ಗೆಸ್‌ ಮಾಡಿ ಯಾರಿದು ಪುಟಾಣಿ ಕಂದ ?.. ಮತ್ತೆ ಬಾಲ್ಯಕ್ಕೆ ಹೋಗ್ಬರ್ದಾ ಅಂತ ಅನ್ಸುತ್ತೆ.. ಏನೂ ಅರಿಯದ ಮನಸ್ಸು, ಕಲ್ಮಶವಿಲ್ಲದ ಮನಸ್ಸು, ಮುಗ್ಧ ಮನಸ್ಸು... ಫೋನ್ ಇಲ್ಲ, ಕೇಬಲ್ ಕನೆಕ್ಷನ್ ಇಲ್ಲ, ಮಾಲ್ ಇಲ್ಲ, ವಿಡಿಯೋ ಗೇಮ್ಸ್ ಇಲ್ಲ. ಪಾರ್ಟಿ ಇಲ್ಲ, ಔಟಿಂಗ್ ಇಲ್ಲ, ಆದ್ರೂ ಬೆಸ್ಟ್ ಚೈಲ್ಡ್‌ವುಡ್ ಡೇಸ್.. ಎಷ್ಟು ಜನ ಈ ಮಾತನ್ನು ಒಪ್ಪುತ್ತೀರಾ? ಎಂದು ಕನ್ನಡದ ಖ್ಯಾತ, ನಟಿ ನಿರೂಪಕಿ ಶ್ವೇತಾ ಚೆಂಗಪ್ಪ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ನಟಿ ಶ್ವೇತಾ ಚೆಂಗಪ್ಪ ಬಾಲ್ಯದ ಫೋಟೊಗಳಿವು. ತಂದೆ- ತಾಯಿ ಹಾಗೋ ಸಹೋದರ ಸಾಗರ್ ಜೊತೆಗಿನ ಹಳೆ ನೆನಪುಗಳ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು, ಆಪ್ತರು ಲೈಕ್ಸ್, ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. 'ಸುಮತಿ' ಧಾರಾವಾಹಿ ಮೂಲಕ ಆಕೆ ಬಣ್ಣದಲೋಕಕ್ಕೆ ಪರಿಚಿತರಾಗಿದ್ದರು. ಬಳಿಕ ಬಂದ 'ಕಾದಂಬರಿ' ಧಾರಾವಾಹಿ ದೊಡ್ಡ ಬ್ರೇಕ್ ಕೊಟ್ಟಿತ್ತು.

ಮುಂದೆ ಸಾಲು ಸಾಲು ಧಾರಾವಾಹಿಗಳಲ್ಲಿ ಶ್ವೇತಾ ಮಿಂಚಿದ್ದರು. 'ವರ್ಷ' ಚಿತ್ರದಲ್ಲಿ ವಿಷ್ಣುವರ್ಧನ್ ಸಹೋದರಿಯಾಗಿ ಚಿತ್ರರಂಗಕ್ಕೆ ಬಂದರು. 'ತಂಗಿಗಾಗಿ' ಹಾಗೂ 'ವೇದ' ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದರು. ಈ ನಡುವೆ 'ಬಿಗ್‌ಬಾಸ್- 2' ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. 'ಯಾರಿಗುಂಟು ಯಾರಿಗಿಲ್ಲ' ಶೋ ಮೂಲಕ ನಿರೂಪಕಿ ಕೂಡ ಆಗಿ ಯಶಸ್ವಿಯಾದರು. 'ಮಜಾ ಟಾಕೀಸ್' ಶೋ ರಾಣಿಯಾಗಿ ಮೋಡಿ ಮಾಡಿದ್ದರು.