ವೀಕೆಂಡ್ ಬಂದಿದೆ. ಬಿಗ್‌ಬಾಸ್ ಮನೆಯಲ್ಲಿ ಕಿಚ್ಚನ ಪಂಚಾಯ್ತಿ ಆರಂಭವಾಗಿದೆ. ಜೊತೆಗೆ ಈ ವಾರ ದೊಡ್ಮನೆ ಆಟ ಮುಗಿಸಿ ಹೊರಗಡೆ ಬರೋದು ಯಾರು ಎನ್ನುವ ಚರ್ಚೆ ಜೋರಾಗಿದೆ. ಸದ್ದಿಲ್ಲದೇ ಭಾನುವಾರ ಸಂಜೆ ಎಪಿಸೋಡ್ ಚಿತ್ರೀಕರಣ ಮುಗಿದಿದೆ. ವೀಕ್ಷಕರ ನೆಚ್ಚಿನ ಸ್ಪರ್ಧಿಯೇ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗ್ತಿದೆ.
ಈ ವಾರ ಬಿಗ್‌ಬಾಸ್ ಜರ್ನಿ ಮುಗಿಸಲು 6 ಮಂದಿ ನಾಮಿನೇಟ್ ಆಗಿದ್ದಾರೆ. ತಾಂಡವ್, ಗಾನವಿ, ಆಸಿಯಾ, ಜಗದೀಶ್, ಕಾವ್ಯಾ ಹಾಗೂ ಸೋನಿಕಾ ಪಟ್ಟಿಯಲ್ಲಿದ್ದಾರೆ. ಇನ್ನುಳಿದಂತೆ ಯಶಸ್, ಗಗನ್, ಧನುಷ್, ಪ್ರಶಾಂತ್, ಸೌಂದರ್ಯ ಮತ್ತು ಕಿರಣ್ ನಾಮಿನೇಷನ್ ತೂಗುಗತ್ತಿಯಿಂದ ಬಚಾವಾಗಿದ್ದಾರೆ. ಹೊಸ ವೈಲ್ಡ್ ಕಾರ್ಡ್ ಎಂಟ್ರಿ ಕುಮಾರಿ ಹಾಗೂ ಲಕ್ಷ್ಮಿ ಕೂಡ ಸೇಫ್ ಜೋನ್‌ನಲ್ಲಿದ್ದಾರೆ. ಸದ್ಯ ಮನೆಯಲ್ಲಿ 14 ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದು ಆ ಸಂಖ್ಯೆ ಇವತ್ತು(ಅಕ್ಟೋಬರ್ 18) 17ಕ್ಕೆ ಇಳಿಯಲಿದೆ.
ಕಾವ್ಯಾ ಈ ವಾರ ಎಲಿಮಿನೇಟ್ ಆಗಿದ್ದಾರೆ ಎಂದು ಗುಲ್ಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಿದೆ. ಅರೇ ಸೋನಿಕಾಗಿಂತ ಕಾವ್ಯಾ ಚೆನ್ನಾಗಿ ಆಡುತ್ತಿದ್ದಾರೆ. ಅದು ಹೇಗೆ ಎಲಿಮಿನೇಟ್ ಆಗ್ತಾರೆ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಕಾವ್ಯಾ ನಿಜಕ್ಕೂ ಹೊರಗೆ ಬಂದಿದ್ದಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು ಭಾನುವಾರದ ಸಂಚಿಕೆ ಪ್ರೋಮೊ ಸಹ ಹೊರ ಬಂದಿದೆ.
ಸೋನಿಕಾ ಕೇಳಿದ ಟಾಕ್ ಡಾರ್ಕ್ ಹ್ಯಾಂಡ್‌ಸಮ್ ಹುಡುಗ ನಾನೇ ಇದ್ದೀನಲ್ಲ ಎಂದು ಪ್ರಶಾಂತ್ ತಮಾಷೆ ಮಾಡಿದ್ದಾರೆ. ಅದನ್ನು ನೋಡಿ ಸುದೀಪ್ ಸೇರಿ ಮನೆ ಮಂದಿ ಎಲ್ಲಾ ಬಿದ್ದು ಬಿದ್ದು ನಕ್ಕಿದ್ದಾರೆ. ಇನ್ನು ಈ ವಾರ ಯಶಸ್ ಉತ್ತಮ ಹಾಗೂ ಕಿರಣ್ ಕಳಪೆ ಪಟ್ಟ ಅಲಂಕರಿಸಿದ್ದಾರೆ.
ಈ 'Tall Dark Handsome' ನಿಮ್ಗೆ ಓಕೆನಾ?
— Colors Kannada (@ColorsKannada) October 18, 2026
Super Sunday With ಬಾದ್ಷಾ ಸುದೀಪ | ಇಂದು ರಾತ್ರಿ 9
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ - https://t.co/96hibtGUwq #BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo pic.twitter.com/t7QZ2oOJlU