ಬಿಗ್‌ಬಾಸ್ ಕನ್ನಡ ಸೀಸನ್ 13 ಸಾಕಷ್ಟು ಸರ್‌ಪ್ರೈಸ್‌ಗಳಿಂದ ಕೂಡಿದೆ. 16 ಮಂದಿ ಸ್ಪರ್ಧಿಗಳು ಮನೆ ಒಳಗೆ ಹೋಗಿದ್ದರು. ಅದರಲ್ಲಿ ನಾಲ್ವರು ಈಗಾಗಲೇ ಹೊರ ಬಂದಿದ್ದಾರೆ. ಈ ಶನಿವಾರ ಒಂದೇ ದಿನ ಇಬ್ಬರು ಎಲಿಮಿನೇಟ್ ಆಗಿದ್ದು ವಿಶೇಷ. ಇದೀಗ ವೈಲ್ಡ್ ಕಾರ್ಡ್ ಎಂಟ್ರಿ ಬಗ್ಗೆ ಕುತೂಹಲ ಮೂಡಿದೆ.
ಕಿರುತೆರೆಯ ಬಹಳ ಜನಪ್ರಿಯ ಕಾರ್ಯಕ್ರಮ ಬಿಗ್‌ಬಾಸ್. ವೀಕ್ಷಕರನ್ನು ಎಂಗೇಜಿಂಗ್ ಆಗಿ ಇಟ್ಟುಕೊಳ್ಳುವುದಕ್ಕೆ ನಾನಾ ಕಸರತ್ತು ಮಾಡ್ತಾರೆ. ವೈಲ್ಡ್ ಕಾರ್ಡ್ ಎಂಟ್ರಿ ಎನ್ನುವುದು ಹೊಸದೇನು ಅಲ್ಲ. ಈ ಬಾರಿ ಯಾಕೋ ಶೋ ಅಷ್ಟಾಗಿ ಸದ್ದು ಮಾಡ್ತಿಲ್ಲ. ಹಾಗಾಗಿ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡಲಾಗ್ತಿದೆ. ಪ್ರಥಮಾ ಪ್ರಸಾದ್, ಓಂ ಪ್ರಕಾಶ್ ರಾವ್, ವೈಷ್ಣವಿ ಹಾಗೂ ಅವಿನಾಶ್ ಬಿಗ್‌ಬಾಸ್ ಜರ್ನಿ ಮುಗಿಸಿದ್ದಾರೆ.
ಇದೀಗ ನಟಿಯರಾದ ಸೋನಿಕಾ ಗೌಡ, ಗಾನವಿ ಗೌಡ ಹಾಗೂ ಹಾಸ್ಯನಟ ಪ್ರಶಾಂತ್ ಗೌಡ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಮನೆ ಒಳಗೆ ಹೋಗ್ತಾರೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ. ಕಲರ್ಸ್ ಕನ್ನಡ ವಾಹಿನಿಯ 'ಗಿಚ್ಚಿ ಗಿಲಿಗಿಲಿ' ಶೋ ಮೂಲಕ ಪ್ರಶಾಂತ್ ವೀಕ್ಷಕರಿಗೆ ಪರಿಚಿತರಾದವರು. 'ನಾನೇ ರಾಜ' ಎಂಬ ಚಿತ್ರದಲ್ಲಿ ಸೋನಿಕಾ ಗೌಡ ನಟಿಸಿದ್ದರು.
ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಗಾನವಿ ಗೌಡ ಗುರ್ತಿಸಿಕೊಂಡವರು. ಜೀ ಕನ್ನಡ ವಾಹಿನಿಯ 'ಹಳ್ಳಿ ಪವರ್' ಸೀಸನ್ 1 ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಈ ಮೂವರು ವೈಲ್ಡ್ ಕಾರ್ಡ್ ಎಂಟ್ರಿ ಪಡೆಯುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾಗಿದೆ.