ಬಿಗ್‌ಬಾಸ್ ಶೋ ಕೆಲವೊಮ್ಮೆ ಅತಿರೇಕಕ್ಕೆ ಹೋಗಿಬಿಡುತ್ತದೆ. ಸ್ಪರ್ಧಿಗಳು ಆಟದ ಭರದಲ್ಲಿ ಕಿರಿಕ್ ಮಾಡಿಕೊಂಡು ನಡೆದುಕೊಳ್ಳುವ ರೀತಿ, ಆಡುವ ಮಾತುಗಳು ಬೇಸರ ತರಿಸುತ್ತದೆ. ಕೆಲವೊಮ್ಮೆ ಅಂತಹ ಅಶ್ಲೀಲ ಪದಗಳಿಗೆ ಬೀಪ್ ಹಾಕುವುದು ಉಂಟು. ಆದರೆ ಕೆಲವೊಮ್ಮೆ ವೈಯಕ್ತಿಕ ನಿಂದನೆ ಎಂಥಹವರಿಗೂ ನೋವುಂಟು ಮಾಡುತ್ತದೆ. ಇತ್ತೀಚೆಗೆ ಶೋನಲ್ಲಿ ಗಾನವಿ ಆಡಿದ ಆ ಮಾತಿಗೆ ಪಂಚಾಯ್ತಿಯಲ್ಲಿ ಸುದೀಪ್ ಕಣ್ಣೀರು ಹಾಕಿದರು.
'ರಾಕ್ಷಸರು ಮತ್ತು ಗಂಧರ್ವರು' ಟಾಸ್ಕ್ ವೇಳೆ ಗಗನ್ ತಾಯಿ ಬಗ್ಗೆ ಗಾನವಿ ಆಡಿದ ಮಾತುಗಳು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅಷ್ಟು ಕೇವಲವಾಗಿ ಗಾನವಿ ನಾಲಿಗೆ ಹರಿಬಿಟ್ಟಿದ್ದರು. ಇದಕ್ಕೆ ಮನನೊಂಡು ಗಗನ್ "ನನಗೆ ಆತ್ಮಗೌರವವೇ ಮುಖ್ಯ, ಬೇಕಿದ್ದರೆ ನಾನು ಶೋ ಬಿಟ್ಟು ಹೊರಡುತ್ತೇನೆ" ಎಂದು ಭಾವುಕರಾಗಿದ್ದರು. ಇದೇ ವಿಚಾರದ ಬಗ್ಗೆ ವೀಕೆಂಡ್ ಪಂಚಾಯ್ತಿಯಲ್ಲಿ ಚರ್ಚೆ ನಡೀತು.
ಸುದೀಪ್ ಕಣ್ಣೀರು
ಸದಾ ಲವಲವಿಕೆಯಿಂದ ವೀಕೆಂಡ್ ಪಂಚಾಯ್ತಿ ನಡೆಸುವ ಕಿಚ್ಚ ತಮಾಷೆಯ ಜೊತೆಗೆ ತಪ್ಪು ಮಾಡಿದವರಿಗೆ ಮಾತಿನ ಚಾಟಿ ಬೀಸುತ್ತಾರೆ. ಆದರೆ ಗಗನ್ ತಾಯಿ ಬಗ್ಗೆ ಗಾನವಿ ಆಡಿದ ಮಾತುಗಳಿಗೆ ಸುದೀಪ್ ಭಾವುಕರಾಗಿ ಅತ್ತುಬಿಟ್ಟರು. "ಗಗನ್ ಅವ್ರ ತಾಯಿಗೆ ನಾನು ಕ್ಷಮೆ ಕೇಳ್ತೀನಿ.. ಅಮ್ಮನನ್ನು ಕಳೆದುಕೊಂಡಿದ್ದೀನಿ ನಾನು.. ತಾಯಿ ಬಗ್ಗೆ ಮಾತಾಡ್ತಾರೆ.. ಅವ್ರ ತಾಯಿನ ಕರೆಸಿ, ನಾನು ಕ್ಷಮೆ ಕೇಳ್ತೀನಿ.. ನಾವು ಯಾರಿಗೂ ಅವಮಾನ ಮಾಡಲು ಶೋ ಮಾಡ್ತಿಲ್ಲ.. ತಾಯಂದಿರ ವಿಚಾರ ಯಾಕೆ ತರ್ತೀರಾ, ನಿಮ್ಮನ್ನು ಹೆತ್ತಿದ್ದೇ ತಪ್ಪಾ.. ಅವಮಾನ ಮಾಡುವ ಮುನ್ನ ಯಾರಿಗೆ ಅವಮಾನ ಮಾಡ್ತೀವಿ ಅಂತ ಯೋಚ್ನೆ ಮಾಡಿ ಮಾತಾಡಿ.. ಬಳಿಕ ಕ್ಷಮಿಸಿ ಅಂದ್ರೆ ಹೇಗೆ" ಸುದೀಪ್ ಭಾವೋದ್ವೇಗಕ್ಕೆ ಒಳಗಾದರು.
ಮಂಜು ಎಲಿಮಿನೇಟ್ ?
ಮಾಡ್ರನ್ ಮಹಾಕವಿ ಮಂಜ ಎಂದೇ ಬಿಗ್‌ಬಾಸ್ ಮನೆಯಲ್ಲಿ ಹಾರಾಡುತ್ತಿರುವ ಮಂಜ ಈ ವಾರ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗ್ತಿದೆ. ಮನೆಗೆ ಬಂದ ಮೊದಲ ದಿನದಿಂದ ಕೂಗಾಟ, ಕಿರುಚಾಟದ ಮೂಲಕವೇ ಆತ ಸದ್ದು ಮಾಡಿದ್ದು ಗೊತ್ತೇಯಿದೆ. 'ರಾಕ್ಷಸರು ಮತ್ತು ಗಂಧರ್ವರು' ಟಾಸ್ಕ್ ಮಧ್ಯೆ ಮಂಜ ಕೂಡ ಅಶ್ಲೀಲ ಪದಗಳನ್ನು ಬಳಸಿದ್ದು ವೀಕ್ಷಕರ ಬೇಸರಕ್ಕೆ ಕಾರಣವಾಗಿತ್ತು. ಹಾಗಾಗಿ ಆತ ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾನೆ ಎನ್ನಲಾಗ್ತಿದೆ.
Your respect and love for your parents taught me a beautiful lesson, Boss. 😭 I’ve learned so much from you, not just as a fan, but as a person. Love you, Boss! ❤️#KicchaSudeep #BBK13 pic.twitter.com/eDyYXlxtfB
— Bhairava (@Kiccha__07) October 10, 2026