾ ಹಿಟ್ ಆಗುತ್ತೆ. 'ಹನುಮಾನ್- 2' ಗೆಲ್ಲುವುದು ಕಷ್ಟ ಎಂದು ವ್ಯಂಗ್ಯವಾಡುತ್ತಿದ್ದಾರೆ. ಹೀಗೆ ಒಂದು ಹಿಟ್ ಸಿನಿಮಾ ಹೆಸರನ್ನು ಇಟ್ಟುಕೊಂಡು ಎಲ್ಲರೂ ಲಾಭ ಮಾಡಿಕೊಳ್ಳಲು ಮುಂದಾಗುವುದು ಸರಿಯಲ್ಲ ಎಂದು ಕೆಲವರು ಸಲಹೆ ನೀಡುತ್ತಿದ್ದಾರೆ. ಅಂದಹಾಗೆ 'ಹನುಮಾನ್- 2' ಚಿತ್ರಕ್ಕೆ ವಿ. ಆನಂದ್ ಎಂಬುವವರು ಆಕ್ಷನ್ ಕಟ್ ಹೇಳಲಿದ್ದಾರೆ. ಶೀಘ್ರದಲ್ಲೇ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ ಎಂದು ನಿರ್ಮಾಪಕರು ಹೇಳಿದ್ದಾರೆ.
ಚಿರಂಜೀವಿ ಸಹೋದರಿ ಮಗ ಪಂಜಾ ವೈಷ್ಣವ್ ತೇಜ್ ಹೀರೊ ಆಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ಆದರೆ ನಟಿಸಿದ ಸಿನಿಮಾಗಳು ಕೈಹಿಡಿಯಲಿಲ್ಲ. ಇದೀಗ ಮನೆದೇವರ ಹೆಸರಿನಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಹೀರೊ ಆಗಿದ್ದಾರೆ. ನಿಜಕ್ಕೂ 'ಹನುಮಾನ್- 2' ಸಿನಿಮಾ ತೆರೆಗೆ ಬರುತ್ತಾ, ಅರ್ಧಕ್ಕೆ ನಿಲ್ಲುತ್ತಾ ಕಾದು ನೋಡಬೇಕಿದೆ. ಇನ್ನು ಪ್ರೈಂ ಶೋ ಎಂಟರ್‌ಟೈನ್‌ಮೆಂಟ್ ಸಂಸ್ಥೆ ದೊಡ್ಡ ದೊಡ್ಡ ಸಿನಿಮಾಗಳ ನಿರ್ಮಾಣಕ್ಕೆ ಕೈಹಾಕಿದೆ. ಕನ್ನಡದಲ್ಲಿ 'ಬಿಲ್ಲರಂಗಬಾಷ' ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.
What began with a dream continues with an even bigger vision❤️🔥
— Primeshow Entertainment (@Primeshowtweets) November 21, 2026
Proud to take the legacy of #HanuMan forward with our next ambitious venture.
Presenting #HanuMan2 – THE RISE OF VANARAS 🔥
Looking forward to this exciting collaboration with #PanjaVaisshnavTej and the pic.twitter.com/LXjrDhneEe