ಕಿಚ್ಚ ಸುದೀಪ್ ನಟನೆಯ 'ಬಿಲ್ಲ ರಂಗ ಬಾಷ' ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡ್ತಿದೆ. ಬಿಗ್‌ಬಾಸ್ ನಿರೂಪಣೆ ಜೊತೆ ಜೊತೆಗೆ ಕಿಚ್ಚ ಚಿತ್ರದಲ್ಲಿ ನಟಿಸ್ತಿದ್ದಾರೆ. 'ವಿಕ್ರಾಂತ್ ರೋಣ' ಬಳಿಕ ಅನೂಪ್ ಭಂಡಾರಿ ಚಿತ್ರವನ್ನು ಕಟ್ಟಿಕೊಡ್ತಿದ್ದಾರೆ. ಪ್ರೈಂ ಶೋ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗ್ತಿದೆ. ನಿರಂಜನ್ ರೆಡ್ಡಿ ಹಾಗೂ ಚೈತನ್ಯಾ ರೆಡ್ಡಿ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ.
ಭವಿಷ್ಯತ್ ಕಾಲದ ಕಥೆಯನ್ನು ಚಿತ್ರದಲ್ಲಿ ಹೇಳಲಾಗ್ತಿದೆ. ಕಾಲ್ಪನಿಕ ಲೋಕದಲ್ಲಿ ಒಂದು ಪ್ಯಾಂಟಸಿ ಕಥೆ ತೆರೆಮೇಲೆ ಬರಲಿದೆ. 'ಬಿಲ್ಲ ರಂಗ ಬಾಷ' ಆಗಿ ಮೂರು ಪಾತ್ರಗಳಲ್ಲಿ ಸುದೀಪ್ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಚಿತ್ರದ ಬಜೆಟ್, ಸ್ಕೇಲ್, ಮೇಕಿಂಗ್ ಬಗ್ಗೆ ನಿರ್ಮಾಪಕಿ ಚೈತನ್ಯಾ ರೆಡ್ಡಿ ತೆಲುಗು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ತೆಲುಗಿನಲ್ಲಿ 'ಹನುಮಾನ್' ರೀತಿಯ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟ ಸಂಸ್ಥೆ ಈಗ ನಾಲ್ಕೈದು ಸಿನಿಮಾಗಳನ್ನು ನಿರ್ಮಾಣ ಮಾಡ್ತಿದೆ. ಅದರಲ್ಲಿ "ಸಂಬರಲ ಯೇತಿ ಗಟ್ಟು" ಹಾಗೂ ಸುದೀಪ್ ನಟನೆಯ 'ಬಿಲ್ಲ ರಂಗ ಬಾಷ' ದೊಡ್ಡ ಸಿನಿಮಾಗಳು. ಯಾವುದಕ್ಕೂ ರಾಜಿ ಆಗದೇ ಬಹಳ ಅದ್ಧೂರಿಯಾಗಿ ಸಿನಿಮಾ ಕಟ್ಟಿಕೊಡ್ತಿದ್ದೀವಿ. ಮುಂದಿನ ವರ್ಷವೇ ಚಿತ್ರಗಳು ಬಿಡುಗಡೆ ಆಗಲಿವೆ ಎಂದು ಚೈತನ್ಯಾ ರೆಡ್ಡಿ ಹೇಳಿದ್ದಾರೆ. ಕನ್ನಡದಲ್ಲಿ ಇಷ್ಟು ದೊಡ್ಡ ಬಜೆಟ್ ಸಿನಿಮಾ ಮಾಡ್ತೀರಾ ಎಂದು ಕೆಲವರು ಕೇಳಿದ್ರು. ನಮಗೆ ಕಥೆ ಹಾಗೂ ತಂಡದ ಮೇಲೆ ನಂಬಿಕೆಯಿದೆ. ಹಾಗಾಗಿ ಮಾಡ್ತಿದ್ದೀವಿ ಎಂದಿದ್ದಾರೆ.
ಫೀಚರಿಸ್ಟಿಕ್ ಅಡ್ವೆಂಚರಸ್ ಫ್ಯಾಂಟಸಿ ಸಿನಿಮಾ ಇದು ಎಂದು ಚೈತನ್ಯಾ ರೆಡ್ಡಿ ತಿಳಿಸಿದ್ದಾರೆ. "ನನಗೆ ಮೈಥಾಲಜಿ, ಫ್ಯಾಂಟಸಿ ಸಿನ್ಮಾ ಅಂದ್ರೆ ಬಹಳ ಇಷ್ಟ. 'ಬಿಲ್ಲ ರಂಗ ಬಾಷ' ಸಿನಿಮಾ ಹಾಲಿವುಡ್ ರೇಂಜ್‌ನಲ್ಲಿ ಮೂಡಿ ಬರ್ತಿದೆ. ಚಿತ್ರೀಕರಣ ಭರದಿಂದ ಸಾಗ್ತಿದ್ದು 60%ರಷ್ಟು ದೃಶ್ಯಗಳನ್ನು ಸೆರೆಹಿಡಿದಿದ್ದೇವೆ. ಜೊತೆ ಜೊತೆ ಗ್ರಾಫಿಕ್ಸ್ ಕೆಲಸಗಳು ನಡೀತಿದೆ" ಎಂದು ಮಾಹಿತಿ ನೀಡಿದ್ದಾರೆ.
ಚಿತ್ರದಲ್ಲಿ ಸುದೀಪ್ ಮೂರು ಪಾತ್ರಗಳಲ್ಲಿ ನಟಿಸ್ತಿದ್ದಾರಾ ಎನ್ನುವ ಪ್ರಶ್ನೆಗೆ ನನಗೆ ಗೊತ್ತಿಲ್ಲ.. ಸದ್ಯಕ್ಕೆ 'ಬಿಲ್ಲ ಹಾಗೂ ರಂಗ' ಆಗಿ ದ್ವಿಪಾತ್ರದಲ್ಲಿ ನಟಿಸ್ತಿದ್ದಾರೆ. ಮುಂದೆ ಏನು ಎನ್ನುವುದನ್ನು ಕಾದು ನೋಡಬೇಕು ಎಂದು ಚೈತನ್ಯಾ ರೆಡ್ಡಿ ಹೇಳಿದ್ದಾರೆ. "ಕನ್ನಡದಲ್ಲಿ ಅಷ್ಟು ಬಜೆಟ್ ನಿಮ್ಗೆ ಹೇಗೆ ವರ್ಕ್ ಆಗುತ್ತೆ. 'ಕೆಜಿಎಫ್' ಹಿಟ್ ಆದ್ಮೇಲೆ ಪಾರ್ಟ್-2 ಬಜೆಟ್ ಹೆಚ್ಚಿಸಿದ್ರು, 'ಕಾಂತಾರ'-1 ಸಕ್ಸಸ್ ಕಂಡಮೇಲೆ ಮತ್ತೊಂದು ಭಾಗಕ್ಕೆ ಅಷ್ಟು ಬಜೆಟ್ ಹಾಕಿದ್ರು ಅಂತಿದ್ದಾರೆ. ನಾವು ಆ ಕಥೆಯನ್ನು ಕಥೆಯಾಗಿ ನೋಡ್ತಿದ್ದೀವಿ, ಬ್ಯುಸಿನೆಸ್ ಆಗಿ ಅಲ್ಲ. ಕಥೆ ಚೆನ್ನಾಗಿದೆ, ಹಾಲಿವುಡ್ ಸ್ಟೈಲ್ ಮೇಕಿಂಗ್ ಮಾಡ್ತಿದ್ದೀವಿ. ಹಾಗಾಗಿ ಬಜೆಟ್ ಜಾಸ್ತಿ ಆಗ್ತಿದೆ. ಇದೇ ಸಿನಿಮಾ ಹಾಲಿವುಡ್‌ನಲ್ಲಿ ಮಾಡಿದ್ರೆ ಬಿಲಿಯನ್ ಡಾಲರ್ ಬೇಕಾಗ್ತಿತ್ತು" ಎಂದು ಮಾಹಿತಿ ನೀಡಿದ್ದಾರೆ.
Knock knock… TFl nightmare loading😤🔥
— 𓆩♛ 𝙍𝙤𝙘𝙠𝙞𝙣𝙜 𝘼𝙨𝙝𝙪 ♛𓆪 (@Dudey212530) September 25, 2026
Super news a massive ₹300 Cr budget 💥💰 Kannada #BRBmovie 🍿
All the best, #KicchaSudeep Sir ❤️🔥#BRB Team 👏😎🔥🫵 pic.twitter.com/SDDGjz0d8r