ದುನಿಯಾ ವಿಜಯ್ ಹಾಗೂ ವಿನಯ್ ರಾಜ್‌ಕುಮಾರ್ ಕಾಂಬಿನೇಷನ್ 'ಸಿಟಿಲೈಟ್ಸ್' ಸಿನಿಮಾ ತೆರೆಕಂಡು ಭರ್ಜರಿ ಪ್ರದರ್ಶನ ಕಾಣ್ತಿದೆ. ಮಾಸ್ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಿನಿಮಾ ಸಕ್ಸಸ್ ಕಂಡಿದೆ. ದುನಿಯಾ ವಿಜಯ್ ಅಭಿಮಾನಿಗಳು ಚಿತ್ರ ಮೆಚ್ಚಿಕೊಳ್ಳುತ್ತಿದ್ದಾರೆ. ನಿಧಾನವಾಗಿ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಬೆಂಗಳೂರಿನ ಕತ್ತಲಲೋಕದ ಪರಿಚಯ ಮಾಡಿಸುವ ಸಿನಿಮಾ ಗೆಲುವು ಸಿಕ್ತಿದೆ
ದುನಿಯಾ ವಿಜಯ್ ಪುತ್ರಿ ಮೋನಿಷಾ ನಾಯಕಿಯಾಗಿ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಿತರಾಗಿದ್ದಾರೆ. ಮೊದಲ ಪ್ರಯತ್ನದಲ್ಲೇ ಆಕೆಯ ನಟನೆಗೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಹಿರಿಯ ನಟಿ ಉಮಾಶ್ರೀ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿ ಚಿತ್ರಕ್ಕೆ ಬಲ ತುಂಬಿದ್ದಾರೆ. ಚರಣ್ ರಾಜ್ ಸಂಗೀತ, ಶಿವಸೇನಾ ಛಾಯಾಗ್ರಹಣ ಚಿತ್ರಕ್ಕೆ ಪ್ಲಸ್ ಆಗಿದೆ. ಈಗಾಗಲೇ ಸಿನಿಮಾ ನೋಡಿದವರು ಮೆಚ್ಚಿ ಕಾಮೆಂಟ್ ಮಾಡುತ್ತಿದ್ದಾರೆ. ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ವಿನಯ್ ಮಿಂಚು
'ಸಿಟಿಲೈಟ್ಸ್' ಚಿತ್ರವು ಆಕ್ಷನ್, ಭಾವನೆ ಮತ್ತು ಸಾಕಷ್ಟು ಕಮರ್ಷಿಯಲ್ ಅಂಶಗಳಿಂದ ಕೂಡಿದೆ.
ವಿನಯ್ ರಾಜ್‌ಕುಮಾರ್ ತಮ್ಮ ಚುರುಕಾದ ಅಭಿನಯದ ಮೂಲಕ ಪರದೆಯ ಮೇಲೆ ಮಿಂಚಿದ್ದಾರೆ. ಬಹಳ ರೋಚಕವಾಗಿ ದುನಿಯಾ ವಿಜಯ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ ಎಂದು ಲೋಕೇಶ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ಕೆಲ ದೃಶ್ಯಗಳು ಮೈನಸ್
ಫಸ್ಟ್ ಹಾಫ್ ಸೂಪರ್.. ಸೆಕೆಂಡ್ ಹಾಫ್ ಇನ್ನು ಚೆನ್ನಾಗಿರಬಹುದಿತ್ತು. ವಿನಯ್ ನಟನೆ ಚೆನ್ನಾಗಿದೆ.
ಮೋನಿಷಾ ಅವರ ಪಾತ್ರ ಮತ್ತು ಅವರ ಅಭಿನಯ ಎರಡೂ ಚೆನ್ನಾಗಿವೆ. ಮಾಸ್ತಿ ಅವರ ಸಂಭಾಷಣೆ, ಚರಣ್ ರಾಜ್ ಅವರ ಹಿನ್ನೆಲೆ ಸಂಗೀತ, ವಿನಯ್ ಅವರ ಡೈಲಾಗ್ ಡೆಲಿವರಿ, ದುನಿಯಾ ವಿಜಯ್ ಅವರ ಚಿತ್ರಕಥೆ ಚಿತ್ರದ ಪ್ಲಸ್ ಪಾಯಿಂಟ್ಸ್.. ಸೆಕೆಂಡ್ ಹಾಫ್ ಕೆಲ ದೃಶ್ಯಗಳು ಮೈನಸ್ ಆಗಿದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ತೃಪ್ತಿದಾಯಕ ಸಿನಿಮಾ
ಹ್ಯಾಟ್ರಿಕ್.. ದುನಿಯಾ ವಿಜಯ್ ಮತ್ತೊಮ್ಮೆ ಗೆದ್ದಿದ್ದಾರೆ.. ಫಸ್ಟ್ ಹಾಫ್ ಚೆನ್ನಾಗಿದೆ. ಮಾಸ್ ಸೆಕೆಂಡ್ ಹಾಫ್. ಸಂಗೀತ ಸಾಮ್ರಾಟ ಚರಣ್ ರಾಜ್ ಮತ್ತೊಮ್ಮೆ ಮೋಡಿ ಮಾಡಿದ್ದಾರೆ..
ಆಕ್ಷನ್ ದೃಶ್ಯಗಳಲ್ಲಿ ವಿನಯ್ ಅಬ್ಬರಿಸಿದ್ದಾರೆ.. ಮೊನಿಷಾ ಅವರಿಗೆ ಒಳ್ಳೆ ಡೆಬ್ಯು. ಒಟ್ಟಾರೆಯಾಗಿ ಇದೊಂದು ತೃಪ್ತಿದಾಯಕ ಕಮರ್ಷಿಯಲ್ ಮನರಂಜನಾ ಚಿತ್ರ ಎಂದು ಕೇಶವ ಎಂಬುವವರು ರಿವ್ಯೂ ಕೊಟ್ಟಿದ್ದಾರೆ.
ಕಂಡಿತ ನೋಡಬಹುದು
'ಸಿಟಿಲೈಟ್ಸ್' ಚಿತ್ರದ ಮೊದಲಾರ್ಧವು ಅತ್ಯುತ್ತಮವಾಗಿದ್ದು, ಮೆಜೆಸ್ಟಿಕ್‌ನ ರಾತ್ರಿಜೀವನದ ನೈಜ ಹಾಗೂ ಕರಾಳ ಮುಖವನ್ನು ಅನಾವರಣಗೊಳಿಸುತ್ತದೆ. ಚಿತ್ರದಲ್ಲಿ ಸಂಭಾಷಣೆಗಳು ಹೆಚ್ಚಿದ್ದರೂ, ಅವು ಪರಿಣಾಮಕಾರಿಯಾಗಿ ಮೂಡಿಬಂದಿವೆ. ದುನಿಯಾ ವಿಜಯ್ ನಿರ್ದೇಶನದ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕೆಲವು ನ್ಯೂನತೆಗಳು ಈ ಚಿತ್ರದ ದ್ವಿತೀಯಾರ್ಧದಲ್ಲೂ ಇದ್ದರೂ, ಈ ಚಿತ್ರವನ್ನು ಖಂಡಿತವಾಗಿಯೂ ವೀಕ್ಷಿಸಬಹುದು" ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ.
Good First Half #CityLights💥
— Đᴀʟᴀᴘᴀᴛʜʏ (@Dalapathy_Here) September 18, 2026
Second Half Swalpa Chanagirbekitthu
Vinay Perfect Actor Material👌
Monisha's Role Good & Her Acting Too
+;- Maasti's Dialogues,Charan Raj's BGM,Vinay's Dialogue Delivery,Duniya Vija's Screenplay 🔥
-;Some Scenes Frm 2nd Half
Overall 3.5/5 https://t.co/Yrqv2zQp3Z
Hattrick 🔥🔥🔥#Duniyavijay has won again
— Keshava (@Keshav367212606) September 18, 2026
A good first half followed by a Mass second half
Musical Emperor charanRaj Strikes Again 😍😍#Vinayrajkumar dominated in action sequences
Good debut for Monishavijaykumar
Overall a satisfying commercial entertainer #Citylights https://t.co/4e6gFGAcJG
#CityLights has a strong first half that shows the real, dark side of Majestic nightlife. The story has a lot of dialogue, but it works very well. Even though the second half has the usual flaws found in a Duniya Vijay directorial movie, It is definitely worth watching! 👌 https://t.co/b5BjIlWF4Z
— E=mc² (@Kabab_Lover_) September 18, 2026