ಬಿಗ್‌ಬಾಸ್ ಮನರಂಜನಾ ಕ್ಷೇತ್ರದಲ್ಲಿ ಚಿನ್ನದ ಮೊಟ್ಟೆ ಇಡುವ ಶೋ.. ವರ್ಷದಿಂದ ವರ್ಷಕ್ಕೆ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಇತ್ತೀಚೆಗೆ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಬಿಗ್‌ಬಾಸ್ ಶೋ ಒಮ್ಮೆಲೆ ಆರಂಭವಾಗಿದೆ. ಕನ್ನಡದಲ್ಲಿ ಸುದೀಪ್, ತೆಲುಗಿನಲ್ಲಿ ನಾಗಾರ್ಜುನ, ತಮಿಳಿನಲ್ಲಿ ವಿಜಯ್ ಸೇತುಪತಿ ಹಾಗೂ ಮಲಯಾಳಂನಲ್ಲಿ ಮೋಹನ್ ಲಾಲ್ ಶೋ ನಿರೂಪಣೆ ಮಾಡ್ತಿದ್ದಾರೆ. ಮೊದಲ ವಾರದ ಶೋ ದಾಖಲೆ ಬರೆದಿದೆ.

Endemol Shine India ನಿರ್ಮಾಣದ 'ಬಿಗ್ ಬಾಸ್ ಕನ್ನಡ' ಶೋ ಕನ್ನಡ ಮನರಂಜನಾ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. JioHotstarನ ಕನ್ನಡ ವಿಭಾಗದಲ್ಲಿ ನಂ.1 ಸ್ಥಾನ ಪಡೆದು ಸುದ್ದಿಯಲ್ಲಿದೆ. ವೀಕ್ಷಕರ ಪ್ರತಿಕ್ರಿಯೆ ಹೇಗಿದೆ ಎನ್ನುವುದು ಇದರಲ್ಲೇ ಗೊತ್ತಾಗುತ್ತಿದೆ. ಟೆಲಿವಿಷನ್, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕ್ರಮ ಚರ್ಚೆ ಹುಟ್ಟಾಕ್ಕಿದೆ.

ಬಿಗ್‌ಬಾಸ್ ಕನ್ನಡ ಶೋ ಸಾಧನೆ Banijay Asia ಸಂಸ್ಥೆಯ ಭಾಗವಾಗಿರುವ Endemol Shine Indiaಯ ಸಾಮರ್ಥ್ಯವನ್ನೂ ಮತ್ತೆ ಸಾಬೀತು ಮಾಡಿದಂತಾಗಿದೆ. Endemol Shine India, ಭಾರತದಲ್ಲಿ 'ಬಿಗ್ ಬಾಸ್' ಫ್ರಾಂಚೈಸಿಯನ್ನು ಜನಪ್ರಿಯ ಮಲ್ಟಿ-ಮಾರ್ಕೆಟ್ ಎಂಟರ್‌ಟೈನ್‌ಮೆಂಟ್ ಫ್ರಾಂಚೈಸಿಯಾಗಿ ರೂಪಿಸಿದೆ. ಸದ್ಯ JioHotstarನಲ್ಲಿ ಹಲವು ಭಾಷೆಗಳ ವಿಭಾಗಗಳಲ್ಲಿ 'ಬಿಗ್ ಬಾಸ್'ನಂ.1 ಸ್ಥಾನವನ್ನು ಪಡೆದುಕೊಂಡಿರುವುದು, ಈ ಫ್ರಾಂಚೈಸಿಗಿರುವ ಕ್ರೇಜ್ ಎಂಥದ್ದು ಎಂದು ತೋರಿಸುತ್ತದೆ. ಇನ್ನು ಕನ್ನಡ ಶೋ ನಂ.1 ಸ್ಥಾನಕ್ಕೇರುವುದು ಮತ್ತಷ್ಟು ಸಂತಸ ತಂದಿದೆ.