ದೊಡ್ಡ ಮನೆ.. ಹತ್ತಾರು ಸ್ಪರ್ಧಿಗಳು. ಮನೆಯ ಮೂಲೆ ಮೂಲೆಯಲ್ಲಿ ಕ್ಯಾಮರಾಗಳು. ಹೊರಗಿನ ಪ್ರಪಂಚದ ಜೊತೆ ಸಂಪರ್ಕ ಇಲ್ಲ. ಮೊಬೈಲ್ ಫೋನ್ ಅಂತೂ ಇಲ್ಲವೇ ಇಲ್ಲ.. ಸ್ಪರ್ಧಿಗಳ ನಡುವೆ ಆಟ, ಜಗಳ, ಸ್ನೇಹ ಇದೆಲ್ಲಾ ಬಿಗ್‌ಬಾಸ್ ಶೋ ಕಾನ್ಸೆಪ್ಟ್. ಮನೆ ಒಳಗೆ ಹೋದ ಆರಂಭದಲ್ಲಿ ಸ್ಪರ್ಧಿಗಳು ಜಾಗೃತರಾಗಿ ಇದ್ದರೂ ದಿನ ಕಳೆದಂತೆ ಎಲ್ಲಾ ಮರೆತುಬಿಡ್ತಾರೆ.
ನಮ್ಮ ಸುತ್ತಾ ಕ್ಯಾಮರಾಗಳಿವೆ. ನಮ್ಮ ಪ್ರತಿ ನಡೆ, ಪ್ರತಿ ಮಾತು ರೆಕಾರ್ಡ್ ಆಗ್ತಿದೆ ಎನ್ನುವುದನ್ನು ಮರೆತು ನಡೆದುಕೊಳ್ಳುತ್ತಾರೆ. ಮಾತನಾಡ್ತಾರೆ. ಹೀಗೆ ಮಾತನಾಡುವಾಗ ಕೆಲವೊಮ್ಮೆ ಮೈಮರೆತುಬಿಡುವ ಸಾಧ್ಯತೆಯಿದೆ. ಟಿವಿಯಲ್ಲಿ ಪ್ರಸಾರ ಆಗುವ ಒಂದೂವರೆ ಗಂಟೆ ಎಪಿಸೋಡ್‌ನಲ್ಲಿ ಎಲ್ಲವೂ ಎಡಿಟ್ ಆಗುತ್ತದೆ. ಆದರೆ ಈಗ ಜಿಯೋ ಹಾಟ್‌ಸ್ಟರ್‌ನಲ್ಲಿ ಲೈವ್ ಪ್ರಸಾರ ಆಗುತ್ತದೆ. ಅಲ್ಲಿ ಕೂಡ ಬೇಡದ ವಿಚಾರಗಳನ್ನು ಎಡಿಟ್ ಮಾಡುತ್ತಾರೆ. ಕೆಲವೊಮ್ಮೆ ಕೆಲ ದೃಶ್ಯಗಳು ಮಿಸ್ ಆಗಿ ಪ್ರಸಾರ ಆಗುತ್ತದೆ. ಸದ್ಯ ಬಿಗ್‌ಬಾಸ್ ಮನೆಯಲ್ಲಿ ಯಶಸ್ ಹಾಗೂ ಗಾನವಿ ನಡುವಿನ ಸಂಭಾಷಣೆ ತುಣುಕು ವೈರಲ್ ಆಗ್ತಿದೆ.
ಯಶಸ್ ಒಂದು ಹಂತಕ್ಕೆ ಬಾಯ್ತಪ್ಪಿ ದ್ವಂದ್ವಾರ್ಥ ಬರುವಂತೆ ಮಾತನಾಡಿದ್ದಾರೆ. ಗಾನವಿಗೆ ಆರಂಭದಲ್ಲಿ ಅದು ಗಮನಕ್ಕೆ ಬರಲಿಲ್ಲ. ಬಳಿಕ ಮಾತಿನ ಒಳಾರ್ಥ ಅರ್ಥವಾಗಿ ನಕ್ಕು ಸುಮ್ಮನಾಗಿದ್ದಾರೆ. ನೀನು ಹಿಂಗೆ ಅಂತ ನನಗೆ ಗೊತ್ತಿರ್ಲಿಲ್ಲ ಎಂದು ಗಾನವಿ ಹೇಳಿದ್ದಾರೆ. ಏನ್ರೋ ಇದು ಏನೇನೋ ಮಾತಾಡ್ತಿದ್ದೀರಾ, ಇದು ಫ್ಯಾಮಿಲಿ ಶೋ ಕಣ್ರೋ ಸ್ವಲ್ಪ ನೋಡ್ಕೊಂಡು ಮಾತನಾಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಗಾನವಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ಸೋನಿಕಾ ಗೌಡ ಹಾಗೂ ಪ್ರಶಾಂತ್ ಗೌಡ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಮತ್ತಿಬ್ಬರು ಸ್ಪರ್ಧಿಗಳು. ಇನ್ನು ಎಮರ್ಜೆನ್ಸಿ ಎಕ್ಸಿಟ್ ಆಗಿದ್ದ ತಾಂಡವ್ ಕೂಡ ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಕ್ಯಾಪ್ಟನ್ ಕೂಡ ಆಗಿಬಿಟ್ಟಿದ್ದಾರೆ.
Lo edu family show kandro 😭#BBK13 pic.twitter.com/Tz1c8CWBaQ
— ರಾಜಾಹುಲಿ ᴿᵃᵐᵃʸᵃⁿᵃ ⁶ ¹¹ ²⁶ (@The_Tony_RSY) October 1, 2026