ಬಿಗ್‌ಬಾಸ್ ಮನೆಯಲ್ಲಿ ಕೆಲವರು ಸೌಮ್ಯವಾಗಿ ಇರ್ತಾರೆ. ಆದರೆ ಬಹುತೇಕರ ಅರಚಾಟ, ಕಿರುಚಾಟ, ಕಿರಿಕ್ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡ್ತಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಮಾರ್ಡ್ರನ್ ಮಹಾಕವಿ ಮಂಜ ಎಂದು ಹೇಳಿಕೊಂಡು ಮಂಜುನಾಥ್ ಅದೇ ಹಾದಿಯಲ್ಲಿದ್ದಾರೆ. ಬಿಗ್‌ಬಾಸ್ ಮನೆಗೆ 16ನೇ ಸ್ಪರ್ಧಿಯಾಗಿ ಅವರು ಮನೆ ಒಳಗೆ ಹೋಗಿದ್ದರು. ಮಂಜು ವರ್ತನೆ ಬಗ್ಗೆ ಮನೆಮಂದಿ ಮಾತ್ರವಲ್ಲ ವೀಕ್ಷಕರಲ್ಲಿ ಕೂಡ ಬೇಸರವಿದೆ.

ಅತಿಯಾದ ಆರ್ಭಟದಿಂದಲೇ ಮಂಜ ಎಲ್ಲರ ಗಮನ ಸೆಳೆಯೋ ಸಾಹಸ ಮಾಡ್ತಿದ್ದಾರೆ. ಕಾಮನ್‌ಮ್ಯಾನ್ ಮಂಜು ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬಿಗ್‌ಬಾಸ್ ಶೋ ಅವಕಾಶ ಪಡೆದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿ ಗುರ್ತಿಸಿಕೊಂಡವರು. ಪ್ರಾಸಬದ್ಧವಾಗಿ ಮಾತನಾಡುತ್ತಾ ತಮಗೆ ತಾವೇ 'ಮಾಡರ್ನ್ ಮಹಾಕವಿ ಮಂಜ' ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಇದೇ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್‌ ಖಾತೆ ಕೂಡ ಇದೆ.

ಮಂಜನ ಆರ್ಭಟ, ಸೌಂದರ್ಯ ಶೆಟ್ಟಿ ಜೊತೆಗಿನ ಕಿರಿಕ್ ಭಾರೀ ಚರ್ಚೆ ಆಗಿತ್ತು. ವೀಕೆಂಡ್ ಪಂಚಾಯ್ತಿ ವೇಳೆ ಸುದೀಪ್ ಕ್ಲಾಸ್ ತಗೊಂಡಿದ್ದರು. ಇದೆಲ್ಲದರ ನಡುವೆ ಇನ್ಮುಂದೆ ಕಾಮನ್‌ಮ್ಯಾನ್ ಮನೆ ಒಳಗೆ ಕಳುಹಿಸುವುದೇ ಬೇಡ ಎನ್ನುವಂತೆ ಸುದೀಪ್ ಮಾತನಾಡಿದ್ರು. ಅಷ್ಟರಮಟ್ಟಿಗೆ ಮಂಜ ಹಾಗೂ ಕಿರಣ್ ಎಲ್ಲರಿಗೂ ಕಸಿವಿಸಿ ಉಂಟುಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಮಂಜ ಪದೇ ಪದೆ ತಮ್ಮನ್ನು ಮಹಾಕವಿ ಎಂದು ಹೇಳಿಕೊಳ್ಳುವುದು ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ. ಮಹಾಕವಿ ಪದದ ಅರ್ಥ ಗೊತ್ತಾ ? ದಯವಿಟ್ಟು ಇನ್ನು ಮುಂದೆ ಮಂಜ ತಮ್ಮನ್ನು ತಾವು ಮಹಾಕವಿ ಎಂದು ಹೇಳಿಕೊಳ್ಳುವುದನ್ನು ನಿಲ್ಲಿಸುವಂತೆ ಹೇಳಿ ಎಂದು ವೀಕ್ಷಕರು ಮನವಿ ಮಾಡುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಕಾಮೆಂಟ್ ಮಾಡಿ ಸುದೀಪ್ ಹಾಗೂ ಬಿಗ್‌ಬಾಸ್ ಬಳಿಕ ಈ ಬಗ್ಗೆ ಕೇಳಿಕೊಳ್ಳುತ್ತಿದ್ದಾರೆ. "ಆ ಮಂಜನ ಬಿಗ್‌ಬಾಸ್ ಮನೆಯಲ್ಲಿ ಇಟ್ಕೋತೀರೋ, ಕಳಿಸ್ತಿರೋ ನಿಮಗೆ ಬಿಟ್ಟಿದ್ದು.. ಆದ್ರೆ, ಅವನ ಹೆಸರಿನ ಮಧ್ಯ ಇರೋ - 'ಮಹಾಕವಿ' ಅನ್ನೋದನ್ನ ದಯವಿಟ್ಟು ತೆಗಿಯೋಕೆ ಹೇಳಿ.. ಹಿಂತವರಿಂದ, ಕನ್ನಡ ದ ಹೆಸರಾಂತ ಎಷ್ಟೊಂದು ನಿಜವಾದ ಕವಿಗಳಿಗೆ ಅವಮಾನ ಆಗುತ್ತೆ.. ಚಿಕ್ಕ ಮಕ್ಳು ಕೂಡ ಈ ಶೋನ ನೋಡ್ತಾರೆ, ಅವ್ರಿಗೆ ಕವಿ ಅಂದ್ರೆ, ಈ ತರ ಇರ್ತಾರ ಅನ್ನೋ ಭಾವನೆ ಬರಬಾರದು" ಎಂದು ಮನವಿ ಮಾಡಿದ್ದಾರೆ.