ದುನಿಯಾ ವಿಜಯ್ ನಿರ್ದೇಶನದಲ್ಲಿ ವಿನಯ್ ರಾಜ್‌ಕುಮಾರ್ ಹಾಗೂ ಮೊನಿಷಾ ನಟನೆಯ 'ಸಿಟಿಲೈಟ್ಸ್' ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಮೊದಲ ದಿನಕ್ಕಿಂತ 2ನೇ ದಿನ ಚಿತ್ರಕ್ಕೆ ರೆಸ್ಪಾನ್ಸ್ ಚೆನ್ನಾಗಿತ್ತು. ನಿಧಾನವಾಗಿ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಮಾಸ್ ಎಂಟರ್‌ಟೈನರ್ ಸಿನಿಮಾ ಮುಂದುವರೆದಿದೆ.

ಈ ಬಾರಿ ನಟನೆ ಬಿಟ್ಟು ನಿರ್ದೇಶನ ಮಾಡಿ ವಿಜಯ್ ಸಕ್ಸಸ್ ಕಂಡಿದ್ದಾರೆ. ಕಡಿಮೆ ಬಜೆಟ್‌ನಲ್ಲಿ ಒಳ್ಳೆ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಒಂದಷ್ಟು ತಪ್ಪುಗಳ ನಡುವೆಯೂ ಅವರ ಅಭಿಮಾನಿಗಳನ್ನು ಸಿನಿಮಾ ರಂಜಿಸ್ತಿದೆ. ವಿನಯ್ ರಾಜ್‌ಕುಮಾರ್‌ ಅವರಿಗೂ 'ಸಿಟಿಲೈಟ್ಸ್' ಒಳ್ಳೆ ಬ್ರೇಕ್ ಕೊಡುವ ನಿರೀಕ್ಷೆಯಿದೆ. ಸಂಜೆ ಶೋಗಳು ಹೌಸ್‌ಫುಲ್ ಆಗ್ತಿದೆ. ಭಾನುವಾರ ಕಲೆಕ್ಷನ್ ಮತ್ತಷ್ಟು ಹೆಚ್ಚುವ ಸುಳಿವು ಸಿಕ್ಕಿದೆ.

2ನೇ ದಿನ ಕಲೆಕ್ಷನ್

ಮೊದಲ ದಿನ 80 ಲಕ್ಷ ರೂ. ಕಲೆಕ್ಷನ್ ಮಾಡಿದ್ದ ಸಿನಿಮಾ 2ನೇ ದಿನ 99 ಲಕ್ಷ ರೂ. ಬಾಚಿರುವ ಅಂದಾಜಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ. ಮಹಿಳಾ ಪ್ರೇಕ್ಷಕರ ಚಿತ್ರವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ರೌಡಿಸಂ, ಮಾಸ್ ಆಕ್ಷನ್ ಜೊತೆಗೆ ವೇಶ್ಯಾವಾಟಿಕೆ ಸೇರಿದಂತೆ ಒಂದಷ್ಟು ವಿಚಾರಗಳ ಮೇಲೆ ಬೆಳಕು ಚೆಲ್ಲಿರುವುದು ಇಷ್ಟವಾಗ್ತಿದೆ.

3ನೇ ದಿನವೂ ಆರ್ಭಟ

ಭಾನುವಾರದ ರಜಾ ದಿನದ ಲಾಭ 'ಸಿಟಿಲೈಟ್ಸ್' ಚಿತ್ರಕ್ಕೆ ಸಿಕ್ಕಿದೆ. ಮೊದಲ 2 ದಿನಗಳಿಂದ 3ನೇ ದಿನ ಗಳಿಕೆ ಮತ್ತಷ್ಟು ಹೆಚ್ಚಾಗಿರುವ ಅಂದಾಜಿದೆ. ಭಾನುವಾರ ಸಿನಿಮಾ 1 ಕೋಟಿ ರೂ.ಗೂ ಹೆಚ್ಚು ಕೊಳ್ಳೆ ಹೊಡೆದಿದೆ. ಇನ್ನು ಬುಕ್‌ಮೈ ಶೋ ಟಿಕೆಟ್ ಬುಕ್ಕಿಂಗ್‌ನಲ್ಲಿ ಕೂಡ ಅದು ಸ್ಪಷ್ಟವಾಗಿ ಗೊತ್ತಾಗ್ತಿದೆ. ಸೋಮವಾರ ಚಿತ್ರಕ್ಕೆ ಬಹಳ ನಿರ್ಣಾಯಕವಾಗಿದೆ.